ಬಿಎಂಟಿಸಿಗೆ ಶಕ್ತಿ ತುಂಬಿದ ಶಕ್ತಿ ಯೋಜನೆ…!

ಬೆಂಗಳೂರು:
     
     ಈ  ಮುಂಚೆ  ವೋಲ್ವೋ ಬಸ್‌ಗಳಿಗೆ ಜನ ಹತ್ತಲು ಹಿಂಜರಿಯುತ್ತಿದ್ದರು ಆದರೆ ಈಗ  ‘ಶಕ್ತಿ’ ಯೋಜನೆಯಿಂದ ಇವುಗಳಿಗೆ ಬೇಡಿಕೆ ನಿಧಾನವಾಗಿ ಹೆಚ್ಚಾಗುತ್ತಿದೆ.
     ಶಕ್ತಿ ಯೋಜನೆಯಿಂದ ವೋಲ್ವೋ ಬಸ್‌ಗಳಿಗಿಲ್ಲ ಯಾವುದೇ ಎಫೆಕ್ಟ್ ಆಗ್ತಿಲ್ಲ. ಬದಲಿಗೆ, ಒಂದು ವಾರದಲ್ಲಿ ಎಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಿದೆ.
    ಐಷಾರಾಮಿ ಬಸ್‌ಗಳಾದ್ರೆ ನೆಮ್ಮದಿಯ ಪ್ರಯಾಣ ಮಾಡಬಹುದು. ಸಾಮಾನ್ಯ ಬಸ್‌ಗಳು ಫುಲ್ ರಷ್ ಆಗಿರುತ್ತವೆ. ವೋಲ್ವೋ ಸಂಚಾರ ಸಾಕಷ್ಟು ಪ್ರಯಾಣಿಕರಿಗೆ ಆರಾಮದಾಯಕವಾಗಿದೆ. ಎಸಿ ಇರುವ ಕಾರಣ ವೋಲ್ವೋ ಕಡೆ ಹೆಚ್ಚು ಜನ ಮುಖ ಮಾಡ್ತಿದ್ದಾರೆ. ಈ ಮೊದಲು ವೋಲ್ವೋ
     ಕಾರ್ಯಾಚರಣೆಯಿಂದ ನಿತ್ಯ ₹67-70 ಲಕ್ಷ ಆದಾಯ ಬರುತ್ತಿತ್ತು. ಶಕ್ತಿ ಯೋಜನೆ  ಬಳಿಕ ನಿತ್ಯ ₹70-₹73 ಲಕ್ಷ ಆದಾಯ ಬರ್ತಿದೆ ಅಂತ ಬಿಎಂಟಿಸಿ ಹೇಳ್ತಿದೆ.

1.ಶಕ್ತಿ ಯೋಜನೆಯಿಂದ ಸಾಮಾನ್ಯ ಬಸ್‌ಗಳು ರಶ್,2.ಐಷಾರಾಮಿ ಬಸ್‌ಗಳಾದ್ರೆ ನೆಮ್ಮದಿಯ ಪ್ರಯಾಣ, 3.ವೋಲ್ವೋ ಸಂಚಾರ ಸಾಕಷ್ಟು ಪ್ರಯಾಣಿಕರಿಗೆ ಕಂಫರ್ಟ್ಮ, 4.ಪ್ರೀಮಿಯಂ ಬಸ್‌ಗಿಂತ ವೋಲ್ವೋ ಪ್ರಯಾಣ ಸುಖಕರ,5.ಬಿಸಿಲಿನಲ್ಲಿ ಪ್ರೀಮಿಯಂ ಬಸ್‌ಗಳಲ್ಲಿ ಓಡಾಟ ಕಷ್ಟ,,6 ಎಸಿ ಇರೋ ಕಾರಣ ವೋಲ್ವೋ ಕಡೆ ಪ್ರಯಾಣಿಕರ ಒಲವು

ಗೃಹ ಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ

    ಗೃಹ ಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ಜನ ಪರದಾಡ್ತಿದ್ದಾರೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಮೇಲಿಂದ ಮೇಲೆ ಸರ್ವರ್‌ ಡೌನ್‌ ಆಗ್ತಿದೆ. ಇದರ ಮಧ್ಯೆಯೂ ನಿನ್ನೆ ಬೆಂಗಳೂರಲ್ಲಿ 1 ಲಕ್ಷದ 6 ಸಾವಿರದ 958 ಮಂದಿ ನೋಂದಣಿ ಮಾಡಿಸಿದ್ದಾರೆ. ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್‌ಗಳಲ್ಲಿ ಜನ ಕ್ಯೂ ನಿಂತು ಅರ್ಜಿ ಸಲ್ಲಿಸ್ತಿದ್ದಾರೆ. ಮೊನ್ನೆ 55 ಸಾವಿರ ಜನ ಅರ್ಜಿ ಸಲ್ಲಿಕೆ ಮಾಡಿದ್ರು.

    ಇನ್ನು ಗೃಹ ಜ್ಯೋತಿ ಯೋಜನೆ ಬಗ್ಗೆ ಟ್ವೀಟ್‌ ಮಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮುಂದಿನ ತಿಂಗಳಿನಿಂದ ನಿಮಗೆ ವಿದ್ಯುತ್‌ ಬಿಲ್‌ ಬರಲ್ಲ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap