ವೃದ್ಧ ದಂಪತಿ  ಕೊಲೆ: ಮೂರು ಆರೋಪಿಗಳ ಬಂಧನ

ಶಿಡ್ಲಘಟ್ಟ :
     ನಗರದ ವಾಸವಿ ಕಲ್ಯಾಣ  ಮಂಟಪ ಹಿಂಭಾಗ ಕಾಮಾಟಿಗಾರ ಪೇಟೆ ಮನೆಯೊಂದರಲ್ಲಿ ಕಳೆದ ಫೆಬ್ರವರಿ ,9,2022 ರಂದು  ಭೀಕರವಾಗಿ ವೃದ್ಧ ದಂಪತಿಗಳ ಜೋಡಿ ಕೊಲೆ ನಡೆದಿತ್ತು,
ಶ್ರೀನಿವಾಸ್ ಅಲಿಯಾಸ್ ದೊಂತಿ ಸೀನಪ್ಪ(76), ಪತ್ನಿ ಪದ್ಮಾವತಿ(67) ವರ್ಷ ಕೊಲೆಯಾದ ದುರ್ದೈವಿಗಳು ಮೃತಪಟ್ಟಿದ್ದರು. 
ಜೋಡಿ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀನಿವಾಸಪುರ ನಗರದ ಇಂದಿರಾನಗರದಲ್ಲಿ ಫೈಜ್ ವೈಝ್ ಖಾನ್ ಮೀನು ವ್ಯಾಪಾರದ ಮಾಡುತ್ತಿದ್ದ ಎನ್ನಲಾಗಿದ್ದು, ಶಿಡ್ಲಘಟ್ಟ ನಗರದಲ್ಲಿ ಮೀನು ಹಿಡಿಯಲು ಬಂದು, ವೃದ್ಧ ದಂಪತಿಗಳ ಮನೆ ಗವಾಕ್ಷಿ ಒಳಗೆ ನುಗ್ಗಿ ಹಣ ಮತ್ತು ಒಡವೆಗಳನ್ನು ಕಳವು ಮಾಡಿ, ವೃದ್ಧ ದಂಪತಿಗಳನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಕೊಲೆ ನಡೆದ 45 ದಿನಗಳ ಬಳಿಕ ಆರೋಪಿಗಳನ್ನು ಶಿಡ್ಲಘಟ್ಟ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap