ಶಿರಾ :
ನ. 3 ರ ಬೆಳಗ್ಗೆ 7 ಗಂಟೆಯಿಂದ ಶಿರಾ ನಗರದಲ್ಲಿ ಮತದಾನ ಆರಂಭಗೊಳ್ಳುತ್ತಿದ್ದಂತೆಯೇ ಸರದಿಯ ಸಾಲಲ್ಲಿ ನಿಂತು ಅನೇಕ ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸದರಾದರೂ ನಗರದ ಒಂದೆರಡು ವಾರ್ಡುಗಳ ಮತಗಟ್ಟೆಗಳಲ್ಲಿ ಮತ ಯಂತ್ರಗಳು ಏಕಾಏಕಿ ಕೈಕೊಟ್ಟ ಪರಿಣಾಮ ಮತಗಟ್ಟೆಯ ಅಧಿಕಾರಿಗಳು ಒಂದಷ್ಟು ಭೀತಿಗೊಂಡ ಪ್ರಸಂಗ ನಡೆಯಿತು.
ನಗರದ ಬೇಗಂ ಮೊಹಲ್ಲಾದ ಮತಗಟ್ಟೆ ಹಾಗೂ ಅಸ್ಸಾರ್ ಮೊಹಲ್ಲಾದ ಎನ್.ಜಿ.ಎಂ.ಎಸ್. ಶಾಲೆಯ ಮತಗಟ್ಟೆಯಲ್ಲಿನ ಇ.ವಿ.ಎಂ. ಯಂತ್ರ ಕೈ ಕೊಟ್ಟ ಪರಿಣಾಮ ಮತಗಟ್ಟೆಯ ಅಧಿಕಾರಿಗಳು ಚುನಾವಣಾಧಿಕಾರಿಗಳಿಗೆ ಫೋನಾಯಿಸಿ ಸುದ್ದಿ ಮುಟ್ಟಿಸಿದರು.
ಕೂಡಲೇ ಸ್ಥಳಕ್ಕೆ ಬಂದ ಮತ ಯಂತ್ರದ ಎಂಜಿನಿಯರ್‍ಗಳು ಮತ ಯಂತ್ರದ ಪರಿಶೀಲನೆಯಲ್ಲಿ ತೊಡಗಿರುವಾಗ ಅರ್ಧ ತಾಸಿನವರೆಗೂ ಮತದಾನ ಸ್ಥಗಿತಗೊಂಡಿತ್ತು ಎನ್ನಲಾಗಿದೆ. ಅಲ್ಲಿಯವರೆಗೂ ಮತದಾರರು ಸರದಿಯ ಸಾಲಲ್ಲಿ ನಿಲ್ಲುವುದು ಅನಿವಾರ್ಯವಾಗಿತ್ತು. ಮತಯಂತ್ರವನ್ನು ಪರಿಶೀಲಿಸಿ ದುರಸ್ತಿಗೊಳಿಸಿದ ನಂತರ ಮತದಾನ ನಡೆಯಿತು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
