ಗಗನಯಾನ : ಅ.21ರಿಂದ ಶ್ರೀಹರಿ ಕೋಟಾದಲ್ಲಿ ಸರಣಿ ಪರೀಕ್ಷೆ

ಆಂಧ್ರಪ್ರದೇಶ:

      ಅ. 21 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಮೊದಲ ಹಂತದ ಸರಣಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

     ಗಗನ ನೌಕೆಯ ಮಾದರಿ ಯನ್ನು ನಭಕ್ಕೆ ಉಡಾವಣೆಗೊಳಿಸಿ ಅದು ಯಶಸ್ವಿಯಾಗಿ ಬಂಗಾಳಕೊಲ್ಲಿಯಲ್ಲಿ ಇಳಿಯು ವಂತೆ ಮಾಡುವ ಪ್ರಯತ್ನಗಳನ್ನು ನಡೆಸಲಾಗುತ್ತದೆ.

ಬಾಹ್ಯಾಕಾಶ ಹೊರವಲಯದ ಪರಿಮಿತಿಗೆ ಗಗನ ನೌಕೆಯ ಮಾದರಿಯನ್ನು ಕಳುಹಿಸಲಾಗುತ್ತದೆ. ಅನಂತರ ಅದನ್ನು ಸುರಕ್ಷಿತವಾಗಿ ಬಂಗಾಳಕೊಲ್ಲಿಗೆ ಇಳಿಸಲಾಗುತ್ತದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಡಾ| ಜಿತೇಂದ್ರ ಸಿಂಗ್‌ ಹೇಳಿದ್ದಾರೆ. ಮಾದರಿ ನೌಕೆಯಲ್ಲಿ ಕ್ರ್ಯೂ ಎಸ್ಕೇಪ್‌ ಸಿಸ್ಟಮನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಶುಕ್ರವಾರ ನಡೆಸಲು ಉದ್ದೇಶಿಸಲಾಗಿರುವ ಟಿವಿ-ಡಿ1 ಪರೀಕ್ಷಾರ್ಥ ಗಗನನೌಕೆಯ ಮಾದರಿಯಲ್ಲಿ ಇರುವ ಪೇ ಲೋಡ್‌ನ‌ಲ್ಲಿ ಗಗನಯಾನದಲ್ಲಿ ತೆರಳುವವರು, ಕ್ರ್ಯೂ ಎಸ್ಕೇಪ್‌ ಸಿಸ್ಟಮ್‌ ಸೇರ್ಪಡೆ ಮಾಡಲಾಗಿದೆ. ಗಗನನೌಕೆಯ ಮಾದರಿ ಬಂಗಾಳಕೊಲ್ಲಿಯಿಂದ 17 ಕಿ.ಮೀ. ಎತ್ತರದಲ್ಲಿರುವಾಗಲೇ ಅದರಲ್ಲಿ ಇರುವ ಸಿಬಂದಿ ಸುರಕ್ಷಿತವಾಗಿ ಇಳಿಯುವಂತೆ ಮಾಡಲಾಗುತ್ತದೆ. ಅದು ಯಶಸ್ವಿಯಾದರೆ ಮಾನವ ಸಹಿತ ಯಾತ್ರೆಯ ಒಂದು ಹಂತ ಯಶಸ್ವಿಯಾದಂತಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap