ಶಿರಸಿ:
ತಾಲೂಕಿನ ಗಡಿಹಳ್ಳಿ ಗ್ರಾಮದ ನಿವಾಸಿ ಹಾಗೂ ಎಮ್ಮೆಸ್ಸಿ ಪದವೀಧರೆ ಶ್ರುತಿ ಶ್ರೀಪತಿ ಹೆಗಡೆ ಅವರಿಗೆ ಪಶ್ಚಿಮ ಬಂಗಾಳದ ರಾಮಕೃಷ್ಣ ಮಿಷನ್‌ನ ವಿವೇಕಾನಂದ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಯು ಪಿ.ಎಚ್.ಡಿ ಪ್ರದಾನ ಮಾಡಿದೆ.
ಇವರು ಗಣೀತಶಾಸ್ತ್ರದಲ್ಲಿ ಮಂಡಿಸಿದ ಪ್ರಬಂಧಕ್ಕೆ ವಿವೇಕಾನಂದ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಯ ಡೀನ್ ಸುಕುಮಾರ್ ದಾಸ್ ಅಧಿಕಾರಿ ಮಾರ್ಗದರ್ಶಕರಾಗಿದ್ದರು. ಇವರು ಮಂಡಿಸಿದ ಪ್ರಬಂಧಕ್ಕೆ ಚಿನ್ನದ ಪದಕ ಸಹ ಲಭಿಸಿದೆ. ಇವರ ಈ ಪ್ರಬಂಧವನ್ನು ಪರಿಗಣಿಸಿದ ಸಂಶೋಧನಾ ಸಂಸ್ಥೆಯು ಪಿಎಚ್‌ಡಿ ಪ್ರದಾನ ಮಾಡಿದೆ.ಪ್ರಸ್ತುತ ಶ್ರುತಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಧ್ಯಾಪಕಿಯಾಗಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.








