ಮುಂಬೈ:
ಇಂದಿದೆ ಸರಿಯಾಗಿ ದಶಕದ ಹಿಂದೆ ಮುಂಬೈನ ಪ್ರಸಿದ್ದ ಹಾಗು ದೇಶದ ಹೆಮ್ಮೆಯಂತಿದ್ದ ತಾಜ್ ಹೋಟೆಲ್ ಮೇಲೆ ಲಕ್ಷರ್ ಏ ತೋಯಿಬಾ ಉಗ್ರವಾದಿಗಳ ದಾಳಿ ಭಾರತದ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯ ಆ ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಕುಟುಂಬಗಳ ಪಾಲಿಗೆ ಕರಾಳ ದಿನವೂ ಹೌದು.
ಮೂರು ದಿನಗಳ ಕಾಲ ಮುಂಬೈ ಮಹಾನಗರಿಯನ್ನು ಉಗ್ರರರು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ನಲುಗುವಂತೆ ಮಾಡಿದ್ದರು ಆ ದಿನದ ಕರಾಳ ನೆನಪಿಗಾಗಿ ಈ ದಿನವನ್ನು 26/11 ಎಂದು ನಾಮಕರಣಮಾಡಲಾಗಿದೆ ಭೀಕರ ಭಯೋತ್ಪಾದಕ ದಾಳಿಯಲ್ಲಿ 166 ಮಂದಿ ಬಲಿಯಾಗಿದ್ದರು ಮತ್ತು ಅಪರಾಧಿಗೆ ಗಲ್ಲು ಶಕ್ಷೆಯೂ ಆಗಿದೆ.ಆದರು ದಶಕದ ಹಿಂದಿನ ಕಹಿ ಘಟನೆಗೆ ಈಗಲೂ ಸಹ ಹತಾತ್ಮರ ಕುಟುಂಬದವರು ದುಖಿತರಾಗಿದ್ದಾರೆ.