846ನೇ ಶ್ರೀಗುರುಸಿದ್ದರಾಮೇಶ್ವರ ಜಯಂತಿ ಮಹೋತ್ಸವ

ಚೇಳೂರು

    ಈಗ ಸರ್ಕಾರದಿಂದ ನೆಡೆಯುತ್ತಿರುವ ಹಲವು ಅಭಿವೃದ್ಧಿ ಕೆಲಸಗಳನ್ನು ಅಗಿನ ಕಾಲದ ಮಹಾಶರಣ ಶ್ರೀಗುರು ಸಿದ್ದರಾಮೇಶ್ವರ ಶಿವಯೋಗಿಗಳು ಹನ್ನೆರಡನೆಯ ಶತಮಾನದಲಿಯೇ ಮಾಡಿಸಿ ಈ ಜಗತ್ತಿಗೆ ಮಾದರಿಯ ದಾರಿದೀಪವಾಗಿದ್ದರೆ ಅತಂಹವರ ಜಯಂತಿ ಮಹೋತ್ಸವಕ್ಕೆ ಎಲ್ಲಾರೂ ಒಗ್ಗಟಿನಿಂದ ಸೇರಿಕೊಂಡು ಮಾಡುವುದು ನಮ್ಮಗಳ ಕರ್ತವ್ಯವಾಗಿದೆ ಎಂದು ಸಮಾಜ ಸೇವಕ ಶಂಕರನಂದ ಹೇಳಿದರು.

     ಇವರು ಚೇಳೂರಿನಲಿ 2019 ನೇ ಜನವರಿ 14 ಮತ್ತು15ರಂದು ಬೆಟ್ಟದಹಳ್ಳಿ ಗವಿಮಠ ಶಾಖೆಯ ರಾ.ಹೆ.206,ಬೆಣಚಿಗೆರೆ ಮಜರೆಯ ಬಾಗೂರು ಗೇಟ್‍ನಲಿ ನೆಡೆಯುವ 846ನೇ ಶ್ರೀಗುರುಸಿದ್ದರಾಮೇಶ್ವರ ಜಯಂತಿ ಮಹೋತ್ಸವದ ಕಾರ್ಯಕ್ರಮದ ಮುಖಾಂಡರುಗಳ ಸಬೆಯಲಿ ಮಾತನಾಡುತ್ತ ಶ್ರೀಗಳು ಈ ಜಯೋತ್ಸವ ಮಾಡುವುದಕ್ಕೆ ಅವರು ಈ ಸಮಾಜಕ್ಕೆ ನೀಡಿರುವ ಹಲವು ಮಾರ್ಗದರ್ಶಗಳೆ ದೂಡ್ಡ ಕೊಡಿಗೆಯಾಗಿದೆ. ಅವರು ಅಗಿನ ಕಾಲದಲಿಯೆ ಈ ಜೀವ ಸಂಕುಲಗಳ ಉಳಿವಿಗಾಗಿ ಕೆರೆಕಟ್ಟೆಗಳನ್ನು ಕಟ್ಟಿಸಿ.ರಸ್ತೆಗಳ ನಿರ್ಮಾಣಗಳು, ಪಶುಪಕ್ಷಿಗಳ ಆಹಾರಕ್ಕಾಗಿ ಮರಗಳ ನೆಡುತೋಪಗಳನ್ನು ನೆಡಿಸಿವುದು. ಸ್ನೇಹಜೀವಿಗಳ ಸಹಬಾಳ್ವೆಗಾಗಿ ಸಾಮೂಹಿಕ ವಿವಾಹಾದಿಗಳು.ಹಸಿದವರಿಗೆ ಅನ್ನ.ಸಾಲದಹೊರೆಯಿಂದ ಅವರನ್ನು ಮುಕ್ತಗಳಿಸುವ ಬಗ್ಗೆ ಹೀಗೆ ಅನೇಕ ರೀತಿಯ ಈ ಮನುಕೊಲಕ್ಕೆ ನೀಡದ ಮಹಾಶರಣರಗಿದ್ದರೆ.

     ಅತಂಹವರ ಜಯಂತಿ ಕಲ್ಪತರ ನಾಡು.ಐತಿಹಾಸಿಕ ಪ್ರಸಿದ್ದ ಸ್ಥಳ.ಶರಣರಸಾಧುಸಂತರ ಪವಿತ್ರ ತಾಣಗಳ ಈ ಗುಬ್ಬಿ ತಾಲ್ಲೂಕಿನಲಿ ನೆಡೆಯುವುದು ನಮ್ಮಗಳ ಭಾಗ್ಯವಾಗಿದೆ ಅದಕ್ಕೆ ಎಲ್ಲಾರ ಶ್ರಮ,ಸಹಕಾರಗಳು ಅತಿಮುಖ್ಯವಾಗಿದೆ ಎಂದರು.

    ಸ್ವಾಗತ ಸಮಿತಿಯ ಕಾರ್ಯದರ್ಶಿ ನಿರಂಜನಮೂರ್ತಿ ಮಾತನಾಡುತ್ತ ಈ ಜಯಂತಿ ಈ ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿ ಗವಿಮಠದಲ್ಲಿ 32 ವರ್ಷಗಳ ಹಿಂದೆ 1986 ರಲ್ಲಿ ಸಿದ್ದಗಂಗ ಮಠದ ಶ್ರೀ ಶಿವಕುಮಾರಮಹಾಸ್ವಾಮಿಗಳು.ಗವಿಮಠದ ಶ್ರೀ ಚಂದ್ರಶೇಖರಸ್ವಾಮಿಗಳ ನೇತೃತ್ವದಲಿ ಬಹಳ ಯಶಸ್ವಿಯಾಗಿ ನೆಡೆಯಿತು. ಈಗ ಮುಂದೆ 2019 ರಲ್ಲಿ ಇಲ್ಲಿ ನೆಡೆಯುತ್ತಿರುವುದು ನಮ್ಮಗಳ ಪುಣ್ಯವಾಗಿದೆ. ಈ ಕಾರ್ಯಕ್ರಮದ ಪೂರ್ವಬಾವಿ ಸಬೆ ಸೆ 22 ರಂದು ಶನಿವಾರ,ಬೆಣಚಿಗೆರೆ ಮಜರೆಯ ಬಾಗೂರು ಗೇಟ್‍ನಲಿ ಏರ್ಪಡಿಸಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲಿ ಭಾಗವಹಿಸ ಬೇಕಾಗಿದೆ ಎಂದರು.

     ಈ ಕಾರ್ಯಕ್ರಮದಲಿ ಜಿಪಂ ಸದಸ್ಯೆ ಕೆ.ಆರ್.ಭಾರತಿಹಿತೇಶ್,ಗ್ರಾಪಂ ಅಧ್ಯಕ್ಷೆ ಗಂಗಮ್ಮ ಬಸವರಾಜು,ಮಾಜಿ ಗ್ರಾಪಂ ಅಧ್ಯಕ್ಷರಾದ ಸಿ.ಟಿ.ಶಾರದಮ್ಮ,ಸಿ.ಎಂ.ಹಿತೇಶ್,ಸಿ.ಎನ್.ನಾಗರಾಜು,ಗ್ರಾಪಂ ಸದಸ್ಯೆ ಇಂದಿರಾಮ್ಮ,ಮುಖಾಂಡರಾದ ಗುರುಪ್ರಸಾಧ್, ಸಿ.ಬಿ.ಮಂಜುನಾಥ್,ಸಿ.ಬಿ.ಜಗನ್ನಾಥ್, ಸೋಮಣ್ಣ,ಬಸವರಾಜು,ನಂದೀಶಪ್ಪ, ಹಾಗೂ ಇತರರು ಭಾಗವಹಿಸಿದ್ದರು

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap