ನವದೆಹಲಿ
ಮೊಬೈಲ್ ಫೋನ್ ಸಂಖ್ಯೆಯನ್ನು 10 ರಿಂದ 11 ಅಂಕಿಗಳಿಗೆ ಬದಲಾಯಿಸಲು ದೂರಸಂಪರ್ಕ ಇಲಾಖೆ (ಡಿಒಟಿ) ನಿರ್ಧರಿಸಿ ಹಲವು ವರ್ಷಗಳೇ ಕಳೆದಿವೆ. ಪ್ರತಿ ವರ್ಷದಂತೆ ಈ ವರ್ಷ ಕೂಡಾ ಟೆಲಿಕಾಂ ನಿಯಂತ್ರಕ ಪ್ರಾಧಿಕಾರ (TRAI) ತನ್ನ ಶಿಫಾರಸ್ಸಿನಲ್ಲಿ ಈ ಅಂಶವನ್ನು ಸೇರಿಸಿದೆ. ಮೊಬೈಲ್ ಫೋನ್ ಸಂಖ್ಯೆ 11 ಅಂಕಿ ಹಾಗೂ ನೆಟ್ವರ್ಕ್ ಡಾಂಗಲ್ ಸಂಖ್ಯೆ 13 ಅಂಕಿಗಳಿಗೆ ಏರಿಸುವಂತೆ ಇಲಾಖೆಗೆ ಸೂಚಿಸಿದೆ.
ದೂರಸಂಪರ್ಕ ಇಲಾಖೆಯು 2003ರಲ್ಲಿ 30 ವರ್ಷಗಳಿಗೆ ಚಾಲ್ತಿಯಲ್ಲಿರುವಂತೆ 10 ಡಿಜಿಟ್ ನಂಬರ್ ಗಳ ಮೊಬೈಲ್ ಸಂಖ್ಯೆಗಳಿಗೆ ಅನುಮೋದನೆ ನೀಡಿತ್ತು. ಗ್ರಾಹಕರ ಸಂಖ್ಯೆ, ಮೊಬೈಲ್ ಪೀಳಿಗೆ ಸುಧಾರಣೆಗೊಂಡಿದೆ, ನಿರೀಕ್ಷೆಗೂ ಮೀರಿದ ಬ್ಯಾಂಡ್ ವಿಡ್ತ್ ನಿಯಂತ್ರಿಸಲು ಹೊಸ ವ್ಯವಸ್ಥೆ ಅನಿವಾರ್ಯವಾಗಿದೆ. ಈ ಕುರಿತಂತೆ 2009ರಿಂದ ಮಾತುಕತೆ ನಡೆಯುತ್ತಲೇ ಇದೆ.
ನೆಟ್ವರ್ಕ್ ಕಂಪನಿಗಳಿಗೆ ಮೊಬೈಲ್ ಸಂಖ್ಯೆಗಳನ್ನು 13ಕ್ಕೆ ಏರಿಸಲು ದೂರಸಂಪರ್ಕ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಈಗಿರುವ ಮೊಬೈಲ್ ಸಂಖ್ಯೆಗೆ ಹೆಚ್ಚುವರಿಯಾಗಿ ಮೂರು ಅಂಕಿಗಳನ್ನು ಸೇರಿಸಲು ಟೆಲಿಕಾಂ ಇಲಾಖೆ ನಿರ್ದೇಶನ ನೀಡಲು 2018ರಲ್ಲಿ ಮುಂದಾಗಿತ್ತು. ಆದರೆ, ಈ ಆದೇಶ ಜಾರಿಗೊಳ್ಳಲಿಲ್ಲ. ಸಿಮ್ ಆಧಾರಿತ ಎಂ2ಎಂ ಸಾಧನಗಳಿಗೆ 13 ಅಂಕಿಗಳ ಮೊಬೈಲ್ ಸಂಖ್ಯೆ ಬಳಸಲು ಅನುಮತಿ ನೀಡಲು ಸೂಚನೆ ಇದೆ. ಚಿನಾದಲ್ಲಿ ಸದ್ಯ 11 ಅಂಕಿಗಳ ಮೊಬೈಲ್ ಸಂಖ್ಯೆ ಬಳಸಲಾಗುತ್ತಿದೆ. ಉಳಿದಂತೆ ಫ್ರೆಂಚ್ ನ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಅಂಕಿಗಳುಳ್ಳ ಮೊಬೈಲ್ ಸಂಖ್ಯೆ ಬಳಕೆಯಲ್ಲಿದೆ. ಈಗ ಭಾರತ ಕೂಡಾ ಈ ಸಾಲಿಗೆ ಸೇರುವ ಸನಿಹದಲ್ಲಿದೆ.
ಶೀಘ್ರದಲ್ಲೇ ಹೊಸ ಸಂಖ್ಯಾ ಯೋಜನೆ( National Numbering Plan (NNP)) ಹೊರ ತರುವಂತೆ ಇಲಾಖೆಗೆ ಟ್ರಾಯ್ ಶಿಫಾರಸು ಮಾಡಿದೆ. ಇದರಲ್ಲಿ ಸ್ಥಿರ ದೂರವಾಣಿಯಿಂದ ಕರೆ ಮಾಡುವಂತೆ Zero ಡಯಲ್ ಬಳಕೆ ಕುರಿತು ಕೂಡಾ ನಿಯಮಗಳಿವೆ.