ಎತ್ತಿನ ಹೊಳೆ ಯೋಜನೆ ಸಸ್ಯೋದ್ಯಾನದ ಮರಗಳು ಬಲಿ

ಮಧುಗಿರಿ:

               ಪಟ್ಟಣದ ಹೊರವಲಯದಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಬಳಿ ಮರಗಳ ಮಾರಣ ಹೋಮ ನಡೆದಿದ್ದು, ಎತ್ತಿನ ಹೊಳೆ ಯೋಜನೆ ಕಾಮಗಾರಿ ನಡೆಸುವ ವೇಳೆ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ರಾತ್ರೋರಾತ್ರಿ ಈ ಕೆಲಸ ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕೆ.ಎನ್.ರಾಜಣ್ಣ ಶಾಸಕತ್ವದ ಅವಧಿಯಲ್ಲಿ ಪುರ ಪ್ರವೇಶವಾಗುತ್ತಿದ್ದಂತೆ ಸುಂದರವಾಗಿ ಕಾಣಲೆಂದು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಸ್ಥಳದಲ್ಲಿ ಸಾಲುಮರದ ತಿಮ್ಮಕ್ಕನ ಸಸ್ಯೋದ್ಯಾನಕ್ಕೆ ಚಾಲನೆ ನೀಡಿ, ಸುತ್ತಲೂ ಮರಗಿಡಗಳನ್ನು ಬೆಳೆಸಿ ಪ್ರಾಕೃತಿಕ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದರು.

ಆದರೆ ಎತ್ತಿನಹೊಳೆ ಪೈಪ್ ಅಳವಡಿಸುವ ಕಾಮಗಾರಿ ಸಂದÀರ್ಭದಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೆ ಏಕಾಏಕಿ ಮರಗಳನ್ನು ನೆಲಕ್ಕುರುಳಿಸಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅನುಮತಿಗೂ ಕಾಯದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆಂದು ದೂರುಗಳು ಕೇಳಿಬಂದಿವೆ.

ಜತೆಗೆ ಎತ್ತಿನಹೊಳೆಯ ಮಾರ್ಗ ಮಧ್ಯದಲ್ಲಿ ಕಡಿದು ಹಾಕಿರುವ ಮರಗಳೆಷ್ಟೊ? ಈ ಮರಗಳಿಗೆ ಸರಿಸಮಾನವಾಗಿ ಗಿಡಗಳನ್ನು ನೆಡಬೇಕೆನ್ನುವ ಕಾನೂನು ಇದ್ದರೂ ಆ ಬಗ್ಗೆ ತಾಲ್ಲೂಕಿನಲ್ಲಿ ಎಲ್ಲಿಯೂ ಗಿಡಗಳನ್ನು ನೆಟ್ಟು ಪೆÇೀಷಣೆ ಮಾಡಲು ಈ ಇಲಾಖೆ ಮುಂದಾಗಿಲ್ಲ. ಇನ್ನೂ ಈ ಇಲಾಖೆಯ ಅಧಿಕಾರಿಗಳು ಯೋಜನೆಗೆ ಭೂಮಿ ನೀಡಿದ ರೈತರೊಂದಿಗೆ ಸಂಯಮದಿಂದ ವರ್ತಿಸುತ್ತಿಲ್ಲ. ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap