ತುಮಕೂರು
ಎಸ್ಐಟಿ ನಿರ್ದೇಶಕರು ಸಿದ್ಧ ಗಂಗೆಯ ಲಿಂಗೈಕ್ಯ ಪೂಜ್ಯ ಡಾ. ಶ್ರೀರಾಮ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಪರಮಾಪ್ತ ಶಿಷ್ಯರೆನಿಸಿದ್ದ ಡಾ. ಎಂ. ಎನ್. ಚನ್ನಬಸಪ್ಪ(94) ಅವರು ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ.ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚನ್ನಬಸಪ್ಪ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದು ಅವರ ನೆಚ್ಚಿನ ಸ್ಥಳ ಎಸ್ಐಟಿಯ ಆವರಣದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ಎಂಎನ್ ಸಿ ಯೆಂದೇ ಪ್ರಖ್ಯಾತ ರಾಗಿದ್ದ ಚನ್ನಬಸಪ್ಪ ಇಳಿವಯಸ್ಸಿನಲ್ಲಿ ಯೂ ಮಠದ ಸೇವೆ ಎಸ್ಐಟಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆ ಯಲ್ಲಿ ಸಕ್ರಿಯ ವಾಗಿ ತೊಡಗಿ ಸಿ ಕೊಂಡಿದ್ದರು. ಎಂಎನ್ಸಿ ಅವರ ನಿಧನಕ್ಕೆ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ. ಕೆ. ನಂಜುಂಡಪ್ಪ,ಜಂಟಿ ಕಾರ್ಯದರ್ಶಿ ಡಾ. ಶಿವಕುಮಾರ ಯ್ಯ ಪ್ರಿನ್ಸಿಪಾಲ್ ಪ್ರೊ. ಎಸ್. ವಿ. ದಿನೇಶ್ ಕೇಂದ್ರ ಸಚಿವ ವಿ. ಸೋಮಣ್ಣ, ಶಾಸಕ ಜ್ಯೋತಿ ಗಣೇಶ್, ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ. ಎಸ್. ಪರಮೇಶ್, ಪ್ರಜಾಪ್ರಗತಿ ಸಂಪಾದಕ ಎಸ್. ನಾಗಣ್ಣ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.