ಮಹಿಳಾ ಮೀಸಲಾತಿ ಮಸೂದೆ : ಒಬಿಸಿ ಸೇರಿಸಬೇಕು: ಸೋನಿಯಾ ಗಾಂಧಿ

ನವದೆಹಲಿ: 

    ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೂಡ ಸೇರಿಸಬೇಕು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

    ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆ ವೇಳೆ ಲೋಕಸಭೆಯಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮುಖಾಮುಖಿ ನಡೆದಿದ್ದು, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮತ್ತು ಮಸೂದೆಯನ್ನು ತಕ್ಷಣ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

    ಆದರೆ ಮಹಿಳೆಯರಿಗೆ ಶೇ.33ರ ಕೋಟಾದೊಳಗೆ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಸೇರಿಸಬೇಕು. ಇತರ ಹಿಂದುಳಿದ ವರ್ಗ/ಪರಿಶಿಷ್ಟ ಜಾತಿ (ಒಬಿಸಿ/ಎಸ್‌ಸಿ) ಸಮುದಾಯಗಳಿಗೆ ಸೇರಿದ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಜಾತಿ ಗಣತಿಯನ್ನು ನಡೆಸಬೇಕು ಎಂದು ಒತ್ತಾಯಿಸಿದರು.
   ತಮ್ಮ ಪತಿ ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ತಂದಿದ್ದರಿಂದ ಮಸೂದೆ ಕುರಿತು ಮಾತನಾಡುವುದು ನನಗೆ ಭಾವನಾತ್ಮಕ ಕ್ಷಣವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ, ನಾನು ಇಲ್ಲಿ ನಾರಿ ಶಕ್ತಿ ವಂದನ್ ಅಧಿನಿಯಮ್ ಅನ್ನು ಬೆಂಬಲಿಸುತ್ತೇನೆ. ಹೊಗೆಯಿಂದ ತುಂಬಿದ ಅಡುಗೆಮನೆಯಿಂದ ಫ್ಲಡ್-ಲೈಟ್ ಸ್ಟೇಡಿಯಂಗಳವರೆಗೆ, ಭಾರತೀಯ ಮಹಿಳೆಯ ಪ್ರಯಾಣವು ಸುದೀರ್ಘವಾಗಿದೆ.
   ಆದರೆ ಅವಳು ಅಂತಿಮವಾಗಿ ತನ್ನ ಗಮ್ಯಸ್ಥಾನವನ್ನು ತಲುಪಿದ್ದಾಳೆ ಎಂದು ಹೇಳಿದರು.ಮೊದಲ ಬಾರಿಗೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ನಿರ್ಧರಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ನನ್ನ ಜೀವನ ಸಂಗಾತಿ ರಾಜೀವ್ ಗಾಂಧಿ ತಂದರು. ಅದನ್ನು ರಾಜ್ಯಸಭೆಯಲ್ಲಿ ಏಳು ಮತಗಳಿಂದ ಸೋಲಿಸಲಾಯಿತು.
      ನಂತರ ಕಾಂಗ್ರೆಸ್ ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಅವರ ನೇತೃತ್ವದ ಸರ್ಕಾರವು ರಾಜ್ಯಸಭೆಯಲ್ಲಿ ಅಂಗೀಕರಿಸಿತು, ಇದರ ಪರಿಣಾಮವಾಗಿ ದೇಶಾದ್ಯಂತ ಸ್ಥಳೀಯ ಸಂಸ್ಥೆಗಳ ಮೂಲಕ ಚುನಾಯಿತರಾದ 15 ಲಕ್ಷ ಮಹಿಳಾ ನಾಯಕರನ್ನು ಹೊಂದಿದ್ದೇವೆ. ರಾಜೀವ್ ಗಾಂಧಿಯವರ ಕನಸು ಭಾಗಶಃ ಮಾತ್ರ ಪೂರ್ಣಗೊಂಡಿದೆ. ಅದು ಈ ಮಸೂದೆ ಅಂಗೀಕಾರದೊಂದಿಗೆ ಪೂರ್ಣಗೊಳ್ಳುತ್ತದೆ ಎಂದು ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap