ಬೆಂಗಳೂರು:
ನಾಳೆಯಿಂದ(28) ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಮೆಟ್ರೋದಲ್ಲಿ ಸಂಚರಿಸುವವರು ಪ್ರಯಾಣಕ್ಕೆ ಬೇರೆ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು ಎನ್ನಲಾಗುತ್ತಿದೆ.
ಹೌದು, ಡಿಸೆಂಬರ್ 28ರ ಶುಕ್ರವಾರ ರಾತ್ರಿಯಿಂದ 29, 30 ಅಂದರೆ ಭಾನುವಾರದವರೆಗೂ ಮೆಟ್ರೋ ಸಂಚಾರ ಬಂದ್ ಆಗಲಿದೆ.
ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ಪಿಲ್ಲರ್ ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರಗಿತ್ತು. ಹೀಗಾಗಿ ಅದಕ್ಕೆ ಕಬ್ಬಿಣದ ಸ್ಲೈಡರ್ ಸಪೋರ್ಟ್ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ ಏಕಮುಖದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಬಿಎಂಆರ್ ಸಿಎಲ್ ಮೆಟ್ರೋ ಪಿಲ್ಲರ್ ದುರಸ್ಥಿ ಕಾರ್ಯವನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮೆಟ್ರೋ ಸಂಚಾರ ಬಂದ್ ಆಗಲಿದೆ.
ಎಂಜಿ ರಸ್ತೆಯಿಂದ ಇಂದಿರಾನಗರಕ್ಕೆ ಓಡಾಡುವ ಮೆಟ್ರೋ ಸಂಚಾರ 28 ರಿಂದ 30ರ ವರೆಗೂ ಬಂದ್ ಆಗಲಿದೆ. ಆದರೆ ಇಂದಿರಾನಗರ ಟು ಬೈಯಪ್ಪನಹಳ್ಳಿ ಮೆಟ್ರೋ ಹಾಗೂ ಮೈಸೂರ್ ರಸ್ತೆಯಿಂದ ಎಂಜಿ ರಸ್ತೆ ಮೆಟ್ರೋ ಸಂಚಾರ ಎಂದಿನಂತೆ ಇರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
