ಮತದಾರರ ತೀರ್ಪಿಗೆ ಬದ್ಧರಾಗಿದ್ದು ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ – ಎಚ್.ಡಿ.ರೇವಣ್ಣ

 ಶಿರಾ  : 

      ಶಾಸಕರಾಗಿದ್ದ ದಿ.ಸತ್ಯಣ್ಣ ಅವರ ಕುಟುಂಬಕ್ಕೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ಪಕ್ಷವು ತನ್ನ ಅಸ್ತಿತ್ವನ್ನು ಉಳಿಸಿಕೊಂಡಿದೆ. ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಹಿನ್ನಡೆಯಾಗಿರಬಹುದು. ಆದರೆ ನಿರಂತರವಾಗಿ ಈ ಕ್ಷೇತ್ರದ ಸಮಸ್ಯೆಗಳಿಗೆ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

      ಮತ ಎಣಿಕೆಯ ನಂತರ ಶಿರಾ ನಗರಕ್ಕೆ ಭೇಟಿ ನೀಡಿದ ಅವರು, ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

      ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗುವುದಿಲ್ಲ. ಮತದಾರ ತನ್ನ ತೀರ್ಪನ್ನು ನೀಡಿದ್ದು ಅದನ್ನು ನಾವು ಒಪ್ಪಿಕೊಳ್ಳಬೇಕು. ಮಾಜಿ ಪ್ರಧಾನಿ ದೇವೇಗೌಡರು ಪಕ್ಷ ಗೆಲುವು ಕಂಡರೆ ಶಿರಾ ಕ್ಷೇತ್ರವನ್ನು ದÀತ್ತು ತೆಗೆದುಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳುವುದಾಗಿ ಹೇಳಿದ್ದರು. ಆದರೇನಂತೆ ಮಾಜಿ ಪ್ರಧಾನಿಗಳು ರಾಜ್ಯ ಸಭಾ ಸದಸ್ಯರಿದ್ದು, ಅವರಿಗೆ ಬರುವ ಅನುದಾನದಿಂದ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು.

      ಪಕ್ಷದ ಯಾವ ಕಾರ್ಯಕರ್ತರೂ ಕೂಡ ಧೃತಿಗೆಡಬಾರದು, ನಿಮ್ಮೊಂದಿಗೆ ನಾವಿದ್ದೇವೆ. ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರು ಈ ಕ್ಷೇತ್ರದಲ್ಲಿ ದಿ.ಸತ್ಯನಾರಾಯಣ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಕ್ಷೇತ್ರದ ಪ್ರತಿಯೊಂದು ಸಮಸ್ಯೆಗಳಿಗೂ ಅವರು ಸ್ಪಂದಿಸುತ್ತಾರಲ್ಲದೆ ಸರ್ಕಾರದ ಎಲ್ಲಾ ಸಭೆಗಳಲ್ಲೂ ಅವರು ಇರುತ್ತಾರೆ. ಅವರ ಮೂಲಕ ಕ್ಷೇತ್ರದ ಸಮಸ್ಯೆಗಳನ್ನು ನಿವೇದಿಸಿಕೊಳ್ಳಬಹುದು ಎಂದರು.

      ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ತಾ. ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಟಿ.ಡಿ.ಮಲ್ಲೇಶ್, ರಾಘವೇಂದ್ರ, ರಾಮು, ಸತ್ಯಪ್ರಕಾಶ್, ಕೆ.ಎ.ನಾಗರಾಜು ಸೇರಿದಂತೆ ಜೆಡಿಎಸ್ ಪಕ್ಷದ ಅನೇಕ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link