ಸ್ಯಾಂಡಲ್ ವುಡ್ ‘ಹಿರಿಯ ನಟ ಕೃಷ್ಣೇಗೌಡ’ ಕೋವಿಡ್​ಗೆ ಬಲಿ!!

ಬೆಂಗಳೂರು :

      ಕೊರೋನಾ ಸೋಂಕಿನಿಂದ ಬಳಲುತ್ತಿದ್ದಂತ ಸ್ಯಾಂಡಲ್ ವುಡ್ ಹಿರಿಯ ನಟ ಕೃಷ್ಣೇಗೌಡ (80) ಅವರು ಇಂದು ನಿಧನರಾಗಿದ್ದಾರೆ.

     ಕಳೆದ 20 ದಿನಗಳ ಹಿಂದೆ ಹಿರಿಯ ನಟ ಕೃಷ್ಣೇಗೌಡ ಅವರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಿಂದ ಡಿಚ್ಚಾರ್ಜ್ ಆಗಿ ಬಂದಿದ್ದರು.  ಇನ್ನೇನು ಚಿಕಿತ್ಸೆಯ ಬಳಿಕ ಕೊರೋನಾ ಗೆದ್ದು ಬಂದೇ ಬಿಟ್ಟರು ಎನ್ನಲಾಗುತ್ತಿತ್ತು. ಆದರೆ ಶ್ವಾಸಕೋಶದ ತೊಂದರೆಯಿಂದ ಕೃಷ್ಣೇಗೌಡ ಇಹಲೋಕ ತ್ಯಜಿಸಿದ್ದಾರೆ.

     ಹಿರಿಯ ನಟ ಬಿ.ಎಂ.ಕೃಷ್ಣೇಗೌಡ ಅಗಲಿಕೆಗೆ ಕನ್ನಡ ಚಿತ್ರರಂಗದ ಗಣ್ಯರು, ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link