ಶಿರಾ :
ರೈತರ ಅತ್ಯಂತ ನಿರೀಕ್ಷಿತ ಬೇಡಿಕೆಯಾಗಿದ್ದ ರಾಗಿ ಖರೀದಿ ಕೇಂದ್ರವನ್ನು ಶಿರಾ ನಗರದ ಎ.ಪಿ.ಎಂ.ಸಿ. ಕಛೇರಿಯ ಪ್ರಾಂಗಣದಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಸೋಮವಾರ ಉದ್ಘಾಟಿಸಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಉತ್ತಮ ಗುಣ ಮಟ್ಟದ ರಾಗಿಯನ್ನು ಕೊಳ್ಳಲು ಶಿರಾ ಎ.ಪಿ.ಎಂ.ಸಿ. ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ರೈತರು ಈ ಖರೀದಿ ಕೇಂದ್ರದ ಪ್ರಯೋಜನ ಪಡೆಯುವುದು ಅಗತ್ಯ. ಈ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ರಾಗಿಯನ್ನು ಪ್ರತಿ ಕ್ವಿಂಟಾಲ್‍ಗೆ 3295 ರೂ.ಗಳಂತೆ ಕೊಳ್ಳಲು ಸರ್ಕಾರ ಆದೇಶಿಸಿದ್ದು, ರೈತರು ಉತ್ತಮ ಗುಣಮಟ್ಟದ ರಾಗಿಯನ್ನು ತರುವಂತೆ ಮನವಿ ಮಾಡಿದರು.
ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ಖರೀದಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ. ಸರ್ಕಾರದ ನಿಯಮಾವಳಿಯನ್ನು ರೈತರು ಪಾಲಿಸಬೇಕಿದೆ. ಇದೇ ರೀತಿಯಲ್ಲಿ ಶೇಂಗಾ ಖರೀದಿ ಕೇಂದ್ರವೂ ಆರಂಭಗೊಳ್ಳಬೇಕಿದೆ ಎಂದರು.
ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರೇಗೌಡ, ತಹಸೀಲ್ದಾರ್ ಮಮತಾ ಜಿ., ಬಿಜೆಪಿ ನಗರ ಮಂಡಲದ ಅಧ್ಯಕ್ಷ ವಿಜಯರಾಜ್, ರಾಮರಾಜು, ಮನೋಹರ ನಾಯಕ, ಪ್ರಕಾಶ್‍ಗೌಡ, ಶ್ರೀರಂಗ ಯಾದವ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ