ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘RRR’ ನಾಗಾಲೋಟ: 1 ಸಾವಿರ ಕೋಟಿ ರೂ. ಗಳಿಕೆಯತ್ತ ದಾಪುಗಾಲು

RRR :

ಜೂನಿಯರ್ ಎನ್‌.ಟಿ.ಆರ್. ಮತ್ತು ರಾಮ್ ಚರಣ್ ಅಭಿನಯದ ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘RRR’ ಮಾರ್ಚ್‌ನಲ್ಲಿ ಥಿಯೇಟರ್‌ ಗಳಿಗೆ ಬಂದಾಗಿನಿಂದ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳೀಪಟ ಮಾಡಿದೆ. ಈಗ 1000 ಕೋಟಿ ರೂ.ಗಡಿಗೆ ತಲುಪಿದೆ. ಈ ವಾರಾಂತ್ಯದಲ್ಲಿ 1 ಸಾವಿರ ಕೋಟಿ ರೂ.ಕಲೆಕ್ಷನ್ ಸಾಧಿಸುವ ನಿರೀಕ್ಷೆಯಿದೆ.

ತೆಲಂಗಾಣದ ನಿಜಾಮ್ ಏರಿಯಾದಲ್ಲಿ 100 ಕೋಟಿ ಷೇರನ್ನು ದಾಟುವಲ್ಲಿ ಯಶಸ್ವಿಯಾಗಿದ್ದರಿಂದ ಚಿತ್ರವು ನಿರೀಕ್ಷೆಗಿಂತಲೂ ಯಶಸ್ವಿಯಾಗಿದೆ. ನಿಜಾಮ್‌ ನಲ್ಲಿ ಈ ಅಪರೂಪದ ಸಾಧನೆ ಮಾಡಿದ ಮೊದಲ ಚಿತ್ರ ‘RRR’.

2 ಸಲ ಸೋತವರಿಗೆ ಬೇಡ ಟಿಕೆಟ್; ಹೊಸಬರಿಗೆ ಅವಕಾಶ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಒತ್ತಾಯ

ಮಾರ್ಚ್ 25 ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡ 12 ದಿನಗಳಲ್ಲಿ 939.41 ಕೋಟಿ ರೂ. ಸಂಗ್ರಹಿಸಿದೆ. 13 ನೇ ದಿನದಲ್ಲಿ 10 ಕೋಟಿ ರೂ.ಗೂ ಹೆಚ್ಚು ಹಕಲೆಕ್ಷನ್ ಮಾಡಿದೆ. ಆ ಮೂಲಕ ಒಟ್ಟು ಕಲೆಕ್ಷನ್ 950 ಕೋಟಿ ರೂ. ಈ ಆಧಾರದಲ್ಲಿ ಈ ವಾರಾಂತ್ಯದ ಅಂತ್ಯದ ವೇಳೆಗೆ ‘RRR’ 1000 ಕೋಟಿ ರೂ. ಗಡಿ ದಾಟಲಿದೆ.

ವಿಜಯೇಂದ್ರ ಪ್ರಸಾದ್ ಬರೆದ ಮಹಾಕಾವ್ಯದ ಈ ಕತೆಯನ್ನು ರಾಜಮೌಳಿ ಸಿನಿಮಾ ರೂಪಕ್ಕೆ ತಂದಿದ್ದಾರೆ. ಈ ಚಿತ್ರವನ್ನು 450 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಎಂಎಂ ಕೀರವಾಣಿ ಸಂಗೀತ, ಕೆಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap