ಶಿರಾ :
ಅಬಕಾರಿ ನಿಯಮಗಳಿಗೆ ವಿರುದ್ಧವಾಗಿ ಸ್ವಾಧೀನತೆ, ಸಾಗಾಣಿಕೆ, ಮಾರಾಟ ಇತ್ಯಾದಿ ಪ್ರಕರಣಗಳಡಿಯಲ್ಲಿ ಈವರೆಗೆ ಜಪ್ತಿ ಮಾಡಲಾಗಿದ್ದ ಸುಮಾರು 48,910,000 ಲೀ.ಅಕ್ರಮ ಮದ್ಯವನ್ನು ಇಲ್ಲಿನ ಅಬಕಾರಿ ಇಲಾಖೆಯ ಸಿಬ್ಬಂದಿ ಶುಕ್ರವಾರ ನಾಶಗೊಳಿಸಿದರು.
ಶಿರಾ ವಲಯ ವ್ಯಾಪ್ತಿಯಲ್ಲಿ ಈ ಹಿಂದೆ 48,910,000 ಲೀ.ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿತ್ತು. ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಹಾಗೂ ಮಧುಗಿರಿ ಉಪ ಆಯುಕ್ತರ ಆದೇಶದಂತೆ ಸದರಿ ವಶಪಡಿಸಿಕೊಂಡ 30 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯವನ್ನು ನಾಶಪಡಿಸಲಾಯಿತು.
ಉಪ ಅಧೀಕ್ಷಕ ಸುರೇಶ್, ಅಬಕಾರಿ ನಿರೀಕ್ಷಕ ಡಿ.ಜಿ.ರವೀಂದ್ರ, ಡಿಪೋ ವ್ಯವಸ್ಥಾಪಕ ವೀರಾರೆಡ್ಡಿ, ಕೆಎಸ್‍ಬಿಸಿಎಲ್ ಅಬಕಾರಿ ನಿರೀಕ್ಷಕ ಸುಧಾಕರೇಗೌಡ, ಉಪ ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
