ಮೈಸೂರು:

ಮತದಾರರ ಅಹವಾಲು ಸಲ್ಲಿಸಲು ಶಾಸಕ ಡಾ. ಯತೀಂದ್ರ ಸಿಗುವುದಿಲ್ಲ ಎಂದು ಮಹಿಳೆಯೊಬ್ಬರು ದೂರಿಕೊಂಡಿದ್ದರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಮಹಿಳೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಟಿ.ನರಸೀಪುರದ ಗರ್ಗೇಶ್ವರ ಗ್ರಾಮಕ್ಕೆ ಕಾಮಗಾರಿ ಶಂಕುಸ್ಥಾಪನೆಗೆಂದು ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ವೇಳೆ ಅವರೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮಾಜಿ ತಾ.ಪಂ. ಅಧ್ಯಕ್ಷೆ ಹಾಗೂ ಕಾಂಗ್ರೆಸ್ನ ಕಾರ್ಯಕರ್ತೆ ಜಮಲಾರ್ ಎಂಬುವರು ಬಂದಿದ್ದರು.

ಸಭೆಯಲ್ಲಿ ಎದುರು ಕುಳಿತಿದ್ದ ಮಹಿಳೆ ಜಮಲಾರ್, ಸಿದ್ದರಾಮಯ್ಯ ಮಗ ಶಾಸಕ ಯತೀಂದ್ರ ವಿರುದ್ಧ ದೂರು ಹೇಳುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯರ ಮುಂದೆ ಮಹಿಳೆ ಟೇಬಲ್ ಕುಟ್ಟಿದರು. ಮಹಿಳೆ ವರ್ತನೆಗೆ ಕೆಂಡಾಮಂಡಲರಾದ ಸಿದ್ದರಾಮಯ್ಯ, ಆ ಮಹಿಳೆಯ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ‘ಕೂತ್ಕೋಳಮ್ಮ ಸಾಕು..ನನ್ನ ಮುಂದೇನೆ ಟೇಬಲ್ ಕುಟ್ಟುತ್ತೀಯಾ…ದೇಶಕ್ಕೆ ಅನ್ಯಾಯ ಮಾಡಿರೋ ತರ ಮಾತಾಡ್ತೀಯಲ್ಲಾ…?’ ಎಂದು ಗದರುತ್ತಿರುವ ವಿಡಿಯೋ ಇದೀಗ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








