HSRP ಅವಧಿ ವಿಸ್ತರಣೆ ಬೆನ್ನಲ್ಲೇ ಸರ್ವರ್‌ ಡೌನ್‌ ….!

ಬೆಂಗಳೂರು:

   HSRP ನಂಬರ್​ ಪ್ಲೇಟ್​​ ಅವಳಡಿಸುವ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

    HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ ಎದುರಾಗಿದ್ದು ನಂಬರ್ ಪ್ಲೇಟ್ ಬದಲಿಸಲು ಇದ್ದಂತ ಸರ್ಕಾರದ ಸರ್ವರ್ ಡೌನ್ ಆಗಿದ್ದು ಇದರಿಂದ ಸಾಕಷ್ಟು ವಾಹನ ಸವಾರರು ಪರದಾಡುವಂತಾಗಿದೆ ಹಾಗೆ HSRP ನಂಬರ್ ಪ್ಲೇಟ್ ಆನ್ಲೈನ್ ಬುಕ್ ಮಾಡಲು ನಾನಾಕಸರತ್ತು ಸಹ ನಡೆಸಲಾಗುತ್ತಿದೆ.

    12 ಸಂಸ್ಥೆಗಳಿಗೆ ಟೆಂಡರ್ ನೀಡಿದ್ದ ಸರ್ಕಾರ ಹೀಗಾಗಿ ಗಡುವನ್ನು ಇನ್ನು 1 ವರ್ಷಗಳ ಕಾಲ ವಿಸ್ತರಿಸಬೇಕೆಂದು ಒತ್ತಾಯ ವಾಹನಗಳ ಮಾಲೀಕರು ಆನ್ಲೈನ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಲು ಸಮಸ್ಯೆ ಆಗ್ತಿದೆ

   ಸರ್ವರ್ ಡೌನ್ ಇರುವ ಕಾರಣ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಲ್ಲಾ ಅಂಶವನ್ನು ಭರ್ತಿ ಮಾಡಿದರು ಹಲಾವಾರು ತಾಂತ್ರಿಕ ಮರು ಉತ್ತರ ಬರುತ್ತಿದೆ ಕೆಲವು ನೊಂದಾವಣೆ ಸ್ವೀಕೃತವಾಗುತ್ತಿಲ್ಲ ಹೀಗಾಗಿ ಗಡುವನ್ನು ಇನ್ನು ಒಂದು ವರ್ಷಗಳ ಕಾಲ ವಿಸ್ತರಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ