ಮುಂಬೈ:
ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಅವರು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನವೆಂಬರ್ 17 ರಂದು ನಿಗದಿಯಾಗಿದ್ದ ರ್ಯಾಲಿಯನ್ನು ಶುಕ್ರವಾರ ರದ್ದುಗೊಳಿಸಿದ್ದಾರೆ.ತಮ್ಮ ಶಿವಾಜಿ ಪಾರ್ಕ್ ರ್ಯಾಲಿಗೆ ಚುನಾವಣಾ ಆಯೋಗ ಇನ್ನೂ ಅನುಮತಿ ನೀಡದ ಹಿನ್ನೆಲೆಯಲ್ಲಿ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ ಠಾಕ್ರೆ ತಿಳಿಸಿದ್ದಾರೆ.
ರ್ಯಾಲಿ ಬದಲಾಗಿ, ಎಂಎನ್‌ಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಮುಂಬೈ ಮತ್ತು ಥಾಣೆಯ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವುದಾಗಿ ಠಾಕ್ರೆ ಹೇಳಿದ್ದಾರೆ. “ನನಗೆ ಇನ್ನೂ ಚುನಾವಣಾ ಆಯೋಗದ ಅನುಮತಿ ಸಿಕ್ಕಿಲ್ಲ ಮತ್ತು ರ್ಯಾಲಿಗೆ ಕೇವಲ ಒಂದೂವರೆ ದಿನ ಇದೆ. ಈ ಒಂದೂವರೆ ದಿನದಲ್ಲಿ ರ್ಯಾಲಿಗೆ ಸಿದ್ಧತೆ ಮಾಡಿಕೊಳ್ಳುವುದು ಕಷ್ಟಕರ. ಬದಲಿಗೆ, ನಾನು ಮುಂಬೈ ಮತ್ತು ಥಾಣೆಯ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ” ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಶಿವಸೇನೆ(ಯುಬಿಟಿ) ಮತ್ತು ಎಂಎನ್‌ಎಸ್ ನವೆಂಬರ್ 17 ರಂದು ಐಕಾನಿಕ್ ಶಿವಾಜಿ ಪಾರ್ಕ್‌ನಲ್ಲಿ ರ್ಯಾಲಿ ನಡೆಸಲು ಅನುಮತಿ ಕೋರಿದ್ದವು. ಉದ್ದೇಶಿತ ಕಾರ್ಯಕ್ರಮಕ್ಕೆ ಎರಡೂ ಪಕ್ಷಗಳು ಇನ್ನೂ EC ಅನುಮತಿ ಪಡೆದಿಲ್ಲ.