ಸೇಫ್‌ ಸಿಟಿ ಯೋಜನೆಗೆ ಅಮಿತ್‌ ಷಾರಿಂದ ಚಾಲನೆ

ಬೆಂಗಳೂರು

      ಕರ್ನಾಟಕ ಸರ್ಕಾರದ ಗೃಹ ಇಲಾಖೆ ಆಯೋಜಿಸಿದ್ದ ಸೇಫ್ ಸಿಟಿ ಬೆಂಗಳೂರು ಯೋಜನೆಯ ಮೊದಲ ಹಂತದ ಕಾಮಗಾರಿಗೆ ಚಾಲನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದರು.

    ಮುಂಬರುವ ವರ್ಷಗಳಲ್ಲಿ ಭಾರತದ ಪೊಲೀಸ್ ವ್ಯವಸ್ಥೆಯು ವಿಶ್ವದ ಅತಿದೊಡ್ಡದಾದ ವ್ಯವಸ್ಥೆಯಾಗಲಿದೆ ಎಂದು ಹೇಳಿರುವ ಅವರು ಇದಕ್ಕೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಸಾಮರ್ಥ್ಯಗಳನ್ನು ಪಡೆಯಬೇಕು. 632 ಕೋಟಿ ರೂ.ಗಳ ಯೋಜನೆಯಡಿ ನಗರವನ್ನು ಮಹಿಳೆಯರಿಗೆ ಸುರಕ್ಷಿತಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಾವಿರಾರು ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸ್ಥಾಪನೆ, ರಾಣಿ ಚೆನ್ನಮ್ಮ ಪಡೆ ಪಡೆ ರಚನೆ ಸೇರಿವೆ.

    ಅಪರಾಧಗಳನ್ನು ತಡೆಗಟ್ಟಲು ಮತ್ತು ತ್ವರಿತವಾಗಿ ತನಿಖೆ ನಡೆಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಶಾ ಪೊಲೀಸರಿಗೆ ಸೂಚಿಸಿದರು. ಅಲ್ಲದೆ ಅಕ್ರಮ ಮಾದಕ ದ್ರವ್ಯಗಳ ವಿರುದ್ಧ ತೀವ್ರ ನಿಯಂತ್ರಣ, ನ್ಯಾಯ ವಿಜ್ಞಾನದ ರಾಷ್ಟ್ರೀಯ ಜಾಲವನ್ನು ರೂಪಿಸಲು ಮತ್ತು ಯುವಜನರಲ್ಲಿ ಡಿಜಿಟಲ್ ಜಾಗೃತಿ ಮೂಡಿಸಲು ಅವರು ಕರೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link