ಖಾಸಗಿ ನೀರಿನ ಟ್ಯಾಂಕರ್‌ ಮಾಲೀಕರಿಗೆ ಸರ್ಕಾರದಿಂದ ಷಾಕ್‌….!

ಬೆಂಗಳೂರು

    ಬೆಂಗಳೂರಿನಲ್ಲಿ ನೀರಿನ ಕೊರತೆ ಉಂಟಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ನೀರಿನ ಟ್ಯಾಂಕರ್‌ ಮಾಲೀಕರು ಮನಬಂದಂತೆ ನೀರಿನ ದರ ಏರಿಸಿ ಜನರಿಂದ ಅಧಿಕ ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದ ಕ್ರಮವೇನು ಎಂದು ಅಧಿವೇಶದಲ್ಲಿ ವಿಪಕ್ಷನಾಯಕರು ಪ್ರಶ್ನಿಸಿದ್ದಾರೆ.

    ಈ ಪ್ರಸ್ತಾಪಕ್ಕೆ ಉತ್ತರಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಬೇಸಿಗೆಯಲ್ಲಿ ಟ್ಯಾಂಕರ್ ಮತ್ತು ಬೋರ್‌ವೆಲ್‌ಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಹಾಗೂ ಟ್ಯಾಂಕರ್‌ಗಳಿಗೆ ದರ ನಿಗದಿಪಡಿಸಬೇಕು ಎನ್ನುವ ಬಿಜೆಪಿ ಶಾಸಕರ ಸಲಹೆಗಳನ್ನು ಪರಿಗಣಿಸುವುದಾಗಿ ತಿಳಿಸಿದ್ದಾರೆ.

   ಬೇಸಿಗೆಯ ಕೆಲವು ಸಂದರ್ಭದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯು ಬೋರ್‌ವೆಲ್‌ನಿಂದ ನೀರನ್ನು ಜನರಿಗೆ ಪೂರೈಸುವ ವ್ಯವಸ್ಥೆ ಮಾಡುತ್ತದೆ. ಆದರೆ ಖಾಸಗಿ ಬೋರ್‌ವೆಲ್‌ಗಳ ಮೇಲೆ ಬಿಡಬ್ಲ್ಯುಎಸ್‌ಎಸ್‌ಬಿಗೆ ಯಾವುದೇ ನಿಯಂತ್ರಣವಿಲ್ಲ. ಖಾಸಗಿಯವರು ಅವರೇ ನೀರು ತಂದು ಸರಬರಾಜು ಮಾಡುತ್ತಾರೆ. ಬಿಡಬ್ಲ್ಯುಎಸ್‌ಎಸ್‌ಬಿ ಖಾಸಗಿ ಬೋರ್‌ವೆಲ್‌ಗಳ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದಿರುವುದಿಲ್ಲ. ಸದ್ಯ ನೀರು ದೊಡ್ಡ ವ್ಯಾಪಾರವಾಗಿದೆ ಎಂದರು.

   ಈ ವೇಳೆ ಬಿಜೆಪಿ ಶಾಸಕರ, ನೀರಿನ ಬೇಡಿಕೆ ಹೆಚ್ಚಿದಂತೆ ಖಾಸಗಿಯವರು ದರವನ್ನು ಹೆಚ್ಚಿಸುತ್ತಾರೆ. ಹೀಗಾಗಿ ಸರ್ಕಾರ ಟ್ಯಾಂಕರ್‌ಗೆ 750-800 ರಂತೆ ದರವನ್ನು ನಿಗದಿಪಡಿಸಿ. ಇದು ಜನರಿಗೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.

   ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಕೆ ಶಿವಕುಮಾರ್‌, ನನಗೆ ಒಳ್ಳೆಯ ಸಲಹೆ ನೀಡಿದ್ದೀರಿ. ಈ ಬಗ್ಗೆ ಶೀಘ್ರದಲ್ಲೇ ಸಭೆ ಕರೆಯುತ್ತೇವೆ. ಜಂಟಿ ಜ್ಞಾಪಕ ಪತ್ರ ನೀಡಿ ಸಭೆ ನಡೆಸುತ್ತೇವೆ. ಅಂತರ್ಜಲವು ಸರ್ಕಾರಕ್ಕೆ ಸೇರಿದೆ. ಅದರ ಮೇಲೆ ನಮಗೆ ನಿಯಂತ್ರಣವಿದೆ. ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

    ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್‌.ಅಶೋಕ್‌, ಶೇಕಡಾ 30ರಷ್ಟು ಕಾವೇರಿ ನೀರು ಕಡಿಮೆಯಾಗಿದೆ. ಕೊಳವೆ ಬಾವಿಗಳಲ್ಲಿ ನೀರಿಲ್ಲದ ಕಾರಣ ಕಾವೇರಿ ನೀರಿಗಾಗಿ ಜನರು ಆಗ್ರಹಿಸುತ್ತಿದ್ದಾರೆ. ಇನ್ನೂ ನಾಲ್ಕು ತಿಂಗಳು ಬೇಸಿಗೆಯನ್ನು ಎದುರಿಸಬೇಕು. ಸದ್ಯ ಜನರು ಅನುಸರಿಸಿಕೊಂಡು ಹೋಗಬಹುದು ಆದರೆ ನಾಲ್ಕು ತಿಂಗಳು ಕಷ್ಟ ಎಂದರು.

   ಕಂದಾಯ ಕಾನೂನಿನ ಅಡಿಯಲ್ಲಿ ಸರ್ಕಾರ ಖಾಸಗಿ ಬೋರ್‌ವೆಲ್‌ಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಎಲ್ಲರಿಗೂ ನೀರು ವಿತರಿಸಬಹುದು. ಜಿಲ್ಲಾಧಿಕಾರಿಗಳ ಮೂಲಕ ಇದನ್ನು ಮಾಡಲು ಅಧಿಕಾರವಿದೆ. ಎಲ್ಲ ಟ್ಯಾಂಕರ್‌ಗಳನ್ನು ಒಂದೇ ನೆಟ್‌ವರ್ಕ್ ಅಡಿಯಲ್ಲಿ ತರಲು ನಾಗರಿಕ ಸಂಸ್ಥೆಯಲ್ಲಿ ಈಗಿರುವ ಬಲವನ್ನು ಬಳಸಿಕೊಂಡು ಸಾಮಾನ್ಯ ಸಂಸ್ಥೆ ರಚಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಸಲಹೆಯನ್ನು ಒಪ್ಪಿಕೊಂಡು ನೀರಿನ ಮಾಫಿಯಾವನ್ನು ನಿಯಂತ್ರಿಸುವ ಬೇಡಿಕೆಗೆ ಒಪ್ಪಿಗೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link