ಇತ್ತೀಚಿನ ದಿನಗಳಲ್ಲಿ ಬಾಷೆಗಳ ಮಿತಿಯಿಲ್ಲದೆ, ಒಳ್ಳೆಯ ಪಾತ್ರ ಸಿಕ್ಕರೆ ಎಲ್ಲಾ ಭಾಷೆಗಳಲ್ಲೂ ನಟಿಸುತ್ತಿರುವ ನಟ ಸಂಜಯ್ ದತ್. ಸದ್ಯ ಕನ್ನಡದ ಸ್ಟಾರ್ ಡೈರೆಕ್ಟರ್ ಪ್ರೇಮ್ ನಿರ್ದೇಶಿಸುತ್ತಿರುವ ಕೆಡಿ – ದಿ ಡೆವಿಲ್ ಚಿತ್ರದಲ್ಲಿ ಸಂಜಯ್ ಭಾಗಿಯಾಗಿದ್ದಾರೆ. ಧ್ರುವ ಸರ್ಜಾ ಅಭಿನಯದ ಚಿತ್ರದಲ್ಲಿ ಸಂಜಯ್ ದತ್ ಮತ್ತೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರೇಮ್ ನಿರ್ದೇಶನದ, ಕೆಡಿ ಸಿನಿಮಾ 1970 ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ಹಿಂದಿ ಸಿನಿಮಾಗಳಲ್ಲಿ ನಾಲ್ಕು ದಶಕಗಳಿಂದ ಆಕ್ಷನ್ ಹೀರೋ ಇಮೇಜ್ ಅನ್ನು ನಿರ್ಮಿಸಿದ ನಟ ಸಂಜಯ್ ದತ್, ಈಗ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದ್ದಾರೆ.
“ಕೆಜಿಎಫ್-ಚಾಪ್ಟರ್ 2″ ರಲ್ಲಿ ಯಶ್ ಮತ್ತು ಸಂಜಯ್ ತೆರೆಯ ಮೇಲೆ ಮ್ಯಾಜಿಕ್ ಮಾಡಿದ್ದರು, ಸದ್ಯ ಅನೇಕ ಕನ್ನಡ ನಟರು ಸಂಜಯ್ ದತ್ ರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಬೆಂಗಳೂರಿನಲ್ಲಿ ಕೆಡಿ ಶೂಟಿಂಗ್ ನಡೆಯುತ್ತಿದ್ದು,ಸಿನಿಮಾದ ಭಾಗ ವಾಗಿರುಹುದಕ್ಕೆ ಸಂತೋಷ ತಂದಿದೆ ಎಂದು ಸಂಜಯ್ ದತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ