ಕಾಲೇಜು ವಿದ್ಯಾರ್ಥಿಗಳಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ತಮಿಳುನಾಡು 

   ಏಳು ಮಂದಿ ಕಾಲೇಜು ವಿದ್ಯಾರ್ಥಿಗಳು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಆಕೆ ಸಾಮಾಜಿಕ ಜಾಲತಾಣಗಳ ಮೂಲಕ ಓರ್ವ ವಿದ್ಯಾರ್ಥಿಗೆ ಸ್ನೇಹಿತೆಯಾಗಿದ್ದಳು. ಇದೀಗ ಪ್ರಕರಣ ದಾಖಲಾಗಿದ್ದು, ಏಳು ಆರೋಪಿಗಳನ್ನು ಬಂಧಿಸಲಾಗಿದೆ.

   17 ವರ್ಷದ ಬಾಲಕಿ ಸ್ನಾಪ್​ಚಾಟ್ ಮೂಲಕ್ ಪರಿಚಯವಾಗಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಳು. ನಂತರ ಆಕೆಯ ಮೇಲೆ 7 ವಿದ್ಯಾರ್ಥಿಗಳು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಸ್ನೇಹಿತನನ್ನು ಭೇಟಿಯಾಗಲು ಮನೆಯಿಂದ ಹೋಗಿದ್ದಳು, ಬಳಿಕ ಒಂದು ದಿನದವರೆಗೆ ನಾಪತ್ತೆಯಾಗಿದ್ದಳು. ಸೋಮವಾರ ಹಿಂದಿರುಗಿದ್ದಳು.

   ಮನೆಗೆ ಹಿಂದುರಿಗಿದ ಬಳಿಕ ಅಜ್ಜಿಯ ಬಳಿ ಹುಡುಗನೊಬ್ಬ ತನ್ನ ಕೋಣೆಯಲ್ಲಿ ಬಂಧಿಸಿ ತನ್ನ ಆರು ಸ್ನೇಹಿತರ ಜತೆ ಸೇರಿ ಅತ್ಯಾಚಾರ ಮಾಡಿದ್ದಾನೆಂದು ತಿಳಿಸಿದಳು. ಬಾಲಕಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ತನ್ನ ಮನೆಯಲ್ಲಿ ಮಾಹಿತಿ ನೀಡಿದ ನಂತರ, ಪೋಕ್ಸೋ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

   ತನಿಖೆ ನಡೆಯುತ್ತಿದ್ದು, ಪೊಲೀಸರು ಎಲ್ಲಾ 7 ವಿದ್ಯಾರ್ಥಿಗಳಾದ 19 ವರ್ಷದ ರಕ್ಷಿತ್, ಅಭಿನೇಶ್ವರನ್ ಮತ್ತು ನಿತೀಶ್ ಮತ್ತು 20 ವರ್ಷದ ದೀಪಕ್, ಯಾದವ್ ರಾಜ್, ಮುತ್ತು ನಾಗರಾಜ್ ಮತ್ತು ಜೆಬಿನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾಲಕಿ ನ್ಯಾಯ ಒದಗಿಸಿಕೊಡುವಂತೆ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾಳೆ. 

   ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ, ಆಡಳಿತಾರೂಢ ಡಿಎಂಕೆಗೆ ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆರೋಪಿಸಿದ್ದಾರೆ.ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಡಲು ಅಥವಾ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಡಿಎಂಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link