ರೇವಣ್ಣ ಹಾಗೂ ಪ್ರಜ್ವಲ್ ಕೇಸ್‌ : ಸಂತ್ರಸ್ಥೆಯರಿಗಾಗಿ ಹೆಲ್ಪ್ ಲೈನ್‌ ತೆರೆದ SIT….!

ಬೆಂಗಳೂರು:

    ಹಾಸನ ಸಂಸದ ಪ್ರಜ್ವಲ್ ರೇವಣ್ಣ  ಮತ್ತು ಎಚ್​ಡಿ ರೇವಣ್ಣ   ಕೇಸ್‌ನಲ್ಲಿ ದೂರು ನೀಡಲು ಹಿಂದೇಟು ಹಾಕ್ತಿರುವ ಸಂತ್ರಸ್ತೆಯರಿಗಾಗಿ ಎಸ್​ಐಟಿ ಸಹಾಯವಾಣಿ  ತೆರೆದಿದೆ. ಯಾರೇ ಸಂತ್ರಸ್ತರು ಅಥವಾ ಮಾಹಿತಿದಾರರು ತಮ್ಮ ಬಳಿ ಇರುವ ಮಾಹಿತಿಯನ್ನು ನೀಡಬಹುದು.

    ಕಾನೂನು ನೆರವು  ಮತ್ತು ರಕ್ಷಣೆ ಬೇಕಾಗಿದ್ದಲ್ಲಿ ಸಹಾಯವಾಣಿ ಸಂಖ್ಯೆ 63609 38947ಕ್ಕೆ ಕರೆ ಮಾಡುವಂತೆ ತಿಳಿಸಲಾಗಿದೆ. ಜೊತೆಗೆ ಸಂತ್ರಸ್ತೆಯರ  ಮಾಹಿತಿ ಗೌಪ್ಯವಾಗಿಡುವ ಬಗ್ಗೆಯೂ SIT ಭರವಸೆ ನೀಡಿದೆ.

SIT ಕಸ್ಟಡಿಗೆ ರೇವಣ್ಣ, ಇಂದು ಸ್ಥಳ ಮಹಜರು?

     ಅಪಹರಣ ಪ್ರಕರಣದಲ್ಲಿ ಅರೆಸ್ಟ್​ ಆಗಿದ್ದ ಮಾಜಿ ಸಚಿವ ಎಚ್​ಡಿ ರೇವಣ್ಣರನ್ನು 3 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ನಿನ್ನೆ ಭಾನುವಾರ ಆಗಿದ್ದರಿಂದ ನ್ಯಾಯಾಧೀಶರ ಮನೆಯಲ್ಲೇ ಹಾಜರುಪಡಿಸಿದ ಅಧಿಕಾರಿಗಳು, ಮೇ 8ರ ವರೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಪ್ರತಿದಿನ ಬೆಳಗ್ಗೆ 9:30 ರಿಂದ 10:30ರ ಸಮಯದಲ್ಲಿ ರೇವಣ್ಣ ಭೇಟಿಗೆ, ವಕೀಲರಿಗೆ ಅವಕಾಶ ನೀಡಬೇಕು ಅಂತಾ ಸೂಚನೆ ನೀಡಲಾಗಿದೆ. ಇವತ್ತು ಬೆಳಗ್ಗೆ 11 ಗಂಟೆಗೆ ಹಾಸನ ಅಥವಾ ಕೆ.ಆರ್‌.ನಗರಕ್ಕೆ ರೇವಣ್ಣರನ್ನು ಕರೆದೊಯ್ದು ಸ್ಥಳ ಮಹಜರು ಮಾಡಲು SIT ಪ್ಲ್ಯಾನ್‌ ಮಾಡಿದೆ.

3 ಮಹಿಳಾ ಸರ್ಕಾರಿ ನೌಕರರ ಸಂಪರ್ಕಿಸಿದ SIT

     ಸಂಸದ ಪ್ರಜ್ವಲ್​​ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳಲ್ಲಿ ಮೂವರು ಮಹಿಳಾ ಸರ್ಕಾರಿ ನೌಕರರು ಇರುವುದನ್ನು ಎಸ್​ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರಂತೆ.

     ಪೆನ್​ಡ್ರೈವ್​ನಲ್ಲಿ ಸಿಕ್ಕಿರುವ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಹಾಗೂ ಅಶ್ಲೀಲ ಫೋಟೋಗಳ ಪರಿಶೀಲನೆ ವೇಳೆ ಮೂವರು ಮಹಿಳಾ ಸರ್ಕಾರಿ ನೌಕರರ ಗುರುತು ಪತ್ತೆಯಾಗಿದೆ. ಈ ಮೂವರು ಸಂತ್ರಸ್ತೆಯರನ್ನು ಸಂಪರ್ಕಿಸಿರುವ ಎಸ್​ಐಟಿ ಅಧಿಕಾರಿಗಳು, ದೂರು ನೀಡುವಂತೆ ಸೂಚಿಸಿದ್ದಾರೆ. ಈ ಮೂವರು ದೂರು ನೀಡಿದ್ದಲ್ಲಿ ಪ್ರಜ್ವಲ್​​ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ರಾಜಕೀಯ ಷಡ್ಯಂತ್ರ ಎಂದ ರೇವಣ್ಣ

     ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಇವೆಲ್ಲ ರಾಜಕೀಯ ಪಿತೂರಿ ಅಂತ ಮಾಜಿ ಸಚಿವ ಎಚ್‌ಡಿ ರೇವಣ್ಣ ಆರೋಪಿಸಿದ್ದಾರೆ. ಕೋರಮಂಗಲದಲ್ಲಿರುವ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ನಿವಾಸಕ್ಕೆ ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸೋ ವೇಳೆ ಮಾಧ್ಯಮಗಳಿಗೆ ರೇವಣ್ಣ ಪ್ರತಿಕ್ರಿಯೆ ನೀಡಿದ್ದರು. ನನ್ನ ನಲವತ್ತು ವರ್ಷಗಳ ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಇವು ನನ್ನ ವಿರುದ್ಧ ನಡೆಸುತ್ತಿರುವ ರಾಜಕೀಯ ಪಿತೂರಿ ಅಂತ ರೇವಣ್ಣ ಆರೋಪಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ