ಪುಣೆ :
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ದಾಖಲು ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯದ ಲಯಕ್ಕೆ ಮರಳಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ ನೀಡಿರುವ ಫಲವಾಗಿ ತಂಡಕ್ಕೆ ಗೆಲುವು ದಕ್ಕಿದೆ.ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಪಿಎಸ್‌ಐ ನೇಮಕಾತಿ ಅಕ್ರಮ: ತರಬೇತಿ ಪಡೆಯುತ್ತಿದ್ದ ಪಿಎಸ್‌ಐ ಸಿಐಡಿ ವಶಕ್ಕೆ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡಕ್ಕೆ ನಾಯಕ ಪಫ್ ಡುಪ್ಲೆಸಿ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 7.2 ಓವರ್ಗಳಲ್ಲಿ 62ರನ್ ಪೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಆದರೆ, 38ರನ್ಗಳಿಕೆ ಮಾಡಿದ್ದ ವೇಳೆ ಡುಪ್ಲೆಸಿ ಮೊಯಿನ್ ಅಲಿ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮೈದಾನಕ್ಕೆ ಬಂದ ಮ್ಯಾಕ್ಸ್ವೆಲ್ ಕೊಹ್ಲಿ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ 3ರನ್ಗಳಿಕೆ ಮಾಡಿದ್ದ ವೇಳೆ ರನೌಟ್ ಆದರು. ಇದರ ಬೆನ್ನಲ್ಲೇ ಕೊಹ್ಲಿ ಕೂಡ ಮೊಯಿನ್ ಅಲಿ ಓವರ್ನಲ್ಲಿ ಔಟಾದರು.
ಸ್ನೇಹಿತೆಯ ಮದುವೆಗೆ ತೆರಳಿ ವಿವಾದಕ್ಕೀಡಾದ ರಾಹುಲ್ ಗಾಂಧಿ: ಇವರು ಯಾರು ಗೊತ್ತೇ?
ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ : ವಿರಾಟ್ ಕೊಹ್ಲಿ ವಿಕೆಟ್ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಮಹಿಪಾಲ್ ಸ್ಫೋಟಕ 42ರನ್, ಪಟಿದಾರ್ 21 ಹಾಗೂ ಕಾರ್ತಿಕ್ 26ರನ್ಗಳಿಕೆ ಮಾಡಿ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 173ರನ್ಗಳಿಕೆ ಮಾಡುವಂತೆ ಮಾಡಿದರು. ಸಿಎಸ್ಕೆ ಪರ ಕಮ್ಬ್ಯಾಕ್ ಹೀರೋ ಮೊಯೀನ್ ಅಲಿ 28ಕ್ಕೆ2, ತೀಕ್ಷಣ 27ಕ್ಕೆ 3 ಮತ್ತು ಪ್ರೆಟೋರಿಯಸ್ 42ಕ್ಕೆ 1 ವಿಕೆಟ್ ಪಡೆದರು.
ತಕ್ಷಣದಿಂದ ಜಾರಿಗೆ ಬರುವಂತೆ ʼರೆಪೊ ದರ 40 bps ಹೆಚ್ಚಳʼ : RBI ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ
ಸಿಎಸ್ ಕೆ ಇನ್ನಿಂಗ್ಸ್ : 174ರನ್ಗಳ ಗುರಿ ಬೆನ್ನತ್ತಿದ ಸಿಎಸ್ಕೆ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಗಾಯಕ್ವಾಡ್, ಕಾನ್ವೆ ಜೋಡಿ ಮೊದಲ ವಿಕೆಟ್ನಷ್ಟಕ್ಕೆ 6.4 ಓವರ್ಗಳಲ್ಲಿ 54ರನ್ಗಳಿಕೆ ಮಾಡಿತು. ಆದರೆ, 28ರನ್ಗಳಿಕೆ ಮಾಡಿದ್ದ ಋತುರಾಜ್, ಅಹ್ಮದ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರಾಬಿನ್ ಉತ್ತಪ್ಪ(1) ಮ್ಯಾಕ್ಸ್ವೆಲ್ ಓವರ್ನಲ್ಲಿ ಔಟಾದರು.
ಉತ್ತಮವಾಗಿ ಆಡ್ತಿದ್ದ ರಾಯುಡು ಕೂಡ 10ರನ್ಗಳಿಕೆ ಮಾಡಿ ಮ್ಯಾಕ್ಸ್ವೆಲ್ ಬಲೆಗೆ ಬಿದ್ದರು. ಇದಾದ ಬಳಿಕ ಒಂದಾದ ಕಾನ್ವೆ ಹಾಗೂ ಮೊಯಿನ್ ಅಲಿ ತಂಡಕ್ಕೆ ನೆರವಾದರು. ಆದರೆ, 56ರನ್ಗಳಿಕೆ ಮಾಡಿದ್ದ ಕಾನ್ವೆ ವಿಕೆಟ್ ಪಡೆದುಕೊಳ್ಳುವಲ್ಲಿ ಹಸರಂಗ ಯಶಸ್ವಿಯಾದರು. ಇದರ ಬೆನಲ್ಲೇ ಜಡೇಜಾ 3ರನ್, ಧೋನಿ 2ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 160 ರನ್ಗಳಿಕೆ ಮಾಡಿದ್ದು, 13 ರನ್ಗಳಿಂದ ಸೋಲು ಕಂಡಿತು. ಆರ್ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್, ಮ್ಯಾಕ್ಸವೆಲ್ 2 ವಿಕೆಟ್ ಪಡೆದರೆ, ಅಹ್ಮದ್, ಹಸರಂಗ ಹಾಗೂ ಹ್ಯಾಜಲ್ವುಡ್ ತಲಾ 1 ವಿಕೆಟ್ ಪಡೆದುಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
