SIIMA ಗಾಗಿ ದುಬೈನಲ್ಲಿ ಮೇಳೈಸಿದ ತಾರಾ ಬಳಗ…!

ದುಬೈ

      SIIMA  ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರತಿ ವರ್ಷ ಬಹಳ ಅದ್ಧೂರಿಯಾಗಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಾ ಬರ್ತಿದೆ. ಈ ಬಾರಿ ದೂರದ ದುಬೈನಲ್ಲಿ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ತಾರೆಯರು ಒಬ್ಬೊಬ್ಬರಾಗಿ ದುಬೈ ಫ್ಲೈಟ್ ಏರುತ್ತಿದ್ದಾರೆ.

    ಈ ವರ್ಷವೂ ನಮ್ಮ ಸೌತ್ ಚಿತ್ರರಂಗದ ಹಲವು ಚಿತ್ರಗಳು ವಿವಿಧ ವಿಭಾಗಗಳಲ್ಲಿ ಸೈಮಾ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿವೆ. ಆದರೆ ಯಾರಿಗೆ ಯಾವ್ಯಾವ ಪ್ರಶಸ್ತಿ ಲಭಿಸುತ್ತದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ. (ಸೆಪ್ಟೆಂಬರ್ 15) ಮತ್ತು ನಾಳೆ (ಸೆಪ್ಟೆಂಬರ್ 16) ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. SIIMA – 2023ರ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ನಿನ್ನೆ(ಸೆಪ್ಟೆಂಬರ್ 14) ಸುದ್ದಿಗೋಷ್ಠಿ ಕೂಡ ನಡೀತು.

    ಸುದ್ದಿಗೋಷ್ಠಿಯಲ್ಲಿ ರಾಣಾ ದಗ್ಗುಬಾಟಿ, ಲಕ್ಷ್ಮಿ ಮಂಚು, ಶ್ರೀಲೀಲಾ, ಪ್ರಣೀತಾ ಸುಭಾಷ್, ಜೆವಿ ಪ್ರಕಾಶ್ ಕುಮಾರ್ ಮುಂತಾದವರು ಭಾಗವಹಿಸಿದ್ದರು. ಈ ವರ್ಷ ಕಾರ್ಯಕ್ರಮವನ್ನು ಇನ್ನಷ್ಟು ಅದ್ಧೂರಿಯಾಗಿ ಮಾಡಲು ತಯಾರಕರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಶೋ ಯಶಸ್ವಿಯಾಗುತ್ತದೆ ಎಂದು ಅತಿಥಿಗಳು ಹೇಳಿದರು.

    2022ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಸೈಮಾ ಪ್ರಶಸ್ತಿ ನೀಡಲಾಗುತ್ತದೆ. ಈಗಾಗಲೇ ನಾಮಿನೇಷನ್ ಲಿಸ್ಟ್ ಹೊರಬಿದ್ದಿದೆ. ಕನ್ನಡ ಸಿನಿಮಾಗಳ ಪೈಕಿ ವಿವಿಧ ವಿಭಾಗಗಳಲ್ಲಿ ನಾಮಿನೇಷನ್ ಲಿಸ್ಟ್ ಇಲ್ಲಿದೆ ನೋಡಿ.

ಅತ್ಯುತ್ತಮ ಚಿತ್ರ

ಹೊಂಬಾಳೆ ಫಿಲ್ಮ್ಸ್ – ಕಾಂತಾರ

ಹೊಂಬಾಳೆ ಫಿಲ್ಮ್ಸ್ – KGF ಚಾಪ್ಟರ್- 2

ಕೃಷ್ಣ ಟಾಕೀಸ್ – ಲವ್ ಮಾಕ್‌ಟೇಲ್ 2

ಪರಂವಾ ಸ್ಟುಡಿಯೋಸ್ – 777 ಚಾರ್ಲಿ

ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್, ಇನ್ವೇನಿಯೋ ಒರಿಜಿನ್ – ವಿಕ್ರಾಂತ್ ರೋಣ

ಅತ್ಯುತ್ತಮ ನಟ

ಪುನೀತ್ ರಾಜ್‌ಕುಮಾರ್ – ಜೇಮ್ಸ್

ರಕ್ಷಿತ್ ಶೆಟ್ಟಿ – 777 ಚಾರ್ಲಿ

ರಿಷಬ್ ಶೆಟ್ಟಿ – ಕಾಂತಾರ

ಶಿವರಾಜಕುಮಾರ್ – ವೇದ

ಸುದೀಪ್ – ವಿಕ್ರಾಂತ್ ರೋಣ

ಯಶ್ – KGF ಚಾಪ್ಟರ್- 2

ಅತ್ಯುತ್ತಮ ನಿರ್ದೇಶಕ

ಅನುಪ್ ಭಂಡಾರಿ – ವಿಕ್ರಾಂತ್ ರೋಣ

ಡಾರ್ಲಿಂಗ್ ಕೃಷ್ಣ – ಲವ್ ಮಾಕ್‌ಟೇಲ್- 2

ಕಿರಣರಾಜ್ ಕೆ – 777 ಚಾರ್ಲಿ

ಪ್ರಶಾಂತ್ ನೀಲ್ – KGF ಚಾಪ್ಟರ್- 2

ರಿಷಬ್ ಶೆಟ್ಟಿ – ಕಾಂತಾರ

ಅತ್ಯುತ್ತಮ ನಟಿ

ಆಶಿಕಾ ರಂಗನಾಥ್ – ರೇಮೋ

ಚೈತ್ರ ಆಚಾರ್ – ಗಿಲ್ಕಿ

ರಚಿತಾ ರಾಮ್ – ಮಾನ್ಸೂನ್ ರಾಗ

ಸಪ್ತಮಿ ಗೌಡ – ಕಾಂತಾರ

ಶರ್ಮಿಳಾ ಮಾಂಡ್ರೆ – ಗಾಳಿಪಟ-2

ಶ್ರೀನಿಧಿ ಶೆಟ್ಟಿ – KGF- 2

ಅತ್ಯುತ್ತಮ ಪೋಷಕ ನಟ

ಕಿಶೋರ್ – ಕಾಂತಾರ

ದಿಗಂತ್ ಮಂಚಾಲೆ – ಗಾಳಿಪಟ-2

ಅಚ್ಯುತ್ ಕುಮಾರ್ – KGF ಚಾಪ್ಟರ್- 2

ರಂಗಾಯಣ ರಘು – ಜೇಮ್ಸ್

ರಾಜ್ ಬಿ ಶೆಟ್ಟಿ – 777 ಚಾರ್ಲಿ

ಅತ್ಯುತ್ತಮ ಪೋಷಕ ನಟಿ

ಅದಿತಿ ಸಾಗರ್ – ವೇದ

ಕಾರುಣ್ಯ ರಾಮ್ – ಪೆಟ್ರೋಮ್ಯಾಕ್ಸ್

ಸಾಕ್ಷಿ ಮೇಘನಾ – ಲಿಸಾ

ಶರ್ಮಿತಾ ಗೌಡ – ಫ್ಯಾಮಿಲಿ ಪ್ಯಾಕ್

ಶುಭರಕ್ಷಾ – ಹೋಮ್ ಮಿನಿಸ್ಟರ್

ಅತ್ಯುತ್ತಮ ಸಂಗೀತ ನಿರ್ದೇಶಕ

ಅಜನೀಶ್ ಲೋಕನಾಥ್ – ಕಾಂತಾರ

ಅರ್ಜುನ್ ಜನ್ಯ – ಏಕ್ ಲವ್ ಯಾ

ನಕುಲ್ ಅಭಯಂಕರ್ – ಲವ್ ಮಾಕ್‌ಟೇಲ್- 2

ನೋಬಿನ್ ಪಾಲ್ – 777 ಚಾರ್ಲಿ

ರವಿ ಬಸ್ರೂರ್ – KGF ಚಾಪ್ಟರ್- 2

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap