ನವದೆಹಲಿ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚೆಕ್ ವಹಿವಾಟುಗಳಿಗೆ ಪಾಸಿಟಿವ್ ಪಾವತಿ(ಪಾಸಿಟೀವ್ ಪೇ) ವ್ಯವಸ್ಥೆ ರೂಪಿಸಲು ಸಜ್ಜಾಗಿದ್ದು, ಈ ಹೊಸ ಚೆಕ್ ಪಾವತಿ ವ್ಯವಸ್ಥೆ 2021ರ ಜನವರಿ 1ರಿಂದ ಜಾರಿಗೆ ಬರಲಿದೆ.
ಪಾಸಿಟಿವ್ ಪೇ ಸಿಸ್ಟಮ್ :
ಪಾಸಿಟಿವ್ ಪೇ ಪರಿಕಲ್ಪನೆಯು ದೊಡ್ಡ ಮೌಲ್ಯದ ಚೆಕ್ʼಗಳ ಪ್ರಮುಖ ವಿವರಗಳನ್ನ ಮರು ದೃಢೀಕರಿಸುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಚೆಕ್ ನೀಡುವ ವ್ಯಕ್ತಿಯ ದಿನಾಂಕ, ಫಲಾನುಭವಿಗಳ ಹೆಸರು, ಸ್ವೀಕರಿಸುವವರ ಹೆಸರು ಹಾಗೂ ಪಾವತಿಯ ಮೊತ್ತವನ್ನು ಮರು ಚೆಕ್ ನೀಡುವ ವ್ಯಕ್ತಿಯ ಈ ಮಾಹಿತಿಯನ್ನು ಎಲೆಕ್ಟ್ರಾನಿಕ್ ವಿಧಾನಗಳಾದ ಎಸ್ಎಂಎಸ್, ಮೊಬೈಲ್ ಅಪ್ಲಿಕೇಷನ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಎಟಿಎಂ ಮೂಲಕ ಒದಗಿಸಬಹುದು. ಈ ಬಳಿಕ ಚೆಕ್ ಪಾವತಿಸುವ ಮೊದಲ ಈ ಎಲ್ಲ ವಿವರಗಳನ್ನು CTS ನಿಂದ ಕ್ರಾಸ್ ಚೆಕ್ ನಡೆಸಲಾಗುತ್ತದೆ. ಚೆಕ್ನಲ್ಲಿ ಯಾವುದೇ ಅಕ್ರಮ ಕಂಡು ಬರದಿದ್ದಲ್ಲಿ ಪಾವತಿ ಮಾಡಲಾಗುತ್ತದೆ. ಯಾವುದೇ ವ್ಯತ್ಯಾಸಗಳು ಕಂಡುಬಂದ್ರೆ, ಬ್ಯಾಂಕಿಗೆ ತಿಳಿಸಲಾಗುತ್ತೆ ಮತ್ತು ಪರಿಹಾರ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತೆ.
ಆದ್ರೆ, ಹೊಸ ನಿಯಮದ ಪ್ರಕಾರ, ಪ್ರಮುಖ ವಿವರಗಳ ಮರು-ದೃಢೀಕರಣವು ₹50,000ಕ್ಕಿಂತ ಹೆಚ್ಚಿನ ಹಣ ಪಾವತಿಗಳಿಗೆ ಅಗತ್ಯವಿದೆ. ಪಾಸಿಟಿವ್ ಪೇ ಸಿಸ್ಟಮ್ ಆಯ್ಕೆಯನ್ನ ತಮ್ಮ ಗ್ರಾಹಕರಿಗೆ ಪರಿಚಯಿಸಿದ ಎಸ್ ಬಿಐ, ಯಾವುದೇ ಪ್ರಶ್ನೆಯಿದ್ದರೆ ತಮ್ಮ ಹತ್ತಿರದ ಶಾಖೆಯನ್ನ ಸಂಪರ್ಕಿಸಲು ಸೂಚಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
