ಹಬ್ಬಕ್ಕೆ ಏಳು ಚಿತ್ರಗಳು; ಬೇವು ಬೆಲ್ಲ ತಿಂದು ಸಿನಿಮಾ ನೋಡಿ

ಬೆಂಗಳೂರು: 

ಈ ಬಾರಿ ಯುಗಾದಿ ಹಬ್ಬ ಬಹಳ ವಿಶೇಷ ಎಂದರೆ ತಪ್ಪಿಲ್ಲ. ಏಕೆಂದರೆ, ಸಾಮಾನ್ಯವಾಗಿ ಈ ಹಬ್ಬದ ಸಂದರ್ಭದಲ್ಲಿ ಒಂದೆರಡು ಚಿತ್ರಗಳು ಬಿಡುಗಡೆಯಾಗುವುದು ಸಹಜ. ಆದರೆ, ಈ ಬಾರಿ ದಾಖಲೆಯ ಏಳು ಚಿತ್ರಗಳು ಬಿಡುಗಡೆಯಾಗುತ್ತಿವೆ. ಮೊದಲು ಎಂಟು ಚಿತ್ರಗಳಾಗಬೇಕಿತ್ತು.ಆದರೆ, ‘ತ್ರಿಕೋನ’ ಚಿತ್ರವು ಏ.08ಕ್ಕೆ ಮುಂದೂಡಲ್ಪಟ್ಟಿದ್ದರಿಂದ, ಕೊನೆಗೆ ಏಳು ಚಿತ್ರಗಳು ಬಿಡುಗಡೆಯಾಗಲಿವೆ.

ಹೋಮ್ ಮಿನಿಸ್ಟರ್:

 ಈ ಪೈಕಿ ಅತ್ಯಂತ ನಿರೀಕ್ಷಿತ ಚಿತ್ರ ಎಂದರೆ ಅದು ಉಪೇಂದ್ರ ಅಭಿನಯದ ‘ಹೋಂ ಮಿನಿಸ್ಟರ್’. ಐದು ವರ್ಷಗಳ ಹಿಂದೆಯೇ ಈ ಚಿತ್ರ ಪ್ರಾರಂಭವಾಗಿತ್ತು. ಆದರೆ, ಕರೊನಾ ಮುಂತಾದ ಕಾರಣಗಳಿಂದ ಚಿತ್ರ ವಿಳಂಬವಾಗಿ, ಏಪ್ರಿಲ್ 01ಕ್ಕೆ ಬಿಡುಗಡೆಯಾಗುತ್ತಿದೆ. ಈ ಕಥೆ ಕೇಳಿ ಉಪೇಂದ್ರ ಅವರಿಗೆ ಇಷ್ಟವಾದರೂ, ಭಯವಾಯಿತಂತೆ.

ಜನ ಈ ಕಥೆಯನ್ನು ಹೇಗೆ ತೆಗೆದುಕೊಳ್ಳುತ್ತಾರೋ ಎಂದು ಗೊಂದಲವಾಯಿತಂತೆ. ಆದರೆ, ಎಲ್ಲರ ಒತ್ತಾಯದ ಮೇರೆಗೆ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಉಪೇಂದ್ರಗೆ ನಾಯಕಿಯಾಗಿ ವೇದಿಕಾ ನಟಿಸಿದ್ದು, ತಾನ್ಯಾ ಹೋಪ್, ಸಾಧು ಕೋಕಿಲ, ರಾಜೇಶ್ ನಟರಂಗ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಇಂದು ಆರ್​ಸಿಬಿ- ಕೆಕೆಆರ್ ಪಂದ್ಯ; ಫಾಫ್ ಬಳಗದಲ್ಲಿ ಮಹತ್ತರ ಬದಲಾವಣೆ?

ಬಾಡಿಗಾಡ್: 

ಗುರುಪ್ರಸದ್ ಅಭಿನಯದ ‘ಬಾಡಿ ಗಾಡ್’ ಮತ್ತು ಸುಮನ್ ನಗರ್​ಕರ್ ನಟಿಸಿರುವ ‘ಸ್ಟಾಕರ್’ ಚಿತ್ರಗಳು ಬಿಡುಗಡೆಯಾಗಲಿವೆ. ಪ್ರಭು ಶ್ರೀನಿವಾಸ್ ನಿರ್ದೇಶನದ ‘ಬಾಡಿ ಗಾಡ್’ ಚಿತ್ರವು ಹೆಣವೊಂದರ ಸುತ್ತ ಸುತ್ತಲಿದ್ದು, ಮುಂಚೆ ತಮಿಳಿನಲ್ಲಿ ನಿರ್ವಣವಾಗಬೇಕಿತ್ತಂತೆ. ಅಷ್ಟೇ ಅಲ್ಲ, ವಿಜಯ್ ಸೇತುಪತಿ ಈ ಚಿತ್ರದಲ್ಲಿ ನಟಿಸಬೇಕಿತ್ತಂತೆ. ಕೊನೆಗೆ ಈ ಕಥೆಯನ್ನು ಕನ್ನಡದಲ್ಲಿ ಮಾಡಲಾಗಿದೆ.

ಸ್ಟಾಕರ್: 

ಹೆಸರೇ ಹೇಳುವಂತೆ ಪೀಡಕನೊಬ್ಬನ ಸುತ್ತ ಈ ಚಿತ್ರ ಸುತ್ತಲಿದ್ದು, ಸುಮನ್ ನಗರ್​ಕರ್ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮಗೋಪಾಲ್ ವರ್ವ ಬಳಿ ಸಹಾಯಕರಾಗಿದ್ದ ಕಿಶೋರ್ ಭಾರ್ಗವ್ ಈ ಚಿತ್ರ ನಿರ್ದೇಶಿಸಿದ್ಧಾರೆ.

ರಾಜ್ಯದ ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿಸುದ್ದಿ : ತಿಂಗಳಲ್ಲಿ 1 ದಿನ `ಸಿರಿಧಾನ್ಯ’ದ ಬಿಸಿಯೂಟ

ಲೋಕಲ್ ಟ್ರೇನ್: 

‘ಡಾರ್ಲಿಂಗ್’ ಕೃಷ್ಣ ಅಭಿನಯದ ‘ಲೋಕಲ್ ಟ್ರೇನ್’ ಈ ವಾರ ಬಿಡುಗಡೆಯಾಗುತ್ತಿರುವ ಇನ್ನೊಂದು ಚಿತ್ರ. ಚಿತ್ರದ ಕಥೆ ರೈಲಿನಲ್ಲೇ ಹೆಚ್ಚಾಗಿ ಸಾಗುವುದರಿಂದ, ಚಿತ್ರಕ್ಕೆ ‘ಲೋಕಲ್ ಟ್ರೖೆನ್’ ಎಂದು ಹೆಸರಿಡಲಾಗಿದೆ ಎನ್ನುತ್ತಾರೆ ಕೃಷ್ಣ. ಈ ಚಿತ್ರದಲ್ಲಿ ಅವರಿಗೆ ನಾಯಕಿಯರಾಗಿ ಮೀನಾಕ್ಷಿ ದೀಕ್ಷಿತ್ ಮತ್ತು ಎಸ್ತರ್ ನರೋನ್ಹಾ ನಟಿಸಿದ್ದಾರೆ. ಡಿ. ರಾಜೇಂದ್ರ ಬಾಬು ಸೇರಿದಂತೆ ಹಲವು ಹಿರಿಯ ನಿರ್ದೇಶಕರ ಜತೆಗೆ ಕೆಲಸ ಮಾಡಿ ಅನುಭವವಿದ್ದ ರುದ್ರಮುನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇನ್​ಸ್ಟಂಟ್ ಕರ್ಮ:

 ಸಂದೀಪ್ ಮಹಾಂತೇಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಇನ್​ಸ್ಟಂಟ್ ಕರ್ಮ’ ನೈಜ ಘಟನೆ ಆಧರಿತ ಸಿನಿಮಾ. ಸಂದೀಪ್ ತಮ್ಮ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದ ಸಂದರ್ಭದಲ್ಲಿ, ಒಂದು ಘಟನೆ ನಡೆಯಿತಂತೆ. ಆ ಘಟನೆಯನ್ನು ಆಧರಿಸಿ ಈ ಚಿತ್ರ ಮಾಡಿದ್ದಾರೆ ಅವರು. ಈ ಚಿತ್ರದಲ್ಲಿ ಯಶ್ ಶೆಟ್ಟಿ, ಕೆಂಡ ಶ್ರೇಷ್ಠ, ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ, ಹರಿ ಧನಂಜಯ್ ಪ್ರಮುಖ ಪಾತ್ರದಲ್ಲಿದ್ದಾರೆ.

ಶೀಘ್ರವೇ ರಾಜ್ಯದಲ್ಲಿ `ಅಸ್ಪೃಶ್ಯತೆ ತಡೆಗೆ `ವಿನಯ ಸಾಮರಸ್ಯ’ ಯೋಜನೆ ಜಾರಿ

ತಲೆದಂಡ: 

ಬಿಡುಗಡೆಯಾಗದಿರುವ ಸಂಚಾರಿ ವಿಜಯ್ ಅಭಿನಯದ ಚಿತ್ರಗಳ ಪೈಕಿ ‘ತಲೆದಂಡ’ ಸಹ ಒಂದು. ಬುದ್ಧಿಮಾಂದ್ಯ ನೊಬ್ಬನ ಪರಿಸರ ಪ್ರೇಮದ ಕಥೆ ಈ ಚಿತ್ರದಲ್ಲಿದ್ದು, ಅದರ ಜತೆಗೆ ಒಂದು ಮುದ್ದಾದ ಪ್ರೇಮಕಥೆ, ರಾಜಕೀಯ, ಅಧಿಕಾರ … ಇವೆಲ್ಲವೂ ಇರಲಿದೆಯಂತೆ. ಪ್ರವೀಣ್ ಕೃಪಾಕರ್ ನಿರ್ದೇಶಿಸಿ ರುವ ಈ ಚಿತ್ರಕ್ಕೆ ಮಲಯಾಳಂ ಸ್ಟಾರ್ ನಟ ಮಮ್ಮೂಟ್ಟಿ ಸಾಥ್ ನೀಡಿದ್ದಾರೆ. ಈ ಚಿತ್ರವನ್ನು ನೋಡುವುದಾಗಿ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ವಿಜಯ್ಗೆ ಜೋಡಿಯಾಗಿ ಚೈತ್ರಾ ಆಚಾರ್ ನಟಿಸಿದ್ದು, ಮಿಕ್ಕಂತೆ ರಂಗಾಯಣ ರಘು ಪತ್ನಿ ಮಂಗಳಾ, ಮಂಡ್ಯ ರಮೇಶ್, ರಮೇಶ್ ಪಂಡಿತ್, ಬಿ ಸುರೇಶ್ ಸೇರಿ ಹಲವರು ಚಿತ್ರದಲ್ಲಿದ್ದಾರೆ.

ಕನ್ನಡಿಗರ ಬಂಜಾರ ಚಿತ್ರ: 

ಕರ್ನಾಟಕದಲ್ಲಿ ಇದುವರೆಗೂ ತುಳು, ಕೊಡವ, ಬ್ಯಾರಿ, ಕೊಂಕಣಿ ಮುಂತಾದ ಪ್ರಾದೇಶಿಕ ಭಾಷೆಯ ಚಿತ್ರಗಳು ಬಿಡುಗಡೆಯಾಗಿವೆ. ಈಗ ‘ಸೇವಾ ದಾಸ್’ ಎಂಬ ಬಂಜಾರ ಚಿತ್ರವೊಂದು ಸದ್ದಿಲ್ಲದೆ ತಯಾರಾಗಿದ್ದು, ಇದೇ ಏ.01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಹಿರಿಯ ನಟ ಸುಮನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ‘ನಾನು ಹುಟ್ಟಿದ್ದು ಚೆನ್ನೈನಲ್ಲಿ. ತಂದೆ-ತಾಯಿ ಮಂಗಳೂರಿನವರು. ಕಳೆದ 40 ವರ್ಷಗಳಲ್ಲಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ.

ಮೊದಲು ರಾಹುಲ್ ಗಾಂಧಿ, ನಂತರ ಅಮಿತ್ ಶಾ ಸಿದ್ದಗಂಗಾ ಮಠಕ್ಕೆ ಭೇಟಿ

ಇದೇ ಮೊದಲ ಬಾರಿ ಬಂಜಾರ ಚಿತ್ರವೊಂದರಲ್ಲಿ ನಟಿಸಿದ್ದು, ಸಂತ ಸೇವಾಲಾಲ್ ಅವರ ಕೃಪೆಯಿಂದ ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ. ಕೆ.ಪಿ.ಎನ್. ಚೌಹಾಣ್ ನಿರ್ದೇಶಿಸಿರುವ ಈ ಚಿತ್ರವನ್ನು ಸೀತಾರಾಂ ಬಡಾವತ್ ನಿರ್ಮಾಣ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು, ‘ಬಂಜಾರ ಭಾಷೆ ಮಾತನಾಡುವ ಜನ ಕರ್ನಾಟಕ ಸೇರಿದಂತೆ ದೇಶದ ವಿವಿದೆಡೆ ಇದ್ದಾರೆ. ನಮ್ಮ ಜನಾಂಗದ ಶಕ್ತಿಯಾಗಿರುವ ಸಂತ ಸೇವಾಲಾಲ್ ಅವರ ಕೃಪೆಯಿಂದ ಇದೇ ಮೊದಲ ಬಾರಿಗೆ ಈ ಚಿತ್ರವನ್ನು ಭಾರತದ ಹಲವು ಕಡೆ ಬಿಡುಗಡೆ ಮಾಡುತ್ತಿದ್ದೇವೆ. ವಿದೇಶದಲ್ಲೂ ಚಿತ್ರ ಬಿಡುಗಡೆ ಆಗಲಿದೆ’ ಎನ್ನುತ್ತಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap