ಬೆಸ್ಕಾಂ ಕಚೇರಿಯಲ್ಲಿ ಲೈಂಗಿಕ ಕಿರುಕುಳದ ಶಾಕ್

ತಿಪಟೂರು:

  ಅಹೋರಾತ್ರಿ ಧರಣಿಗೆ ಮುಂದಾದ ಮಹಿಳಾ ಸಿಬ್ಬಂದಿ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ (ಜ.24)ಯ ದಿನದಂದೆ ನಗರದ ಬೆಸ್ಕಾಂ ಕಚೇರಿಯ ಸಿಬ್ಬಂದಿಯೊಬ್ಬ ಇಲ್ಲಿನ ಕೆಲ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ತಿಪಟೂರು ಉಪ ವಿಭಾಗದ ಬೆಸ್ಕಾಂ ಕಂದಾಯ ಶಾಖೆಯಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬ ನಗರದ ಬೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸುಮಾರು 7 ಜನ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ನಾವುಗಳು ನೆಮ್ಮದಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಮಹಿಳಾ ಮಾಪಕ ಓದುಗ ಸಿಬ್ಬಂದಿ ವಿಭಾಗೀಯ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ.

ನನ್ನನ್ನು ಅಣ್ಣ ಎನ್ನ ಬೇಡ :

ಈ ಬಗ್ಗೆ ಮಾಪಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮಾತನಾಡಿ, ನಾನು ಕಂದಾಯ ಇಲಾಖೆಯಲ್ಲಿ ಸಹಾಯಕರಾದ ಆ ವ್ಯಕ್ತಿಯನ್ನು ನಾನು ಅಣ್ಣ ಎಂದೇ ಕರೆಯುತ್ತಿದೆ. ಕಳೆದ ಜ. 18 ರಂದು ಬೆಳಗ್ಗೆ ಅವರು ಕರೆ ಮಾಡಿದರು,

ಆಗ ನಾನು ಏನಣ್ಣ ಎಂದಿದ್ದಕ್ಕೆ ನನ್ನನ್ನು ಅಣ್ಣ ಎಂದು ಕರೆಯಬೇಡ ನನಗೆ ನನ್ನದೇ ಆದ ಭಾವನೆಗಳಿವೆ ಎಂದಾಗ ನಾನು ಸರಿ ಅಣ್ಣ ಎಂದಿದ್ದಕ್ಕೆ ಅಣ್ಣ ಎಂದು ಕರೆಯಬೇಡ ಎಂದು ಹೇಳಿಲ್ಲವೇ ನಿನ್ನ ಜೋರಾಗಿ ಹೇಳಿ, ನಿನ್ನ ಜೊತೆ ಮಾತನಾಡಬೇಕು ಎಂದರು ನಾನು ನನ್ನ ಮಗಳನ್ನು ಶಾಲೆಗೆ ಬೀಡಬೇಕು ಎಂದಿದ್ದಕ್ಕೆ ನಾನೇ ಮತ್ತೆ ಕರೆ ಮಾಡುತ್ತೇನೆಂದು ಹೇಳಿ ಸುಮಾರು 15 ಬಾರಿ ಕರೆ ಮಾಡಿದರು ನಾನು ಕರೆಯನ್ನು ಸ್ವೀಕರಿಸಲಿಲ್ಲ.

ಇದಕ್ಕೆ ಸಂಜೆ 5.15 ರಲ್ಲಿ ನನ್ನ ಮನೆಗೆ ಬಂದು ನಿನ್ನ ಜೊತೆ ಮಾತನಾಡಬೇಕು 10 ನಿಮಿಷ ನಿಮ್ಮ ತಂದೆಯವರನ್ನು ಹೊರಗೆ ಕಳಿಹಿಸು ಎಂದರು. ನನ್ನ ತಂದೆಯವರು ಏಕೆ ಬಂದಿದ್ದಾರೆಂದು ಕೇಳಿದ್ದಕ್ಕೆ ಮನೆ ನೋಡಲು ಬಂದಿದ್ದೇನೆ ಎಂದರು.ನನ್ನ ಮಗಳನ್ನು ಟ್ಯೂಷನ್‍ಗೆ ಬಿಡಲು ಹೋದಾಗ ನನ್ನನ್ನು ಹಿಂಬಾಲಿಸಿಕೊಂಡು ಬರುತ್ತಾರೆ.

ಈ ಬಗ್ಗೆ ಅವರ ಹೆಂಡತಿ ನನಗೆ ನಿನ್ನದೇ ತಪ್ಪೆಂದು ಮಾತನಾಡುತ್ತಾರೆ. ಇದರಿಂದ ನನಗೆ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಆಗದೆ ಮಾನಸಿಕವಾಗಿ ಕುಗ್ಗಿ ಹೋಗಿದು, ಕಚೇರಿಗೆ ಹೋಗಲು ಭಯವಾಗುತ್ತಿದೆ ಇಂತಹ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಬರಬಾರದು ಎಂದು ತಮ್ಮ ಅಳಲು ತೋಡಿ ಕೊಂಡರು.

   ಕರೆ ಸ್ವೀಕರಿಸಲೂ ಭಯವಾಗುತ್ತದೆ :

ಇಷ್ಟಕ್ಕೆ ನಿಲ್ಲದ ಸದರಿ ವ್ಯಕ್ತಿಯು ಮಗದೊಬ್ಬ ಮಾಪಕ ಓದುಗ ಮಹಿಳಾ ಸಿಬ್ಬಂದಿಗೆ ಕರೆಮಾಡಿ ನಾನು ತುಂಬಾ ದಿನಗಳಿಂದ ನಿಮಗೆ ಕರೆಮಾಡಬೇಕೆಂದಿದ್ದೆ ಇಂದು ಕರೆ ಪ್ರಾರಂಭಿಸುತ್ತಿದ್ದೇನೆ. ಎಲ್ಲಿದ್ದೀರಾ, ಏನು ಮಾಡುತ್ತಿದ್ದೀರಾ,

ಎಂದು ಅಸಭ್ಯವಾಗಿ ಮಾಡತಾನಾಡಿದ್ದಲ್ಲದೆ ಪದೇ ಪದೇ ಎಲ್ಲಿದ್ದೀರಾ ಎಷ್ಟು ಗಂಟೆಗೆ ಬರುತ್ತೀರಾ ಎಂದು ಅನುಚಿತವಾಗಿ ಮಾತನಾಡುತ್ತಾರೆ. ಇವರಿಂದಾಗಿ ಯಾವುದೇ ಅಪರಿಚಿತ ಕರೆ ಬಂದರೂ ಕರೆಯನ್ನು ಸ್ವೀಕರಿಸಲು ಭಯವಾಗುತ್ತದೆ ಎಂದು ಮಹಿಳೆ ದೂರು ನೀಡಿದ್ದಾರೆ.

ಆರೋಪ ಕೇಳಿ ಬಂದಿರುವ ವ್ಯಕ್ತಿಯನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಲಾಗಿದೆ, ಆದರೆ ದೂರುದಾರರು ಹೇಳುವಂತೆ ಅಮಾನತ್ತಿನಲ್ಲಿಡಲು ಆಗುವುದಿಲ್ಲ, ಅವರು ಸಾಕ್ಷಿಗಳನ್ನು ಕೊಟ್ಟಿದ್ದಾರೆ ಆದರೇ ಅವುಗಳನ್ನು ಪ್ರಮಾಣೀಕರಿಸಬೇಕು, ಮುಂದೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

-ಸೋಮಶೇಖರಗೌಡ, ಕಾರ್ಯ ನಿರ್ವಾಹಕ ಇಂಜಿನಿಯರ್

 

ಲಾಡ್ಜ್‍ನಲ್ಲಿ ರೂಮ್ ಮಾಡಿದ್ದೇನೆ :

ಅದೇ ದಿನ ಮಾಪಕ ಓದುಗರಾದ ಮತ್ತೊಬ್ಬ ಮಹಿಳೆಗೆ ಕರೆ ಮಾಡಿದ ಇದೇ ವ್ಯಕ್ತಿ ಅಶ್ಲೀಲವಾಗಿ ಮಾತನಾಡುತ್ತಾ, ನೀವು ಈಗ ಎಲ್ಲಿದ್ದೀರಾ ನನಗೆ ತುಂಬಾ ಬೇಸರವಾಗಿದೆ. 2,500 ರೂ. ಕೊಟ್ಟು ಲಾಡ್ಜ್‍ನಲ್ಲಿ ರೂಂ ಪಡೆದಿದ್ದೇನೆ. ನೀವು ಈಗ ಎಲ್ಲಿದ್ದೀರಾ ಹೇಳಿ, ನಾನೇ ಖುದ್ದಾಗಿ ಬಂದು ಕರೆದುಕೊಂಡು ಹೋಗುವೆ ಎಂದು ಹೇಳಿದರು ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಮಹಿಳೆ ಅಲವತ್ತುಕೊಂಡರು.

15 ವರ್ಷದಿಂದ ಒಂದೇ ಕಡೆ ಝಾಂಡ :

ಲೈಂಗಿಕ ಆರೋಪ ಕೇಳಿ ಬಂದಿರುವ ವ್ಯಕ್ತಿಯು ಸುಮಾರು 15 ವರ್ಷಗಳಿಂದಲೂ ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು, ಬಡ್ತಿ ಬಂದರೂ ಹೋಗದೇ ಮತ್ತೆ ಇಲ್ಲಿಗೆ ಬಂದು ಕಾರ್ಯ ನಿರ್ವಹಿಸುತ್ತಿದ್ದಾರೆಂದು ತಿಳಿದು ಬಂದಿದೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap