ಮಾ. 2 ರಂದು ನಗರದಲ್ಲಿ ಬೃಹತ್ “ಸ್ಕಿನ್ನಥಾನ್”

ಬೆಂಗಳೂರು;

    ಬೆಂಗಳೂರು ಚರ್ಮ ರೋಗ ವೈದ್ಯರ ಸಂಘ, ಎಐಡಿವಿಎಲ್ ಕರ್ನಾಟಕ ಸಂಘ, ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್, ವೆನರಿಯಾಲಜಿಸ್ಟ್ ಸಂಸ್ಥೆಗಳಿಂದ ಚರ್ಮದ ಆರೈಕೆಗಾಗಿ ಜನ ಜಾಗೃತಿ ಮತ್ತು ನಕಲಿ ವೈದ್ಯರ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆ ನೀಡಲು ಮಾ. 2 ರಂದು ನಗರದಲ್ಲಿ ಇದೇ ಮೊದಲ ಬಾರಿಗೆ ಚರ್ಮದ ಆರೈಕೆಗಾಗಿ ಬೃಹತ್ “ಸ್ಕಿನ್ನಥಾನ್” ಓಟ ಆಯೋಜಿಸಲಾಗಿದೆ. 

       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್, ವೆನರಿಯಾಲಜಿಸ್ಟ್ ಅಧ್ಯಕ್ಷ ಡಾ. ಮಂಜುನಾಥ್ ಹುಲ್ಮನಿ, ಗೌರವ ಕಾರ್ಯದರ್ಶಿ ಡಾ. ಸಿ. ಮಹೇಶ್ ಕುಮಾರ್ ಮತ್ತು ಬೆಂಗಳೂರು ಚರ್ಮ ರೋಗ ವೈದ್ಯರ ಸಂಘದ ಅಧ್ಯಕ್ಷ ಡಾ. ಎಸ್. ಸಚ್ಚಿದಾನಂದ, ನಗರದ ಎಚ್.ಎಸ್.ಅರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಿಂದ ಬೆಳಿಗ್ಗೆ 6 ರಿಂದ 9 ಗಂಟೆವರೆಗೆ ನಡೆಯಲಿರುವ “ಸ್ಕಿನ್ನಥಾನ್” ನಲ್ಲಿ 10, 5 ಮತ್ತು 3 ಕಿಲೋಮೀಟರ್ ವಿಭಾಗಗಳಲ್ಲಿ ಓಟ ಆಯೋಜಿಸಲಾಗಿದೆ ಎಂದರು. 

     ಅತಿಯಾದ ಸ್ಟಿರಾಯ್ಡ್ ಬಳಕೆ, ಸ್ವಯಂ ಔಷಧೋಪಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಜವಾಬ್ದಾರಿಯುತ ಚರ್ಮದ ಆರೈಕೆಗಾಗಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ, ಸಾಮಾನ್ಯ ಚರ್ಮ ರೋಗದ ಬಗ್ಗೆ ಅರಿವು, ಚಿಕಿತ್ಸಾ ವಿಧಾನಗಳು, ನಕಲಿ ವೈದ್ಯರ ಬಗ್ಗೆ ಎಚ್ಚರಿಕೆ ವಹಿಸುವ ಮತ್ತು ಇದರಿಂದ ಎದುರಾಗುವ ಅಪಾಯಗಳ ಕುರಿತು ಜನ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು. 

     ವೃತ್ತಿಪರ ಚರ್ಮರೋಗ ಶಾಸ್ತ್ರದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಚರ್ಮ ರೋಗಗಳ ಬಗ್ಗೆ ಇರುವು ತಪ್ಪು ಕಲ್ಪನೆಯನ್ನು ತೊಡೆದುಹಾಕುವ ಗುರಿ ಹೊಂದಲಾಗಿದೆ. ಅನಿಯಂತ್ರಿತ ಚರ್ಮದ ಚಿಕಿತ್ಸೆಗಳಿಂದ ಎದುರಾಗುವ ಅಪಾಯಗಳ ಕುರಿತು ಜನರಲ್ಲಿ ಅರಿವು ಉಂಟು ಮಾಡಲಾಗುವುದು ಎಂದರು. 

    ಬೆಂಗಳೂರು ಚರ್ಮ ರೋಗ ವೈದ್ಯರ ಸಂಘದ ಗೌರವ ಕಾರ್ಯದರ್ಶಿ ಡಾ. ಸುಜಲ ಎಸ್ ಆರಾಧ್ಯ, ಸ್ಕಿನ್ನಥಾನ್ ಮುಖ್ಯ ಸಮನ್ವಯಕಾರರಾದ ಡಾ. ಪಿ. ಜಗದೀಶ್, ಇ ಎಸ್ ಐ ಸಿ, ಎಚ್.ಓ.ಡಿ ಡಾ. ಎಂ. ಎಸ್. ಗಿರೀಶ್ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link