ತುಮಕೂರು : ದೇವರಾಯನದುರ್ಗ ಜಾತ್ರೆ ; ವಿವಿಧ ಹರಾಜು ಪ್ರಕ್ರಿಯೆ

 ತುಮಕೂರು  : 

      ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಜಾತ್ರೆಯು ಮಾರ್ಚ್ 20 ರಿಂದ ಏಪ್ರಿಲ್ 1ರವರೆಗೆ ಜರುಗಲಿದ್ದು, ಜಾತ್ರೆಗೆ ಸಂಬಂಧಿಸಿದಂತೆ ಫೆಬ್ರವರಿ 26ರಂದು ವಿವಿಧ ಹರಾಜು ಪಕ್ರಿಯೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

      ಜಾತ್ರೆಯ ಪ್ರಯುಕ್ತ ಅಂಗಡಿಗಳ ನೆಲ ಬಾಡಿಗೆ ಹಾಗೂ ವಾಹನಗಳ ಪ್ರವೇಶ ಶುಲ್ಕ ವಸೂಲಾತಿ, ಭಕ್ತಾದಿಗಳ ಪಾದರಕ್ಷೆಗಳನ್ನು ಕಾಯುವ ಹಕ್ಕು ಭಾದ್ಯತೆ ಹಾಗೂ ಈಡುಗಾಯಿ ಹರಾಜು ಪ್ರಕ್ರಿಯೆಗಳನ್ನು ನಿಗಧಿತ ಸಮಯದಲ್ಲಿ ನಡೆಸಲಾಗುವುದು.

ಅಂಗಡಿ ಹಾಗೂ ವಾಹನಗಳ ಶುಲ್ಕ ವಸೂಲಿ ಹರಾಜು:

ಆಸಕ್ತರು ಅಂಗಡಿಗಳ ನೆಲ ಬಾಡಿಗೆ ಹಾಗೂ ವಾಹನಗಳ ಪ್ರವೇಶ ಶುಲ್ಕ ವಸೂಲಾತಿ ಹರಾಜನ್ನು ಫೆಬ್ರವರಿ 26ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಕ್ರಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಹರಾಜಿನಲ್ಲಿ ಪಾಲ್ಗೊಳ್ಳುವ ಪ್ರತಿ ಹರಾಜುದಾರರು 10,000 ರೂ.ಗಳ ಠೇವಣಿ ಪಾವತಿಸಿ, ಭಾಗವಹಿಸಬಹುದು.

ಭಕ್ತಾದಿಗಳ ಪಾದರಕ್ಷೆ ಕಾಯುವ ಹರಾಜು:

ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾಧಿಗಳ ಪಾದರಕ್ಷೆಗಳನ್ನು ಕಾಯುವ ಹಕ್ಕು ಬಾಧ್ಯತೆಯನ್ನು ಪಡೆಯಲು 2021ರ ಮಾರ್ಚ್ 1 ರಿಂದ 2022ರ ಫೆಬ್ರುವರಿ 28ರವರೆಗಿನ ಒಂದು ವರ್ಷದ ಅವಧಿಗೆ ಹರಾಜನ್ನು ಆಮಂತ್ರಿಸಿದ್ದು, ಸದರಿ ಹರಾಜನ್ನು ಫೆ.26ರಂದು ಬೆಳಿಗ್ಗೆ 11.30 ಗಂಟೆಗೆ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಕ್ಷೇತ್ರದಲ್ಲಿ ಎರಡು ದೇವಾಲಯಗಳಿದ್ದು, ಸದರಿ ದೇವಾಲಯಗಳ ಹತ್ತಿರವಿರುವ ಪಾದರಕ್ಷೆ ಕಾಯುವ ಹರಾಜನ್ನು ಪ್ರತ್ಯೇಕವಾಗಿ ಕೂಗಬೇಕು. ಸರ್ಕಾರದ ಆದೇಶದಂತೆ ನಿಯಮಾನುಸಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಡಲಾಗಿದೆ.

      ಆಸಕ್ತಿಯುಳ್ಳವರು ಸಂಪೂರ್ಣ ವಿಳಾಸದ ದಾಖಲೆ(ಫೋಟೋ, ಆಧಾರ್ ಕಾರ್ಡ್, ಆಹಾರ ಪಡಿತರ ಚೀಟಿ)ಯ ಪ್ರತಿಗಳನ್ನು ಕ್ಷೇತ್ರದ ಕಚೇರಿಗೆ ಸಲ್ಲಿಸಬೇಕು. ಕಡ್ಡಾಯವಾಗಿ ಕನಿಷ್ಠ ಒಂದು ಸ್ಥಿರ ಆಸ್ತಿಯ ವಿವರ ದಾಖಲೆ ಒದಗಿಸಬೇಕು. ಒಂದು ಜೊತೆ ಪಾದರಕ್ಷೆಗಳಿಗೆ ಭಕ್ತಾದಿಗಳಿಂದ ಎರಡು ರೂ. ಗಳ ದರವನ್ನು ವಸೂಲಿ ಮಾಡವ ಷರತ್ತಿಗೆ ಒಳಪಡಬೇಕು.

 ಈಡುಗಾಯಿಗಳನ್ನು ಸಂಗ್ರಹಿಸಿ ತೆಗೆದುಕೊಳ್ಳುವ ಹರಾಜು

     ಶ್ರೀ ಭೋಗಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ಈಡುಗಾಯಿಗಳನ್ನು ಸಂಗ್ರಹಿಸಿ ತೆಗೆದುಕೊಳ್ಳುವ ಹಕ್ಕನ್ನು ಪಡೆಯಲು 2021ರ ಮಾರ್ಚ್ 1 ರಿಂದ 2022ರ ಫೆಬ್ರುವರಿ 28ರವರೆಗಿನ ಒಂದು ವರ್ಷದ ಅವಧಿಗೆ ಹರಾಜನ್ನು ಆಮಂತ್ರಿಸಿದ್ದು, ಸದರಿ ಹರಾಜನ್ನು ಫೆಬ್ರುವರಿ 26ರ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

      ಶ್ರೀ ಭೋಗಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ಈಡುಗಾಯಿಗಳನ್ನು ಸಂಗ್ರಹಿಸಿ ತೆಗೆದುಕೊಳ್ಳುವ ಹಕ್ಕನ್ನು ಹರಾಜು ಮೂಲಕ ಗುತ್ತಿಗೆ ಪಡೆಯಲು ಆಸಕ್ತಿಯುಳ್ಳವರು 10ಸಾವಿರ ರೂ.ಗಳ ಇ.ಎಂ.ಡಿ. ಮೊತ್ತವನ್ನು ಠೇವಣಿಯಿಟ್ಟು ಕೂಗಬೇಕು. ಹರಾಜು ಯಾರ ಹೆಸರಿಗೆ ನಿಲ್ಲುತ್ತದೆ ಅವರು ಒಂದು ವರ್ಷದ ಹರಾಜು ಮೊತ್ತವನ್ನು ಕೂಡಲೇ ಪಾವತಿಸಬೇಕು. ಸಂಪೂರ್ಣ ವಿಳಾಸದ ದಾಖಲೆ, ಫೋಟೋ, ಐಡಿ ದಾಖಲೆ(ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆಹಾರ ಪಡಿತರ ಚೀಟಿ)ಯ ನಕಲು ಪ್ರತಿಗಳನ್ನು ಕ್ಷೇತ್ರದ ಕಛೇರಿಗೆ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap