ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆ್ಯಕ್ಸಿಜನ್‍ಗೆ ಕೊರತೆ ಇಲ್ಲ : ಶಾಸಕ

 ಶಿರಾ : 

      ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸತ್ಯಕ್ಕೆ ದೂರವಾಗಿದ್ದು, ಸದರಿ ಆಸ್ಪತ್ರೆಯಲ್ಲಿ ಮುಂಜಾಗ್ರತೆಯಾಗಿಯೇ ಆಕ್ಸಿಜನ್ ಶೇಖರಣೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ತಿಳಿಸಿದರು.

      ಮಂಗಳವಾರ ಬೆಳಗ್ಗೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇದೆ ಎಂಬ ಸುಳ್ಳು ವದಂತಿ ಹರಿದಾಡುತ್ತಿರುವುದನ್ನು ಕಂಡ ಶಾಸಕರು ವೈದ್ಯರು ಹಾಗೂ ತಾ. ದಂಡಾಧಿಕಾರಿಗಳು ಒಟ್ಟಿಗೆ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಸಿಲಿಂಡರ್‍ಗಳನ್ನು ಪರಿಶೀಲಿಸಿದರು.

      ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ 32 ಆಕ್ಸಿಜನ್ ಸಿಲಿಂಡರ್‍ಗಳು ಭರ್ತಿಯಾಗಿದ್ದು, ಈ ಪೈಕಿ 2 ಸಿಲಿಂಡರ್‍ಗಳ ಮೂಲಕ 39 ರೋಗಿಗಳಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ಜಿಲ್ಲಾಡಳಿತದ ಸೂಚನೆಯಂತೆ ಶೇ.75 ಆಕ್ಸಿಜನ್ ಸಿಲಿಂಡರ್ ಶೇಖರಣೆ ಇದ್ದು, ಶೇ. 25 ಆಕ್ಸಿಜನ್ ಸಿಲಿಂಡರ್ ಮುಗಿದ ಕೂಡಲೇ ಅದನ್ನೂ ಕೂಡಾ ರೀಫಿಲ್ ಮಾಡಲಾಗುತ್ತಿದ್ದು, ಶಿರಾದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿಲ್ಲ. ಸ್ಥಳೀಯ ತಾಲ್ಲೂಕು ದಂಡಾಧಿಕಾರಿಗಳು ಆಮ್ಲಜನಕದ ಕೊರತೆ ಬಾರದಂತೆ ಆಸ್ಪತ್ರೆಯ ಮೇಲೆ ನಿಗಾ ಇಟ್ಟಿದ್ದು, ಕೋವಿಡ್ ಕೇರ್ ಸೆಂಟರ್‍ಗೆ ಪ್ರತಿ ದಿನವೂ ಭೇಟಿ ನೀಡಲಾಗುತ್ತಿದೆ ಎಂದರು. ತಾಲ್ಲೂಕು ದಂಡಾಧಿಕಾರಿ ಮಮತಾ, ಆಡಳಿತ ವೈದ್ಯ ಡಾ.ಶ್ರೀನಾಥ್, ನಗರಸಭೆಯ ಆಯುಕ್ತ ಪರಮೇಶ್ವರಪ್ಪ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link