ಮುಂಬೈ :
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಕುಂಟುತ್ತಾ ಸಾಗುತ್ತಿದೆ. ಸಿನಿಮಾ ರಿಲೀಸ್ ಆಗಿ ಆರು ದಿನ ಕಳೆದರೂ ಇನ್ನೂ ಚಿತ್ರದ ಗಳಿಕೆ 100 ಕೋಟಿ ರೂಪಾಯಿ ತಲುಪಿಲ್ಲ. ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಸಿನಿಮಾ 100 ಕೋಟಿ ರೂಪಾಯಿ ಗಳಿಸಲೂ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗೆಯೇ ಮುಂದುವರಿದರೆ ಸಿನಿಮಾ ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟಾಗಲಿದೆ. ಸಲ್ಲು ಸ್ಕ್ರಿಪ್ಟ್ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಮಾರ್ಚ್ 30ರಂದು ರಿಲೀಸ್ ಆಯಿತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲು ವಿಫಲವಾಗಿದೆ. ಈ ಚಿತ್ರದ ಒಂದು ದಿದನ ಗಳಿಕೆ 30 ಕೋಟಿ ರೂಪಾಯಿ ದಾಟಿಲ್ಲ ಅನ್ನೋದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕನ್ನಡದ ‘ಕೆಜಿಎಫ್ 2’ ಸಿನಿಮಾ ಹಿಂದಿ ಒಂದರಲ್ಲೇ ಒಂದು ದಿನಕ್ಕೆ 50+ ಕೋಟಿ ರೂಪಾಯಿ ಗಳಿಸಿತ್ತು. ‘ಪುಷ್ಪ 2’ ಚಿತ್ರದ ಒಂದು ದಿನದ ಗಳಿಕೆಯಂತೂ 60 ಕೋಟಿ ರೂಪಾಯಿ ದಾಟಿತ್ತು. ಇವುಗಳಿಗೆ ಹೋಲಿಸಿದರೆ ಸಲ್ಮಾನ್ ಖಾನ್ ಸಿನಿಮಾ ಡಲ್ ಆಗಿ ಹೋಗಿದೆ.
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಏಪ್ರಿಲ್ 4ರಂದು ಕೇವಲ 3.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಗಳಿಕೆ 94 ಕೋಟಿ ರೂಪಾಯಿ ಆಗಿದೆ. ಸಲ್ಲು ಸಿನಿಮಾ ಒಂದು ವಾರಕ್ಕಾದರೂ 100 ಕೋಟಿ ರೂಪಾಯಿ ಕ್ಲಬ್ ಸೇರುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
