2019ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ!!

ಬೆಂಗಳೂರು :

       ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿವರ್ಷ ನವೆಂಬರ್ 1ರಂದು ಕೊಡಮಾಡುವ ಕನ್ನಡ ರಾಜ್ಯೋತ್ಸವ ಪಟ್ಟಿಯನ್ನು ಇದೀಗ ರಾಜ್ಯ ಸರ್ಕಾರ ಪ್ರಕಟಿಸಿದೆ.

     ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

      ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ಕನ್ನಡ ನಾಡು ನುಡಿಗಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಒಟ್ಟು 64 ಗಣ್ಯರಿಗೆ ಈ ಬಾರಿ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.

ಪ್ರಶಸ್ತಿ ಪಡೆಯಲಿರುವ ಸಾಧಕರು ಪಟ್ಟಿ :
  1. ಡಾ.ಮಂಜಪ್ಪ ಶೆಟ್ಟಿ ಮಸಲಿ, ಸಾಹಿತ್ಯ
  2. ಪ್ರೊ.ಬಿ ರಾಜಶೇಖರಪ್ಪ, ಸಾಹಿತ್ಯ
  3. ಚಂದ್ರಕಾಂತ ಕರದಳ್ಳಿ, ಸಾಹಿತ್ಯ
  4. ಡಾ.ಸರಸ್ವತಿ ಚಿಮ್ಮಲಗಿ, ಸಾಹಿತ್ಯ
  5. ಪರಶುರಾಮ ಸಿದ್ಧಿ, ರಂಗಭೂಮಿ
  6. ಪಾಲ್ ಸುದರ್ಶನ್, ರಂಗಭೂಮಿ
  7. ಹೊಲೆ ಶೇಖರ್, ರಂಗಭೂಮಿ
  8. ಎನ್ ಶಿವಲಿಂಗಯ್ಯ, ರಂಗಭೂಮಿ
  9. ಡಾ.ಹೆಚ್.ಕೆ.ರಾಮನಾಥ, ರಂಗಭೂಮಿ
  10. ಭಾರ್ಗವಿ ನಾರಾಯಣ, ರಂಗಭೂಮಿ
  11. ಛೋಟೆ ರೆಹಮತ್ ಖಾನ್, ಸಂಗೀತ
  12. ನಾಗವಲ್ಲಿ ನಾಗರಾಜ್, ಸಂಗೀತ
  13. ಡಾ.ಮುದ್ದು ಮೋಹನ್, ಸಂಗೀತ
  14. ಶ್ರೀನಿವಾಸ ಉಡುಪ, ಸಂಗೀತ
  15. ನೀಲಗಾರ ದೊಡ್ಡಗವಿಬಸಪ್ಪ, ಮಂಟೇಸ್ವಾಮಿ ಪರಂಪರೆ, ಜಾನಪದ
  16. ಹೊಳಬಸಯ್ಯ ದುಂಡಯ್ಯ ಸಂಬಳದ, ಜಾನಪದ
  17. ಭೀಮಸಿಂಗ್ ಸಕಾರಾಮ್ ರಾಥೋಡ್, ಜಾನಪದ
  18. ಉಸ್ಮನ್ ಸಾಬ್ ಖಾದರ್ ಸಾಬ್, ಜಾನಪದ
  19. ಕೊಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ, ಜಾನಪದ
  20. ಕೆ ಆರ್ ಹೊಸಳಯ್ಯ, ಜಾನಪದ
  21. ವಿ ಎ ದೇಶಪಾಂಡೆ, ಶಿಲ್ಪಕಲೆ
  22. ಕೆ ಜ್ಞಾನೇಶ್ವರ, ಶಿಲ್ಪಕಲೆ
  23. ಯು.ರಮೇಶರಾವ್, ಚಿತ್ರಕಲೆ
  24. ಮೋಹನ ಸಿತನೂರು, ಚಿತ್ರಕಲೆ
  25. ವಿಶ್ವನಾಥ್ ಭಾಸ್ಕರ್ ಗಾಣಿಗ, ಕ್ರೀಡೆ
  26. ಚೇನಂಡ ಎ ಕುಟ್ಟಪ್ಪ, ಕ್ರೀಡೆ
  27. ನಂದಿತ ನಾಗನಗೌಡರ್, ಕ್ರೀಡೆ
  28. ಶ್ರೀಮತಿ ವನಿತಕ್ಕ, ಯೋಗ
  29. ಕು.ಖುಷಿ, ಯೋಗ
  30. ಶ್ರೀಧರ ಭಂಡಾರಿ ಪುತ್ತೂರು, ಯಕ್ಷಗಾನ
  31. ವೈ ಮಲ್ಲಪ್ಪ ಗವಾಯಿ, ಬಯಲಾಟ
  32. ಶೈಲಶ್ರೀ, ಚಲನಚಿತ್ರ
  33. ಜಯಕುಮಾರ ಕೊಡಗನೂರ, ಕಿರುತೆರೆ
  34. ಎಸ್ ಆರ್ ಗುಂಚಾಳ್, ಶಿಕ್ಷಣ
  35. ಪ್ರೊ.ಟಿ.ಶಿವಣ್ಣ, ಶಿಕ್ಷಣ
  36. ಡಾ.ಕೆ.ಚಿದಾನಂದಗೌಡ, ಶಿಕ್ಷಣ
  37. ಡಾ.ಗುರುರಾಜ ಕರ್ಜಗಿ, ಶಿಕ್ಷಣ
  38. ಡಾ.ವಿಜಯ ಸಂಕೇಶ್ವರ, ಸಂಕೀರ್ಣ
  39. ಎಸ್ ಟಿ ಶಾತ ಗಂಗಾಧರ್, ಸಂಕೀರ್ಣ
  40. ಪ.ಬ್ರ.ಡಾ.ಚನ್ನವೀರ ಶಿವಾಚಾರ್ಯರು, ಸಂಕೀರ್ಣ
  41. ಲೆ.ಜ.ಬಿಎನ್ ಬಿಎಂ.ಪ್ರಸಾದ್, ಸಂಕೀರ್ಣ
  42. ಡಾ.ನಾ.ಸೋಮೇಶ್ವರ್, ಸಂಕೀರ್ಣ
  43. ಕೆ.ಪ್ರಕಾಶ ಶೆಟ್ಟಿ, ಅಧ್ಯಕ್ಷರು, ಎಂಆರ್ ಜಿ ಗ್ರೂಪ್, ಸಂಕೀರ್ಣ
  44. ಬಿ ವಿ ಮಲ್ಲಿಕಾರ್ಜುನಯ್ಯ, ಪತ್ರಿಕೋದ್ಯಮ
  45. ರಮೇಶ ವೈದ್ಯ, ಸಹಕಾರ
  46. ಎಸ್ ಜಿ ಭಾರತಿ, ಸಮಾಜ ಸೇವೆ
  47. ಕತ್ತಿಗೆ ಚನ್ನಪ್ಪ, ಸಮಾಜ ಸೇವೆ
  48. ಬಿಕೆ ದೇವರಾಜ್, ಕೃಷಿ
  49. ವಿಶ್ವೇಶ್ವರ ಸಜ್ಜನ್, ಕೃಷಿ
  50. ಸಾಲುಮರದ ವೀರಾಚಾರ್, ಪರಿಸರ
  51. ಶಿವಾಜಿ ಛತ್ರಪ್ಪ ಕಾಗಣಿಕರ್, ಪರಿಸರ
  52. ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್, ಸಂಘ-ಸಂಸ್ಥೆ
  53. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ರೀ, ಹನಮಂತಪುರ, ಕರ್ನಾಟಕ, ಸಂಘ-ಸಂಸ್ಥೆ
  54. ಡಾ.ಹನುಮಂತರಾಯ ಪಂಡಿತ್, ವೈದ್ಯಕೀಯ
  55. ಡಾ.ಆಂಜನಪ್ಪ, ವೈದ್ಯಕೀಯ
  56. ಡಾ.ನಾಗರತ್ನ, ವೈದ್ಯಕೀಯ
  57. ಡಾ.ಜಿ.ಟಿ ಸುಭಾಷ್, ವೈದ್ಯಕೀಯ
  58. ಡಾ.ಕೃಷ್ಣಪ್ರಸಾದ, ವೈದ್ಯಕೀಯ
  59. ಕುಮಾರ್ ಎನ್, ನ್ಯಾಯಾಂಗ
  60. ಜಯವಂತ ಮನ್ನೊಳಿ, ಹೊರನಾಡು
  61. ಗಂಗಾಧರ ಬೇವಿನಕೊಪ್ಪ, ಹೊರನಾಡು
  62. ಬಿ ಚಿ ಮೋಹನದಾಸ್, ಹೊರನಾಡು
  63. ನವರತ್ನ ಇಂದುಕುಮಾರ, ಗುಡಿ ಕೈಗಾರಿಕೆ
  64. ಕೆ ವಿ ಸುಬ್ರಮಣ್ಯಂ, ವಿಮರ್ಶೆ

      ನ್ಯಾ. ನಾಗಮೋಹನ್‌ದಾಸ್‌ ಸಮಿತಿ ವರದಿ ಆಧಾರದಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಿದ್ಧಪಡಿಸಲಾಗಿದೆ. ಸಮಿತಿಯ ಶಿಫಾರಸಿನಂತೆ ಕನ್ನಡ ರಾಜ್ಯೋತ್ಸವ ಆಚರಿಸುವ ವರ್ಷದಷ್ಟೇ ಸಂಖ್ಯೆಯ ಪ್ರಶಸ್ತಿ ನೀಡುವುದು ಹಾಗೂ 60 ವರ್ಷ ಮೀರಿದವರಿಗೆ ನೀಡಬೇಕೆಂಬ ನಿಯಮವನ್ನು ಪಾಲಿಸಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap