ಬೆಂಗಳೂರು:
ಕಾರವಾರ-ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ (ಸೆಪ್ಟೆಂಬರ್ 9, 2025) ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದೆ. ಬೇಲೆಕೇರಿ ಬಂದರಿನಿಂದ 2010ರಲ್ಲಿ ನಡೆದ ಕಬ್ಬಿಣದ ಅದಿರು ಅಕ್ರಮ ಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.
ಈ ಪ್ರಕರಣದಲ್ಲಿ ಸರಕಾರಕ್ಕೆ ಸುಮಾರು 200-250 ಕೋಟಿ ರೂ. ನಷ್ಟವಾದ ಆರೋಪವಿದೆ.ಆಗಸ್ಟ್ 13 ಮತ್ತು 14, 2025ರಂದು ಇ.ಡಿ. ಅಧಿಕಾರಿಗಳು ಸತೀಶ್ ಸೈಲ್ ಅವರ ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿರುವ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 1.68 ಕೋಟಿ ರೂ. ನಗದು, 6.75 ಕೆ.ಜಿ. ಚಿನ್ನಾಭರಣ, ಮತ್ತು 14.13 ಕೋಟಿ ರೂ. ಮೌಲ್ಯದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿತ್ತು.ಸೋಮವಾರ ಮತ್ತು ಮಂಗಳವಾರ (ಸೆಪ್ಟೆಂಬರ್ 8-9, 2025) ಇ.ಡಿ. ಕಚೇರಿಯಲ್ಲಿ ಸತೀಶ್ ಸೈಲ್ ಅವರನ್ನು ವಿಚಾರಣೆಗೊಳಪಡಿಸಲಾಯಿತು. ತನಿಖೆಗೆ ಸಹಕರಿಸದ ಕಾರಣ ಇ.ಡಿ. ಅವರನ್ನು ಬಂಧಿಸಿತು ಎಂದು ತಿಳಿದು ಬಂದಿದೆ.
