ಯೂಕ್ರೇನ್​ ಶಾಲೆ ಮೇಲೆ ರಷ್ಯಾ ಬಾಂಬ್​: ಮಕ್ಕಳು ಸೇರಿ 60 ಜನ ಮೃತಪಟ್ಟಿರುವ ಶಂಕೆ

ಕಿಯೇವ್​/ಮಾಸ್ಕೋ: 

ಪೂರ್ವ ಯೂಕ್ರೇನ್​ನ ಲುಹಾನ್​ಸ್ಕ್​ ಪ್ರಾಂತ್ಯದ ಬಿಲೋಹೊರಿವ್ಕಾ ಎಂಬಲ್ಲಿನ ಶಾಲೆಯ ಮೇಲೆ ರಷ್ಯಾ ಸೇನೆ ನಡೆಸಿದ ಬಾಂಬ್​ ದಾಳಿಗೆ ಮಕ್ಕಳು ಸೇರಿ 60 ಜನ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರನ್ನು ಸ್ಥಳದಿಂದ ಪಾರುಮಾಡಲಾಗಿದ್ದು, ಏಳು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್​ ಸೆರ್​ಹಿಯ್​ ಗೈಡಾಯ್​ ಭಾನುವಾರ ತಿಳಿಸಿದ್ದಾರೆ.

ಶಾಲೆಯನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸಲಾಗಿತ್ತು. ಅಲ್ಲಿ ಮಕ್ಕಳು ಸೇರಿ 90ಕ್ಕೂ ಹೆಚ್ಚು ಜನ ಆಶ್ರಯ ಪಡೆದುಕೊಂಡಿದ್ದರು. ಭಾನುವಾರ ಅಪರಾಹ್ನ ರಷ್ಯಾ ಸೇನೆ ಈ ಶಾಲೆಯ ಮೇಲೆ ಬಾಂಬ್​ ದಾಳಿ ನಡೆಸಿತು. ಸ್ಫೋಟದಿಂದ ಉಂಟಾದ ಬೆಂಕಿ ನಾಲ್ಕು ಗಂಟೆ ಕಾಲ ಹೊತ್ತಿ ಉರಿದಿದೆ ಎಂದು ಗೈಡಾಯ್​ ವಿವರಿಸಿದರು.

IPL 2022  ಆರ್‌ಸಿಬಿ, ಸಿಎಸ್‌ಕೆ ಗೆಲುವಿನ ನಂತರ ಅಂಕಪಟ್ಟಿ ಹೇಗಿದೆ!

ನಾಗರಿಕರು ಟಾರ್ಗೆಟ್​: ರಷ್ಯಾ ಸೇನೆ ವಿಶೇಷ ಸೇನಾ ಕಾರ್ಯಾಚರಣೆ ಹೆಸರಿನಲ್ಲಿ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ. ಮರಿಯುಪೋಲ್​ ಸುತ್ತಮುತ್ತ ನಾಗರಿಕರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದಕ್ಕೆ ಸಾಕ್ಷ$್ಯಗಳು ಬಹಿರಂಗವಾಗಿವೆ ಎಂದು ಯೂಕ್ರೇನ್​ ಮತ್ತು ಅದರ ಪಾಶ್ಚಾತ್ಯ ಮಿತ್ರ ರಾಷ್ಟ್ರಗಳು ಆರೋಪಿ ಸಿವೆ. ಆದರೆ, ಈ ಆರೋಪವನ್ನು ಮಾಸ್ಕೋ ನಿರಾಕರಿಸಿದೆ.

ಮರಿಯುಪೋಲ್​ ವಶಕ್ಕೆ ಯತ್ನ ಯೂಕ್ರೇನ್​ನ ಬಂದರು ನಗರ ಮರಿಯುಪೋಲ್​ ಬಹುತೇಕ ನಾಶವಾಗಿದ್ದು, ರಷ್ಯಾ ವಶದಲ್ಲಿದೆ. ಈ ನಗರದ ಸ್ಟೀಲ್​ ಟಕ ಆವರಣದಲ್ಲಿ ನಾಗರಿಕರು ಮತ್ತು ಯೂಕ್ರೇನ್​ ಸೇನೆ ಆಶ್ರಯ ಪಡೆದುಕೊಂಡಿದ್ದು, ರಷ್ಯಾ ಸೇನೆಗೆ ತೀವ್ರ ಪ್ರತಿರೋಧ ತೋರಿದ್ದಾರೆ. ಇವರನ್ನೆಲ್ಲ ಹೊರ ಹಾಕಿ ಅಥವಾ ಶರಣಾಗುವಂತೆ ಮಾಡಿ ಮರಿಯುಪೋಲ್​ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆ ಪ್ರಯತ್ನ ಮುಂದುವರಿಸಿದೆ.

ನ್ಯಾಯಾಲಯದ ಆದೇಶವನ್ನು, ಎಲ್ಲರೂ ಗೌರವಿಸಬೇಕು : ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ

ಸೇನಾ ನೆರವು ದಾಳಿ ನಡೆಸುತ್ತಿರುವ ರಷ್ಯಾ ವನ್ನು ಎದುರಿಸುವುದಕ್ಕೆ ಅಗತ್ಯವಾದ ಹೆಚ್ಚುವರಿ ಸೇನಾ ನೆರವು ನೀಡುವುದನ್ನು ಬ್ರಿಟನ್​ ಖಾತರಿಪಡಿಸಿದೆ. 1.3 ಶತಕೋಟಿ ಪೌಂಡ್ಸ್​ ಸೇನಾ ನೆರವು ನೀಡುವುದಾಗಿ ಬ್ರಿಟನ್​ ಘೋಷಿಸಿದೆ. ಎರಡನೇ ವಿಶ್ವ ಮಹಾಯುದ್ಧದಲ್ಲಿ 1945 ಮೇ 8ರಂದು ಗೆಲುವು ಸಾಧಿಸಿದ ನೆನಪಿಗಾಗಿ ವಿಕ್ಟರಿ ಇನ್​ ಯುರೋಪ್​ ಡೇ ಆಚರಿಸಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಜಿ7 ನಾಯಕರು ವರ್ಚುವಲ್​ ಆಗಿ ಮಾತುಕತೆ ನಡೆಸಿದ ವೇಳೆ, ಬ್ರಿಟನ್​ ಈ ನೆರವನ್ನು ಖಾತರಿಪಡಿಸಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap