ವೈಟ್ ಹೌಸ್ ನಲ್ಲಿ ಮೊಳಗಿತು “ಸಾರೆ ಜಹಾನ್‌ ಸೆ ಅಚ್ಚಾ”

ವಾಷಿಂಗ್ಟನ್: 

    ಅಮೆರಿಕದ ವೈಟ್ ಹೌಸ್ ನಲ್ಲಿ ಆಯೋಜಿಸಲಾಗಿದ್ದ ಏಷಿಯನ್‌ ಅಮೆರಿಕನ್‌, ಸ್ಥಳೀಯ ಹವಾಯಿಯನ್‌ ಮತ್ತು ಪೆಸಿಫಿಕ್‌ ಐಲ್ಯಾಂಡರ್‌ ಪಾರಂಪರ್ಯ ಮಾಸಾಚರಣೆ ಕಾರ್ಯಕ್ರಮದಲ್ಲಿ ಶ್ವೇತಭವನದ ಮೆರೈನ್ ಬ್ಯಾಂಡ್ ಸೋಮವಾರ ಭಾರತದ ದೇಶಭಕ್ತಿಗೀತೆ ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿತು. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರೀಸ್‌ ಅವರು ಭಾಗವಹಿಸಿದ್ದರು.

   ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮೊಹಮ್ಮದ್ ಇಕ್ಬಾಲ್ ಅವರು ಬರೆದ ದೇಶಭಕ್ತಿ ಗೀತೆಯನ್ನು, ವಾರ್ಷಿಕ ಕಾರ್ಯಕ್ರಮಕ್ಕೆ ಅಧ್ಯಕ್ಷರಿಂದ ಆಹ್ವಾನಿಸಲ್ಪಟ್ಟ ಭಾರತೀಯ ಅಮೆರಿಕನ್ನರ ಕೋರಿಕೆಯ ಮೇರೆಗೆ ವೈಟ್ ಹೌಸ್ ಮೆರೈನ್ ಬ್ಯಾಂಡ್ ಎರಡು ಬಾರಿ ನುಡಿಸಿತು. 

    ಅತ್ಯುತ್ತಮ ಭಾಗವೆಂದರೆ, ನಾನು ಶ್ವೇತಭವನಕ್ಕೆ ಕಾಲಿಡುತ್ತಿದ್ದಂತೆ, ‘ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ’ ನುಡಿಸುತ್ತಾ ಸಂಗೀತಗಾರರು ನನ್ನನ್ನು ಸ್ವಾಗತಿಸಿದರು. ಇಡೀ ಪ್ರಪಂಚಕ್ಕಿಂತ ಉತ್ತಮವಾದುದು ನಮ್ಮ ಹಿಂದೂಸ್ತಾನ್” ಎಂದು ಭಾರತೀಯ ಅಮೆರಿಕನ್ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಇದು ಎರಡನೇ ಬಾರಿ ಶ್ವೇತಭವನದಲ್ಲಿ ಜನಪ್ರಿಯ ಭಾರತೀಯ ದೇಶಭಕ್ತಿ ಗೀತೆಯನ್ನು ನುಡಿಸಲಾಗಿದೆ. ಕಳೆದ ವರ್ಷ ಜೂನ್ 23 ರಂದು ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಅಮೆರಿಕ ಭೇಟಿಯ ಸಮಯದಲ್ಲಿ ಈ ದೇಶಭಕ್ತಿಗೀತೆಯನ್ನು ಹಾಡಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link