ಕೇರ್‌ ಟೇಕರ್‌ ಗೆ ಉದ್ಯಮಿ ನೀಡುತ್ತೇನೆ ಎಂದ ಸಂಬಳ ಎಷ್ಟು ಗೊತ್ತ….?

ಬೆಂಗಳೂರು

     ಅಮೆರಿಕದಲ್ಲಿ ಭಾರತೀಯ ಮೂಲದ ಖ್ಯಾತ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರು ತಮ್ಮ ಮಕ್ಕಳಿಗೆ ‘ಅಜ್ಜಿ’  ಬೇಕೆಂದು ಜಾಹೀರಾತು ನೀಡಿದ್ದಾರೆ.

     ವಿಶೇಷವೆಂದರೆ ಅವರು ಈ ಕೆಲಸಕ್ಕೆ ನೇಮಕವಾಗುವ ಮಹಿಳೆಗೆ ₹80 ಲಕ್ಷ ವಾರ್ಷಿಕ ಸಂಬಳ ನೀಡುವ ಇರಾದೆ ವ್ಯಕ್ತಪಡಿಸಿದ್ದಾರೆ.

     ರಿಪಬ್ಲಿಕ್ ಪಕ್ಷದಿಂದ ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ವಿವೇಕ್ ರಾಮಸ್ವಾಮಿ ಅವರು, ಅಮೆರಿಕದಲ್ಲಿ ಪ್ರಬಲ ರಾಜಕಾರಣಿಯೂ ಹೌದು. ಅಧ್ಯಕ್ಷೀಯ ಚುನಾವಣೆಯ ಸಂವಾದಗಳಿಗೆ ಅವರು ಅರ್ಹತೆ ಪಡೆದಿರುವುದರಿಂದ ಅವರು ಇತ್ತೀಚಿಗೆ ರಾಜಕೀಯದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.

    ಈ ನಿಟ್ಟಿನಲ್ಲಿ ಅವರು ತಮ್ಮ ಇಬ್ಬರು ಗಂಡು ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಮಹಿಳೆ ಬೇಕು ಎಂದು EstateJobs.com ಎಂಬ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದಾರೆ.

    ಅಮೆರಿಕದಲ್ಲಿ ನಮ್ಮ ಕುಟುಂಬಕ್ಕೆ ಒಬ್ಬರು ನಾನಿ ಬೇಕಾಗಿದ್ದಾರೆ. ನಮ್ಮ ಇಬ್ಬರು ಗಂಡು ಮಕ್ಕಳನ್ನು ನೋಡಿಕೊಳ್ಳಲು ಅವರು ವಾರದಲ್ಲಿ 82 ಗಂಟೆ ತೊಡಗಿಸಿಕೊಳ್ಳಬೇಕು. ನಮ್ಮ ಕುಟುಂಬದಲ್ಲಿ ಒಬ್ಬರಾಗುವಂತ ಕಾಳಜಿ, ಮಮತೆ, ಪ್ರೀತಿ, ವಿಶ್ವಾಸ ಹೊಂದಿರುವ ಮಹಿಳೆ ಅರ್ಜಿ ಸಲ್ಲಿಸಬಹುದು. ವಾರದಲ್ಲಿ ಒಂದು ದಿನ ಅವರಿಗೆ ರಜೆ ನೀಡುತ್ತೇವೆ ಎಂದು ಹೇಳಿದ್ಧಾರೆ.

    38 ವರ್ಷದ ವಿವೇಕ್ ರಾಮಸ್ವಾಮಿ ಅವರು 2015 ರಲ್ಲಿ ಅಪೂರ್ವಾ ಟಿ. ರಾಮಸ್ವಾಮಿ ಅವರನ್ನು ಮದುವೆಯಾಗಿದ್ದಾರೆ. ಸದ್ಯ ಒಹಿಯೊ ರಾಜ್ಯದ ಸಿನ್ಸಿನಾಟಿಯಲ್ಲಿ ನೆಲೆಸಿದ್ದಾರೆ. ವಿವೇಕ್ ರಾಮಸ್ವಾಮಿ ಅವರ ಪೂರ್ವಜರು ತಮಿಳು ಹಿನ್ನೆಲೆಯ ಕೇರಳದವರು. ವಿವೇಕ್ ಅವರು ಅಮೆರಿಕದಲ್ಲಿ ಔಷಧಿ ಉದ್ಯಮದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap