ಮನ್ನತ್‌ ತೊರೆದ ಶಾರೂಖ್‌ ಖಾನ್‌ …!

ಮುಂಬೈ :

    ಶಾರುಖ್ ಖಾನ್ ಒಡೆತನದ ಮನ್ನತ್ ನಿವಾಸದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇದು ಬಾಂದ್ರಾದ ಟೂರಿಸ್ಟ್ ಸ್ಪಾಟ್ ರೀತಿಯಲ್ಲಿ ಮಾರ್ಪಾಡಾಗಿದೆ. ಅಭಿಮಾನಿಗಳು ಆಗಾಗ ಇಲ್ಲಿಗೆ ಆಗಮಿಸಿ ಶಾರುಖ್ ಖಾನ್​ಗಾಗಿ ಕಾಯುತ್ತಾ ಇರುತ್ತಾರೆ. ಆದರೆ, ಇಲ್ಲಿ ಹುಡುಕಿದರೂ ಇನ್ನು ಶಾರುಖ್ ಖಾನ್ ಅವರು ಸಿಗೋದಿಲ್ಲ! ಏಕೆಂದರೆ ಶಾರುಖ್ ಖಾನ್ ಅವರು ಕುಟುಂಬದ ಜೊತೆ ಮನೆ ತೊರೆದಾಗಿದೆ! ಅವರು ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ. ಇದಕ್ಕೆ ಕಾರಣ ಕೂಡ ರಿವೀಲ್ ಆಗಿದೆ.

   ಶಾರುಖ್ ಖಾನ್ ಅವರು ಸ್ಟಾರ್ ನಟ. ಹೀಗಾಗಿ, ಅವರು ವಾಸಿಸಲು ‘ಮನ್ನತ್’ ನಿವಾಸ ಸೂಕ್ತ ಸ್ಥಳ. ಇಲ್ಲಿ ಅಭಿಮಾನಿಗಳು ಬರದಂತೆ ತಡೆಯಲು ದೊಡ್ಡ ತಡೆ ಗೋಡೆ ಇದೆ. ಅಲ್ಲದೆ, ಈ ಮನೆಗೆ ದೊಡ್ಡ ಗೇಟ್ ಕೂಡ ಇದೆ. ಆದಾಗ್ಯೂ ಶಾರುಖ್ ಖಾನ್ ಈ ನಿವಾಸ ತೊರೆದು ಅಪಾರ್ಟ್​​ಮೆಂಟ್​ಗೆ ಸ್ಥಳಾಂತರಗೊಳ್ಳುತ್ತಿರುವುದು ಏಕೆ ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಕಾರಣ ಮನೆಯ ನವೀಕರಣ ಕಾರ್ಯ.