ಬರಗೂರು :
ಭೂಮಿಗೆ ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೆ ತಡೆದು ನಿಲ್ಲಿಸಿದರೆ, ಅಂತರ್ಜಲ ವೃದ್ಧಿ ಜೊತೆಗೆ ಭೂಮಿಯ ಫಲವತ್ತತೆ ಹೆಚ್ಚಾಗಿಸುವಲ್ಲಿ ಚೆಕ್ಡ್ಯಾಂಗಳು ಅತ್ಯಂತ ಸಹಕಾರಿಯಾಗಿವೆ. ಸಣ್ಣ ನೀರಾವರಿ ಇಲಾಖೆಯಿಂದ 7 ಕೋಟಿ ರೂಪಾಯಿ ಅನುದಾನ ಬಳಕೆ ಮಾಡಿ ಚೆಕ್ಡ್ಯಾಂಗಳನ್ನು ಕಟ್ಟುವಂತಹ ಮಹತ್ವದ ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಹೇಳಿದರು.
ಅವರು ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕೆ.ಕೆ.ಪಾಳ್ಯ ಗ್ರಾಮದಲ್ಲಿ 75 ಲಕ್ಷ ರೂಪಾಯಿ ವೆಚ್ಚದ ಚೆಕ್ ಡ್ಯಾಂ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಬರದ ನಾಡು ಶಿರಾ ಎಂಬ ಭಾವನೆ ಜನತೆಯಿಂದ ದೂರವಾಗಿ ಸಮೃದ್ಧ ನಾಡು ಎಂಬ ಭಾವನೆ ಮೂಡಿಸುವ ಉದ್ದೇಶ ನಮ್ಮದಾಗಿದೆ. ಮಳೆ ನೀರು ತಡೆದು ನಿಲ್ಲಿಸುವಂತಹ ಸಾಮಥ್ರ್ಯ ಚೆಕ್ ಡ್ಯಾಂಗಳಿಗಿದೆ. ಶಿರಾ ತಾಲ್ಲೂಕಿನ 75 ಕೆರೆಗಳಿಗೆ ನೀರು ತುಂಬಿಸುವಂತಹ ನನ್ನ ಮಹತ್ವಾಕಾಂಕ್ಷೆಯ ಅಪ್ಪರ್ ಭದ್ರ ನೀರಾವರಿ ಯೋಜನೆಯ ಶಂಕುಸ್ಥಾಪನೆ ಶೀಘ್ರವೆ ನಡೆಯಲಿದೆ. 75 ಕೆರೆಗಳಿಗೆ ಪೈಪ್ಲೈನ್ ಮೂಲಕ ನೀರು ಹರಿಸಲು ಒಂದು ಸಾವಿರ ಕೋಟಿರೂ. ಅನುದಾನ ಮಂಜೂರಾಗಿದೆ ಎಂದರು.
ಚಂಗಾವರ ಗ್ರಾಪಂ ಸದಸ್ಯೆ ಶಾರದಮ್ಮ, ರವಿಕುಮಾರ್, ಕೆಂಚೇಗೌಡ, ಮಾಜಿ ಗ್ರಾಪಂ ಸದಸ್ಯ ರಂಗಸ್ವಾಮಯ್ಯ, ಪ್ರಕಾಶ್ಗೌಡ, ರಾಜು, ತಿಪ್ಪೆಸ್ವಾಮಿ, ಸಿದ್ದೇಶಪ್ಪ, ಸಿದ್ದಪ್ಪ, ಎಂಜಿನಿಯರ್ ತೇಜಸ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ