ಬೆಂಗಳೂರು:
SDPI ಕರ್ನಾಟಕ ಪಕ್ಷದ ವತಿಯಿಂದ ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಜನಾಗ್ರಹ ಸಭೆ ನಡೆಯಿತು. ಈ ಸಭೆಯು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ನಡೆಯಿತು.
ಸಭೆಗೆ ಕರ್ನಾಟಕ ಸರ್ಕಾರದ ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಹಾಗೂ ವಸತಿ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿಯ ಪ್ರತಿನಿಧಿಯಾಗಿ ಆಗಮಿಸಿ, SDPI ಬಿಡುಗಡೆಗೊಳಿಸಿದ್ದ ಜನತಾ ಬಜೆಟ್ ಆಗ್ರಹ ಪ್ರತಿಯನ್ನು ಸ್ವೀಕರಿಸಿದರು. ಅವರು ಈ ಆಗ್ರಹವನ್ನು ಸರ್ಕಾರದ ಗಮನಕ್ಕೆ ತರುತ್ತದೆ ಮತ್ತು ಮುಖ್ಯಮಂತ್ರಿಯೊಡನೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಭೆಯ ಪ್ರಮುಖ ಉದ್ದೇಶ 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ಸರ್ಕಾರವು ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಆರೋಗ್ಯ, ಶಿಕ್ಷಣ, ವಕ್ಫ್, ಮೀಸಲಾತಿ, ಜನಗಣತಿ ಹಾಗೂ ಅಭಿವೃದ್ಧಿ ವಿಚಾರಗಳಲ್ಲಿ ಬದ್ಧತೆಯನ್ನು ತೋರಬೇಕು ಎಂಬುದಾಗಿ ಆಗಿತ್ತು. ಜನಪರ ಆಗ್ರಹದೊಂದಿಗೆ, ಕಲ್ಯಾಣ ರಾಜ್ಯಕ್ಕಾಗಿ ಪ್ರಾಮಾಣಿಕವಾಗಿ ಯಾವ ಯಾವ ಇಲಾಖೆಗಳಿಗೆ ಸರಿಯಾದ ರೀತಿಯಲ್ಲಿ ಹಣ ಮೀಸಲಿಡಬೇಕು ಎಂಬ ಕುರಿತು ಸಲಹೆಗಳನ್ನು ಸರ್ಕಾರದ ಮುಂದಿಡಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಖ್ಯಾತ ಹೈಕೋರ್ಟ್ ವಕೀಲರಾದ ಎಸ್. ಬಾಲನ್, AAP ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜು, ದಲಿತ ಮೈನಾರಿಟಿ ಸೇನೆ ರಾಜ್ಯಾಧ್ಯಕ್ಷರಾದ AJ ಖಾನ್ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು. SDPI ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಮತ್ತು ದೇವನೂರ ಪುಟ್ನಂಜಯ್ಯ, ಪ್ರಧಾನ ಕಾರ್ಯದರ್ಶಿಗಳಾದ BR ಭಾಸ್ಕರ್ ಪ್ರಸಾದ್, ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿಗಳಾದ ರಿಯಾಝ್ ಕಡಂಬು, ಅಫ್ಸರ್, ಅಕ್ರಮ್ ಮೌಲಾನ, ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹೀಮ್ ಪಟೇಲ್, ಶಾಹೀದ್ ಅಲಿ, ಅತಾವುಲ್ಲ ಜೋಕಟ್ಟೆ, ಅಡ್ವಕೇಟ್ ವಸೀಮ್, ಆಯಿಷಾ ಬೆಂಗಳೂರು, ಮಕ್ಸುದ್ ಬೆಳಗಾಂ ಹಾಗೂ ಇತರ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರು ಉಪಸ್ಥಿತರಿದ್ದರು
