ಮಾಜಿ ಸೈನಿಕನ ಹೋರಾಟಕ್ಕೆ ಸಾಥ್ ಕೊಟ್ಟ ಕೆ ಸತೀಶ್ ಕುಮಾರ್

ಚಿಂತಾಮಣಿ :

    ಮಾಜಿ ಸೈನಿಕ ಶಿವಾನಂದರೆಡ್ಡಿ ಅವರ ಹೋರಾಟಕ್ಕೆ ಯುವ ಬಿಜೆಪಿ ಮೋರ್ಚಾ ಕೋಲಾರ ಜಿಲ್ಲಾ ಉಪಾಧ್ಯಕ್ಷ ಕೆ.ಸತೀಶ್ ಕುಮಾರ್ ಬೆಂಬಲ ನೀಡಿದ್ದಾರೆ.

   ತಾಲೂಕಿನ ಅಂಬಾಜಿದುರ್ಗ ಹೋಬಳಿ ರಾಯಪಲ್ಲಿ ಗ್ರಾಮದವರಾದ ಶಿವಾನಂದರೆಡ್ಡಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಗಡಿ ಭಾಗದಲ್ಲಿ ನಡೆದ ಅಪಘಾತದಲ್ಲಿ ಅಂಗವಿಕಲರಾಗಿದ್ದು ಕಾಲಿಗೆ ತೀವ್ರ ಪೆಟ್ಟಾಗಿ ಸೇನೆಯಿಂದ ಕಡ್ಡಾಯ ನಿವೃತ್ತಿ ಪಡೆದ ಮಾಜಿ ಯೋಧ. ಈತ ಕಾಲಿಗೆ ಪೆಟ್ಟು ತಿಂದು ನಿವೃತ್ತಿಯಾದ ಹಿನ್ನೆಲೆಯಲ್ಲಿ ಸೇನೆಯಿಂದಲೇ ಜಮೀನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಹಾಗೆ ಸೂಚಿಸಿ ಎರಡೂವರೆ ದಶಕವೇ ಕಳೆದರೂ ಈತನಿಗೆ ಸರ್ಕಾರದಿಂದ ಸಿಗಬೇಕಾದ ಜಮೀನು ಸಿಕ್ಕಿಲ್ಲ.ಇದು ನಮ್ಮ ದೇಶದಲ್ಲಿ ಮಾಜಿ ಯೋಧನೊಬ್ಬನಿಗೆ ನಮ್ಮ ಆಡಳಿತ ನೀಡಿದ ಗೌರವ ಎಂದು ಬೇಸರಿಸಿದರು. 

   ಆದರೆ ತನಗೆ ಸರ್ಕಾರದಿಂದ ಸಿಗಬೇಕಾದ ಜಮೀನಿಗಾಗಿ ಕಳೆದ ೨೬ ವರ್ಷಗಳಿಂದ ಹೋರಾಟ ನಡೆಸಿದ್ದು ಮುಖ್ಯಮಂತ್ರಿ, ಸಚಿವರು, ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲಾ.ಇದರಿಂದ ಬೇಸತ್ತ ಮಾಜಿ ಸೈನಿಕ ತಾಲೂಕು ಕಚೇರಿ ಮುಂಭಾಗ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದು ಹೋರಾಟ 14ನೇ ದಿನಕ್ಕೆ ಕಾಲಿಟ್ಟಿದೆ.

   ಇಂದು ಈ ವೇಳೆ ಮಾತನಾಡಿದ ಕೆ ಸತೀಶ್ ಕುಮಾರ್ ಸುಮಾರು 14 ದಿನಗಳಿಂದ ತಾಲೂಕು ಕಚೇರಿ ಮುಂಭಾಗ ಮಾಜಿ ಸೈನಿಕ ಶಿವಾನಂದ ರೆಡ್ಡಿ ಜಮೀನಿಗಾಗಿ ಹೋರಾಟ ಮಾಡುತ್ತಿದ್ದರು ಸರ್ಕಾರ ಜಿಲ್ಲಾ ಆಡಳಿತ ತಾಲ್ಲೂಕ್ ಆಡಳಿತ ಅವರ ಹೋರಾಟಕ್ಕೆ ಸ್ಪಂದಿಸದೆ ಕ್ಯಾರೆ ಎನ್ನದೆ ಇರುವುದು ಬೇಸರದ ಸಂಗತಿ! ಕಂದಾಯ ಇಲಾಖೆ ಅಧಿಕಾರಿಗಳು ೧೦ ಲಕ್ಷ ಜಮೀನು ಕೊಡಿಸಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು, ಆ ವೇಳೆ ಮಾಜಿ ಸೈನಿಕ  ಶಿವಾನಂದ ರೆಡ್ಡಿ ರವರು ರೆಡ್ ಹ್ಯಾಂಡ್ ಆಗಿ ಲೋಕಾ ಯುಕ್ತ ಬಲೆಗೆ ಲಂಚಕೋರರನ್ನು ಹಿಡಿದು ಕೊಟ್ಟಿದ್ದು ಅದೇ ಮನಸ್ಸಿನಲ್ಲಿ ಇಟ್ಟುಕೊಂಡು ಅಧಿಕಾರಿಗಳು ಅವರಿಗೆ ಜಮೀನು ನೀಡದೆ ಸತಾಯಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಹೇಳಿದರು.

Recent Articles

spot_img

Related Stories

Share via
Copy link