ಸಂಭಾಲ್ ವಿವಾದ: ಯಥಾಸ್ಥಿತಿ ಕಾಯ್ದುಕೊಳ್ಳಿ : ಸುಪ್ರೀಂ ಕೋರ್ಟ್

ನವದೆಹಲಿ:

    ಸಂಭಾಲ್‌ನ ಜಾಮಾ ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿ, ಮಸೀದಿಯ ಪ್ರವೇಶದ್ವಾರದ ಬಳಿ ಇರುವ ಖಾಸಗಿ ಬಾವಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಆದೇಶ ನೀಡಿದೆ.

   ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಬಾವಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಮತ್ತು ಇನ್ನೆರಡು ವಾರಗಳಲ್ಲಿ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು.

  ಶಾಹಿ ಜಾಮಾ ಮಸೀದಿಯ ನಿರ್ವಹಣಾ ಸಮಿತಿಯು ಸಲ್ಲಿಸಿದ ಅರ್ಜಿಯಲ್ಲಿ ಮಸೀದಿಯ ಸಮೀಕ್ಷೆಗೆ ವಕೀಲ ಆಯುಕ್ತರನ್ನು ನೇಮಿಸಲು ಅನುಮತಿ ನೀಡಿದ ಸಂಭಾಲ್ ಹಿರಿಯ ವಿಭಾಗ ಸಿವಿಲ್ ನ್ಯಾಯಾಧೀಶರ ನವೆಂಬರ್ 19, 2024 ರ ಆದೇಶವನ್ನು ಪ್ರಶ್ನಿಸಿತು.

   ನಿರ್ವಹಣಾ ಸಮಿತಿಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಹುಜೆಫಾ ಅಹ್ಮದಿ, ಬಾವಿಯ ಐತಿಹಾಸಿಕ ಮಹತ್ವವನ್ನು ಒತ್ತಿ ಹೇಳಿದರು, ನಾವು ಅನಾದಿ ಕಾಲದಿಂದಲೂ ಬಾವಿಯಿಂದ ನೀರನ್ನು ಸೇದುತ್ತಿದ್ದೇವೆ. ಈ ಸ್ಥಳವನ್ನು “ಹರಿ ಮಂದಿರ” ಎಂದು ಉಲ್ಲೇಖಿಸುವ ಮತ್ತು ಅಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಯೋಜನೆಗಳ ಬಗ್ಗೆ ಅಹ್ಮದಿ ಕಳವಳ ವ್ಯಕ್ತಪಡಿಸಿದರು. ಅಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ದಯವಿಟ್ಟು ಸ್ಥಿತಿ ವರದಿಯನ್ನು ಸಲ್ಲಿಸಿ ಎಂದು ಸಿಜೆಐ ಹೇಳಿದರು. ಬಾವಿಯ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಸೂಚನೆಗಳನ್ನು ಜಾರಿಗೆ ತರಲಾಗುವುದಿಲ್ಲ ಎಂದು ಪೀಠ ಹೇಳಿದೆ. ಹಿಂದೂ ಪರ ಪ್ರತಿನಿಧಿಸುವ ವಕೀಲ ವಿಷ್ಣು ಶಂಕರ್ ಜೈನ್, ಬಾವಿ ಮಸೀದಿಯ ವ್ಯಾಪ್ತಿಯ ಹೊರಗಿದೆ. ಐತಿಹಾಸಿಕವಾಗಿ ಪೂಜೆಗೆ ಬಳಸಲಾಗುತ್ತಿದೆ ಎಂದು ಹೇಳಿದರು.

   ಗೂಗಲ್ ನಕ್ಷೆಗಳ ಚಿತ್ರವನ್ನು ಉಲ್ಲೇಖಿಸಿ ಬಾವಿ ಮಸೀದಿ ಆವರಣದ ಒಳಗೆ ಮತ್ತು ಹೊರಗೆ ಭಾಗಶಃ ಇದೆ ಎಂದು ಅಹ್ಮದಿ ಹೇಳಿದರು, ಮಸೀದಿಯ ಮೆಟ್ಟಿಲುಗಳು/ಪ್ರವೇಶದ್ವಾರದ ಬಳಿ ಇರುವ ಖಾಸಗಿ ಬಾವಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯದ ಸೂಕ್ತ ಅನುಮತಿಯಿಲ್ಲದೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸೂಕ್ತ ನಿರ್ದೇಶನ ನೀಡಿ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

   ಚಂದೌಸಿಯಲ್ಲಿರುವ ಸಂಭಾಲ್‌ನ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರು ನವೆಂಬರ್ 19, 2024 ರಂದು ನೀಡಿದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿರುವುದಾಗಿ ಮಸೀದಿ ಸಮಿತಿ ತಿಳಿಸಿದೆ.

   ಶಾಹಿ ಜಾಮಾ ಮಸೀದಿಯನ್ನು ಸಮೀಕ್ಷೆ ಮಾಡಲು ವಕೀಲ ಆಯುಕ್ತರನ್ನು ನೇಮಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವು ಅನುಮತಿಸಿದೆ. ಅರ್ಜಿ ಸಲ್ಲಿಸಿದ ದಿನವೇ ವಿಚಾರಣೆ ನಡೆಸದೆಯೇ ಅರ್ಜಿಯನ್ನು ಅಂಗೀಕರಿಸಲಾಗಿದೆ ಎಂದು ಮಸೀದಿ ಸಮಿತಿ ತಿಳಿಸಿದೆ.

Recent Articles

spot_img

Related Stories

Share via
Copy link