ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಸ್ಥಗಿತಗೊಳಿಸಲಿದೆಯೇ…….?

ದೆಹಲಿ

   2025ರ ನವೆಂಬರ್‌ 21ರಿಂದ ಅಂದರೆ ಶುಕ್ರವಾರದಿಂದಲೇ ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಬಂದ್‌  ಆಗಲಿದೆಯೇ? ನಡು ಸಮುದ್ರದಲ್ಲಿ 11 ಹಡಗಗುಗಳು ಅತಂತ್ರವಾಗಿದೆಯೇ? ಹಾಗಾದರೆ ಏನಾಗಲಿದೆ? ಮುಂತಾದ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಹಲವರಲ್ಲಿ ಗೊಂದಲ, ಆತಂಕವೂ ಕಾಡುತ್ತಿದೆ. ಹಾಗಾದರೆ ವಾಸ್ತವ ಏನು? ನೋಡೋಣ ಬನ್ನಿ.

   ಮೊದಲನೆಯದಾಗಿ ರಷ್ಯಾದಿಂದ ಭಾರತಕ್ಕೆ ನವೆಂಬರ್‌ 21ರಿಂದ ಸಂಪೂರ್ಣವಾಗಿ ಕಚ್ಚಾ ತೈಲ ಬಂದ್‌ ಆಗುವುದಿಲ್ಲ. ಆದರೆ ರಿಲಯನ್ಸ್‌ ಇಂಡಸ್ಟ್ರೀಸ್‌, ಭಾರತ್‌ ಪೆಟ್ರೋಲಿಯಂ, ಹಿಂದೂಸ್ತಾನ್‌ ಪೆಟ್ರೋಲಿಯಂ, ಎಂಆರ್‌ಪಿಎಲ್‌, ಎಚ್‌ಪಿಸಿಎಲ್‌ನಂತಹ ಪ್ರಮುಖ ತೈಲ ಸಂಸ್ಕರಣಾ ವಲಯದ ಕಂಪನಿಗಳಿಗೆ ಕಚ್ಚಾ ತೈಲ ಪೂರೈಕೆ ಕಡಿಮೆಯಾಗುವ ಸಾಧ್ಯತೆ ಇದೆ. ಭಾರತದ ತೈಲ ಕಂಪನಿಗಳು ಈಗಾಗಲೇ ರಷ್ಯಾದ ಎರಡು ತೈಲ ಕಂಪನಿಗಳಿಂದ ನೇರವಾಗಿ ತೈಲ ಖರೀದಿಯನ್ನು ಸ್ಥಗಿತಗೊಳಿಸಿವೆ. 

   ಅಮೆರಿಕವು ರಷ್ಯಾದ ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್‌ ವಿರುದ್ಧ ನಿರ್ಬಂಧವನ್ನು ನವೆಂಬರ್‌ 21ರಿಂದ ಅನ್ವಯವಾಗುವಂತೆ ಜಾರಿಗೊಳಿಸಿವೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾದ ತೈಲ ಸಂಸ್ಕರಣೆ ಕಂಪನಿಗಳು ರಷ್ಯಾದ ಈ ಎರಡು ಕಂಪನಿಗಳಿಂದ ಕಚ್ಚಾ ತೈಲ ಖರೀದಿಯನ್ನು ಗಣನೀಯವಾಗಿ ತಗ್ಗಿಸಿವೆ.

   11 ಹಡಗುಗಳು ಭಾರತವನ್ನು ಡೆಡ್‌ ಲೈನ್‌ ಒಳಗೆ ತಲುಪಿಲ್ಲ ಎಂಬ ವರದಿಗಳು ಇವೆ. ಆದರೆ ದೃಢಪಟ್ಟಿಲ್ಲ. ಗಡುವಿನ ಒಳಗೆ ತಲುಪದಿದ್ದರೆ ಬೇರೆ ಕಡೆಗೆ ಹೋಗಬಹುದು.

   ಹಾಗಾದರೆ ಭಾರತದ ಮೇಲೆ ಪರಿಣಾಮ ಏನಾಗಬಹುದು? ಭಾರತ ಈಗಾಗಲೇ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ನವೆಂಬರ್‌ನಲ್ಲಿ 60% ಇಳಿಕೆ ಆಗಿದೆ. ರಷ್ಯಾದ ಅವಲಂಬನೆಯನ್ನು ಕಡಿಮೆ ಮಾಡಲು ಬಯಸಿದೆ. ಇದು ಅಮೆರಿಕದ ಟಾರಿಫ್‌ ಮತ್ತು ನಿರ್ಬಂಧಗಳ ಒತ್ತಡಕ್ಕೆ ಎಂಬುದಕ್ಕಿಂತಲೂ, ಹೆಚ್ಚಾಗಿ ದೀರ್ಘಕಾಲೀನ ಕಾರ್ಯತಂತ್ರದ ಭಾಗವಾಗಿ ಜಾಣ್ಮೆಯ ನಡೆಯನ್ನು ಅನುಸರಿಸುತ್ತಿದೆ. ಕೇವಲ ಭಾರತ ಮಾತ್ರವಲ್ಲದೆ, ಚೀನಾ ಕೂಡ ಇತ್ತೀಚೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿ ಕಡಿಮೆ ಮಾಡಿದೆ.

   ಹೀಗಿದ್ದರೂ, ಇದೆಲ್ಲವೂ ತಾತ್ಕಾಲಿಕ. 2026ರಲ್ಲಿ ಪರ್ಯಾಯ ಮಾರ್ಗಗಳ ಮೂಲಕ ಭಾರತವು ರಷ್ಯಾದ ತೈಲವನ್ನು ಖರೀದಿಸುವ ಸಾಧ್ಯತೆಯೂ ಇದ್ದೇ ಇರುತ್ತದೆ.

Recent Articles

spot_img

Related Stories

Share via
Copy link