ಋಷಿ ಮುನಿಗಳ ಪರಿಶುದ್ದತೆಗೆ ಯೋಗ ಪ್ರಮುಖ ಕಾರಣ : ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

ಮಧುಗಿರಿ :

    ಭಾರತೀಯ ಸಂಸ್ಕೃತಿಯಲ್ಲಿ ಋಷಿಮುನಿಗಳು ಯೋಗದ ಮುಖಾಂತರ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಪೂರ್ಣಾಯಸ್ಸು ಹೊಂದಿದ್ದರು ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.

    ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಧುಗಿರಿ ಶಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

   ಅವರು ಜೊತೆಗೆ ಲೌಕಿಕ ಮತ್ತು ಅಲೌಕಿಕ ಜ್ಞಾನ ಸಂಪಾದನೆಯನ್ನು ಮಾಡಿದರು.ಜೊತೆಗೆ ಎಲ್ಲಾ ಗ್ರಹಗಳ ಸ್ಥಿತಿಯ ಚಲನೆಯನ್ನು ಸಹ ಯೋಗದಿಂದಲೇ ಋಷಿಮುನಿಗಳು ಕಂಡುಕೊಳ್ಳುತ್ತಿದ್ದರು,
ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಇದರಿಂದಾಗಿ ಭಾರತಕ್ಕೆ ದೊಡ್ಡ ಗೌರವ ತಂದುಕೊಟ್ಟರು, ಯೋಗದ ಮೂಲಕ ವಿಶ್ವಗುರು ಹಾದಿಯಾಗಿ ಯೋಗದ ಕಲ್ಪನೆ -ಚಿಂತನೆ- ಮಹತ್ವ ನೀಡಿದ ಭಾರತ ಮತ್ತೊಮ್ಮೆ ವಿಶ್ವಗುರುವಾಗಿದೆ ಎಂದರು.

   ಉಪ ವಿಭಾಗಾಧಿಕಾರಿ ಗೂಟೂರು ಶಿವಪ್ಪ ಮಾತನಾಡಿ, ಭಾರತವು ವಿಶ್ವಕ್ಕೆ ಯೋಗದ ಮೂಲಕ ಶಾಂತಿ ನೆಲೆಸುವುದನ್ನು ರಫ್ತು ಮಾಡಿದ ಕಿರ್ತಿ ಸಲ್ಲುತ್ತದೆ.ಜೀವನದಲ್ಲಿ ಯೋಗವನ್ನು ಅಳಪಡಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದೆಂದರು.

   ಶ್ರೀ ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಕೆ. ವಿ. ಮಂಜುನಾಥಗುಪ್ತ, ಖಜಾಂಚಿ ಡಾ. ಜಿ .ಕೆ.ಜಯರಾಂ, ಎಸ್ ಪಿ ವೈ ಎಸ್ ಎಸ್ ಮಧುಗಿರಿ ಶಾಖೆ ಸಂಚಾಲಕ ಎಂ. ಎನ್. ನರಸಿಂಹಮೂರ್ತಿ, ನಾರಾಯಣರಾಜು , ಆನಂದ್ ತೋಟದಪ್ಪ ಯೋಗ ಶಿಕ್ಷಕರು ಹಾಗೂ ಯೋಗ ಬಂಧುಗಳು ಮತ್ತು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap