ಬೆಂಗಳೂರು:
ರಾಜ್ಯದಲ್ಲಿ ಶೀಘ್ರದಲ್ಲಿಯೇ ದೇವನಹಳ್ಳಿಯಲ್ಲಿ ಮೊದಲ ಸರ್ಕಾರಿ ಪ್ರಮಾಣೀಕೃತ ವಾಹನ ಸ್ಕ್ರ್ಯಾಪಿಂಗ್ ಕೇಂದ್ರ ಪ್ರಾರಂಭವಾಗಲಿದ್ದು, ಇಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ರದ್ದಿಗೆ ಹಾಕಲಾಗುತ್ತದೆ.
ರಾಜ್ಯ ಸರ್ಕಾರವು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯವನ್ನು ಸ್ಥಾಪಿಸಲು ಮೂರು ಖಾಸಗಿ ಕಂಪನಿಗಳಿಗೆ ವಹಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ಅದಕ್ಕೆ ಅನುಮೋದನೆ ನೀಡುವ ನಿರೀಕ್ಷೆಯಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಕೊಪ್ಪಳದಲ್ಲಿ ಇನ್ನೂ ಎರಡು ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಮತ್ತು ಅನರ್ಹ ಮತ್ತು ಮಾಲಿನ್ಯವನ್ನು ಉಂಟುಮಾಡುವ ವಾಹನಗಳನ್ನು ಆರ್ ವಿಎಸ್ ಎಫ್ ಗಳಲ್ಲಿ ರದ್ದುಗೊಳಿಸಬೇಕು. ಭಾರತದಾದ್ಯಂತ ಸುಮಾರು 60 ಆರ್‌ವಿಎಸ್‌ಎಫ್‌ಗಳಿವೆ, ಕರ್ನಾಟಕದಲ್ಲಿ ಇದುವರೆಗೆ ಇರಲಿಲ್ಲ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.