ಲಲಿತ್‌ ಮೋದಿಗೆ ಫೂಲ್‌ ಕ್ಲಾಸ್‌ ತೆಗೆದುಕೊಂಡ ಶ್ರೀಶಾಂತ್‌ ಪತ್ನಿ ….!

ತಿರುವನಂತಪುರ: 

    ಭಾರತದ ಮಾಜಿ ವೇಗಿ ಶ್ರೀಶಾಂತ್  ಅವರ ಪತ್ನಿ ಭುವನೇಶ್ವರಿ ಶ್ರೀಶಾಂತ್ , ಹರ್ಭಜನ್ ಸಿಂಗ್ ಅವರ ಕುಖ್ಯಾತ “ಸ್ಲ್ಯಾಪ್-ಗೇಟ್” ಹಗರಣವನ್ನು ಮತ್ತೆ ಹುಟ್ಟುಹಾಕಿದ್ದಕ್ಕಾಗಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.

    ಹರ್ಭಜನ್‌ ಸಿಂಗ್‌ 2008ರ ಐಪಿಎಲ್‌ ವೇಳೆ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದ ವಿವಾದ ವಿಡಿಯೊವನ್ನು ಸರಿ ಸುಮಾರು 18 ವರ್ಷಗಳ ಬಳಿಕ ಲಲಿತ್‌ ಮೋದಿ ಶುಕ್ರವಾರ ಇದರ ವಿಡಿಯೊವನ್ನು ಬಿಡುಗಡೆಗೊಳಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಲ್ಲಿ ಭಾರೀ ವೈರಲ್‌ ಆಗುವ ಜತೆಗೆ ಶ್ರೀಶಾಂತ್‌ ಕುಟುಂಬಕ್ಕೆ ಮತ್ತೆ ಮುಜುಗರ ಮಾಡುವಂತೆ ಮಾಡಿದೆ. ಇದರಿಂದ ಸಿಟ್ಟಿಗೆದ್ದ ಭುವನೇಶ್ವರಿ ಶ್ರೀಶಾಂತ್, ಲಲಿತ್ ಮೋದಿ ಮತ್ತು ಕ್ಲಾರ್ಕ್‌ಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

  “ಲಲಿತ್ ಮೋದಿ ಮತ್ತು ಮೈಕೆಲ್ ಕ್ಲಾರ್ಕ್, ನಿಮಗೆ ನಾಚಿಕೆಯಾಗಬೇಕು. ನಿಮ್ಮ ಸ್ವಂತ ಅಗ್ಗದ ಪ್ರಚಾರ ಮತ್ತು ದೃಷ್ಟಿಕೋನಗಳಿಗಾಗಿ 2008 ರ ಘಟನೆಯನ್ನು ಎಳೆದು ತರುವ ನೀವು ಮನುಷ್ಯರೇ ಅಲ್ಲ. ಶ್ರೀಶಾಂತ್‌ ಮತ್ತು ಹರ್ಭಜನ್ ಇಬ್ಬರೂ ಬಹಳ ಹಿಂದೆಯೇ ಬದಲಾಗಿದ್ದಾರೆ. ಅಲ್ಲದೆ ಈ ಘಟನೆಯನ್ನು ಕೂಡ ಮರೆತಿದ್ದಾರೆ. ಅವರು ಈಗ ಶಾಲೆಗೆ ಹೋಗುವ ಮಕ್ಕಳೊಂದಿಗೆ ತಂದೆಯಾಗಿದ್ದಾರೆ. ಮತ್ತು ನೀವು ಅವರನ್ನು ಮತ್ತೆ ಹಳೆಯ ಗಾಯಕ್ಕೆ ಎಸೆಯಲು ಪ್ರಯತ್ನಿಸುತ್ತೀರಿ. ಸಂಪೂರ್ಣವಾಗಿ ಅಸಹ್ಯಕರ, ಹೃದಯಹೀನ ಮತ್ತು ಅಮಾನವೀಯ,” ಎಂದು ಭುವನೇಶ್ವರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

   ಅಂದು ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಹರ್ಭಜನ್‌ ಸಿಂಗ್‌ ಪಂದ್ಯದ ನಂತರ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಆಟಗಾರ ಶ್ರೀಶಾಂತ್‌ ಕೆನ್ನೆಗೆ ಬಾರಿಸಿದ್ದರು. ಇದಕಾಗಿ ಹರ್ಭಜನ್‌ಗೆ 11 ಪಂದ್ಯಗಳ ನಿಷೇಧ ಶಿಕ್ಷೆಯನ್ನು ಕೂಡ ವಿಧಿಸಲಾಗಿತ್ತು. ಬಳಿಕ ಹರ್ಭಜನ್‌ ಕ್ಷಮೆಯಾಚಿಸಿದ ಬಳಿಕ ಉಭಯ ಆಟಗಾರರು ರಾಜಿಯಾಗಿದ್ದರು. ಈಗ ಇವರಿಬ್ಬರು ಉತ್ತಮ ಸ್ನೇಹಿತರೂ ಕೂಡ ಆಗಿದ್ದಾರೆ.

Recent Articles

spot_img

Related Stories

Share via
Copy link