ಶಿರಾ :
ಕಳೆದ ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗಲು ಎಸ್.ಆರ್.ಗೌಡ ಅವರು ನೀಡಿದ ಭಿಕ್ಷೆ ಎಂದು ಹೇಳಿಕೆಯನ್ನು ನೀಡಿರುವ ಜಗದೀಶ್ ಚೌದರಿ ಅವರ ಹೇಳಿಕೆಯನ್ನು ನಗರ ಬಿ.ಜೆ.ಪಿ. ಘಟಕದ ಅಧ್ಯಕ್ಷ ವಿಜಯರಾಜ್ ತೀವ್ರವಾಗಿ ಖಂಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯರಾಜ್, ಜಗದೀಶ್ ಚೌದರಿ ಶಿರಾ ಕ್ಷೇತ್ರದವರೆ ಅಲ್ಲ. ರಾಜೇಶ್‍ಗೌಡರು ಆಯ್ಕೆಯಾಗಲು ಈ ಕ್ಷೇತ್ರದ 73,000 ಮಂದಿ ಮತದಾರರು ನೇರ ಕಾರಣವಷ್ಟೆ ಅಲ್ಲದೆ. ರಾಜ್ಯದ ಮುಖ್ಯಮಂತ್ರಿಗಳು, ಸಚಿವರುಗಳು ಕ್ಷೇತ್ರದಲ್ಲಿಯೇ ಬೀಡು ಬಿಟ್ಟು ಅವರ ಆಯ್ಕೆಗೆ ಕಾರಣರಾಗಿದ್ದಾರೆ. ಸ್ಥಳೀಯ ಎಲ್ಲಾ ಮುಖಂಡರ ಪರಿಶ್ರಮವೂ ರಾಜೇಶ್‍ಗೌಡರ ಆಯ್ಕೆಗೆ ಕಾರಣವಾಗಿದ್ದು, ಶಿರಾ ಕ್ಷೇತ್ರದವರೆ ಅಲ್ಲದ ಜಗದೀಶ್‍ಚೌದರಿ ಬಿ.ಜೆ.ಪಿ. ಪಕ್ಷದ ಸದಸ್ಯತ್ವ ಹೊಂದಿರುವ ಬಗ್ಗೆಯೆ ನಮಗೆ ಅನುಮಾನವಿದೆ ಎಂದು ವಿಜಯರಾಜ್ ಆರೋಪಿಸಿದರು.
ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ತರೂರು ಬಸವರಾಜು, ದೇವರಾಜು, ಸಂತೋಷ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
