ಅತಿ ವೇಗ ತಿಥಿ ಬೇಗ..!

ತುಮಕೂರು :

ಲೇಖಕರು :ಹರೀಶ್ ಬ್ರಹ್ಮದೇವರಹಳ್ಳಿ

      ಪ್ರಪಂಚ ತನ್ನ ವ್ಯಾಪ್ತಿಯನ್ನು ಹಿಗ್ಗಿಸುತ್ತಾ ಜ್ಞಾನ ತಂತ್ರಜ್ಞಾನ ವಿಜ್ಞಾನ ಸಾಮಾರ್ಥ್ಯ ಹೆಚ್ಚಿಸುತ್ತ ಹೋದಂತೆ ತನ್ನ ಪಾಲಿಗೆ ಕೆಡುಗಾಲ ಅಪಘಾತ ಆಗಾತ ಜೊತೆ ಜೊತೆಯಲ್ಲಿಯೇ ಬೆಳೆಸಿಕೊಳ್ಳುತ್ತಿದೆ. ಕಾಲ ಮುಂದುವರೆದು ತಂತ್ರಜ್ಞಾನ ಹೆಚ್ಚಿದಂತೆ ಜನರ ಜೀವಕ್ಕೂ ಅಪಾಯ ಹೆಚ್ಚುತ್ತ ಹೋಗುತ್ತಿದೆ. ಕ್ಷಣಕೊಂದು ಸಾವು ನೋವುಗಳು ಕಣ್ಣಾರೆ ಕಾಣುತ್ತಿದ್ದೇವೆ ತಂತ್ರ ಯುಗದಲ್ಲಿ ಅತಂತ್ರ ಬದುಕು ನಮ್ಮದಾಗಿದೆ.

    ಆಧುನಿಕ ಜೀವನದಲ್ಲಿ ತಂತ್ರ ಯಂತ್ರ ಚಾಲಿತ ಬದುಕಿನಲ್ಲಿ ಅಪಘಾತಗಳು ಸಂಭವ ವಿಪರೀತವಾಗುತ್ತಿವೆ.ಇವಕ್ಕೆ ಎಲ್ಲಾ ಆಧುನಿಕ ಬದುಕಿನಲ್ಲಿ ನಾವು ತೋರಿಸುವ ಆಡಂಬರ ಸವಾರಿ ಮಿತಿಮೀರಿದ ಅಹಂಕಾರ ಜೀವ ಭಯ ಕುಟುಂಬ ಭಯವಿಲ್ಲದ ತಿರುಪೆ ಶೋಕಿಯೇ ಪ್ರಮುಖ ಕಾರಣ. ಇಂತಹ ಹತ್ತು ಹಲವಾರು ಕಾರಣಗಳಿಂದ ಯುವ ಜನತೆ ನಡು ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

    ತಂತ್ರಜ್ಞಾನ ವಿಜ್ಞಾನ ಮುಂದುವರೆದು ಕಾರಣದಿಂದ ಸಮಾಜಕ್ಕೆ ಉಳಿತು ಕೆಡುಕು ಎರಡನ್ನೂ ಒಟ್ಟಿಗೆ ನಮ್ಮ ಮುಂದೆ ಆಯ್ಕೆಗೆ ಇಟ್ಟಿದೆ ಅದನ್ನಾ ನಾವು ಬಳಸಿಕೊಳ್ಳುವುದರಲ್ಲಿ ಬುದ್ದಿವಂತರಾಗಬೇಕು. ಕಾಲ ಕಳೆದಂತೆ ಎಲ್ಲಾ ಪ್ರಯಾಣಕ್ಕಾಗಿ ಬಸ್ಸುಗಳು ಕೆಲವೊಂದು ಗ್ರಾಮಗಳು ಹೊರತುಪಡಿಸಿ ಎಲ್ಲಾ ಕಡೆಯೂ ಕೈಗೆ ಎಟಕುವ ಸಾರಿಗೆ ವ್ಯವಸ್ಥೆಯಿದೆ.

    ಉದ್ಯೋಗ ಹರಿಸಿ ಮುಂದುವರೆದ ನಗರಗಳಿಗೆ ಗುಳೆ ಹೋಗಲು ಸೂಕ್ತ ಸರ್ಕಾರಿ ಹಾಗೂ ಖಾಸಗಿ ಸಾರಿಗೆ ವ್ಯವಸ್ಥೆಯಿದೆ.ಈಗೆ ಎಲ್ಲಾ ಸೂಕ್ತ ವ್ಯವಸ್ಥೆಯಿದ್ದಾಗ ದ್ವಿಚಕ್ರ ವಾಹನಗಳ ಅವಶ್ಯಕತೆ ದೂರದ ಪ್ರಯಾಣಕ್ಕೆ ಅಗತ್ಯವಿಲ್ಲ.ಆದರೂ ಸಾರ್ವಜನಿಕರು ತಮ್ಮ ಸಾರ್ವಜನಿಕ ಸಾರಿಗೆ ತ್ಯಜಿಸಿ ಸ್ವಯಂ ಚಾಲಿತ ದ್ವಿಚಕ್ರ ವಾಹನಗಳ ಬಳಸಿ ಅಪಘಾತಗಳಿಗೆ ಸಿಲುಕಿ ಪ್ರಾಣಕ್ಕೆ ಕುತ್ತು ತಂದು ಕೊಳ್ಳುತ್ತಿದ್ದಾರೆ .

    ಅವಶ್ಯಕವಾಗಿ ತುರ್ತಾಗಿ ಅಗತ್ಯವಾಗಿ ಅನಿವಾರ್ಯವಿದ್ದಾಗ ದ್ವಿಚಕ್ರವಾಹನ ಬಳಸಿ ತುರ್ತು ಪರಿಸ್ಥಿತಿಯಲ್ಲಿ ಉಪಯೋಗಿಸಿಕೊಳ್ಳಲಿ ಆದರೆ ಸೂಕ್ತ ಸಮಯದಲ್ಲಿ ಅನಗತ್ಯವಾಗಿ ಬಳಸಿ ತೊಂದರೆಗೆ ತಾವು ಸಿಲುಕುವುದು ಅಲ್ಲದೇ ಬೇರೆಯವರನ್ನು ಸಿಲುಕಿಸುವುದು ತಪ್ಪು.

    ಒಂದು ಗ್ರಾಮದಲ್ಲಿ ಒಂದು ಬಡ ಕುಟುಂಬ ವಾಸವಿರುತ್ತದೆ. ಆ ಕುಟುಂಬ ಉದ್ಯೋಗ ಹರಿಸಿ ಬೆಂಗಳೂರಿನಲ್ಲಿ ನೆಲೆಸಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾರೆ.ಕಾಲ ಕಳೆದಂತೆ ಎಲ್ಲಾ ಉದ್ಯೋಗ ನಂಬಿಕೊಂಡು ಇಲ್ಲಿಯೇ ದುಡಿದು ಬದುಕು ಕಟ್ಟಿಕೊಳ್ಳುವ ಸಲುವಾಗಿ ಒಂದೆರಡು ವರ್ಷಗಳು ಕಳೆಯಿತು. ನಾಲ್ಕು ಐದು ಜನರಿದ್ದ ಈ ಕುಟುಂಬ ಒಂದು ವರ್ಷ ದುಡಿಮೆಯಲ್ಲಿ ಕೊಂಚ ಆರ್ಥಿಕವಾಗಿ ಮೇಲೆ ಬರಲು ಪ್ರಾರಂಭಿಸಿತು.

    ಕೊಂಚ ದುಡ್ಡು ಕಂಡ ಕುಟುಂಬ ಊರು ಎನ್ನದೇ ದುಡಿಮೆಯೇ ನಮ್ಮ ಜೀವನ ಎಂದು ಸತತ ದುಡಿಮೆಯತ್ತ ಕುಟುಂಬ ಸದಸ್ಯರು ಎಲ್ಲರೂ ವಾಲಿಬಿಟ್ಟರು. ದಿನ ಕಳೆದಂತೆ ಮನಸ್ಸು ಸಿಟಿ ಬದುಕಿಗೆ ಎಳೆಯಲು ಆರಂಭಿಸಿತು. ಬೆಳೆಯುವ ಜಗತ್ತಿನಲ್ಲಿ ನಾನು ಕೂಡ ಇತರರಂತೆ ಬಾಳಬೇಕು ಮೆರೆಯಬೇಕು ಎನ್ನುವ ತುಡಿತ ಮನದಲ್ಲಿ ಬಿದ್ದು ದುಡಿದ ಮೂರು ಕಾಸಿನಲ್ಲಿ ದ್ವಿಚಕ್ರಕೊಳ್ಳುತ್ತಾರೆ.

    ದ್ವಿಚಕ್ರ ವಾಹನಕೊಂಡು ಕಷ್ಟ ಸುಖ ತುರ್ತು ಅನಿವಾರ್ಯ ಆಗತ್ಯವಾಗಿ ಬೇಕಾದ ಸಂದರ್ಭಗಳಲ್ಲಿ ಬಳಸಿಕೊಳ್ಳಬೇಕಾದ ವಾಹನವನ್ನು ವೀಲ್ ಮಾಡುವುದಕ್ಕಾಗಿ ಬೇಕಾಬಿಟ್ಟಿ ಚಲಾಯಿಸುವುದಕ್ಕೆ ವೇಗಮಿತಿಮೀರಿ ಚಲಿಸಿ ದುರುಪಯೋಗ ಪಡಿಸಿಕೊಂಡು ಅಪಘಾತದಲ್ಲಿ ಬದುಕಿನ ಸಂತೆ ಮೂರೇ ದಿನಕ್ಕೆ ಮುಗಿಸಿ ಹೆತ್ತವರ ಸಾಕುವ ಜವಬ್ದಾರಿ ಮಡದಿ ಮಕ್ಕಳು ಅಣ್ಣ ತಂಗಿ ನೋಡಿಕೊಳ್ಳವ ಜವಬ್ದಾರಿಗೆ ವಿರಾಮವಿಟ್ಟು ಹೋದರೆ ನಂಬಿಕೂತ ಕುಟುಂಬಗಳ ಗತಿ ಏನು ? ನಿಮ್ಮ ಆಡಂಬರದ ಸವಾರಿ ನಿಮ್ಮ ಬೇಕಾಬಿಟ್ಟಿ ಚಾಲನೆ ಆಗತ್ಯವಿತ್ತೆ ? ಬೆಂಗಳೂರಿನಂತ ಮುಂದುವರೆದ ನಗರಗಳಲ್ಲಿ ನಿತ್ಯ ಕಛೇರಿ ಕಂಪನಿ ಕರ್ತವ್ಯಗಳಿಗೆ ತೆರಳಲು ಕ್ಷಣಕೊಂದು ಬಸ್ಸು ಸೇವೆ ಒದಗಿಸುವ ಸಾರ್ವಜನಿಕ ಸಾರಿಗೆ ಬಳಸುವುದು ಉತ್ತಮ. ಸೂಕ್ತ ಶಿಸ್ತು ಬದ್ಧ ಜೀವನದಲ್ಲಿ ಬೈಕ್ ಬಳಸಿ ಅರ್ಧ ಗಂಟೆ ಪ್ರಯಾಣಿಸುವ ಮಾರ್ಗಕ್ಕೆ ಬೇಗನೇ ತಯಾರಿಯಾಗಿ ಹತ್ತು ನಿಮಿಷ ಮುಂಚಿತವಾಗಿ ಬಸ್ಸು ಬಳಸಿ ಮುಕ್ಕಾಲು ಗಂಟೆ ಪ್ರಯಾಣ ಬಳಸುವುದು ಒಳಿತಲ್ಲವೇ ಇಂತಹ ಎಲ್ಲಾ ಉಳಿತಾಯ ನಮ್ಮ ಬದುಕಿಗೆ ವರಮಾನವೇ ಹೊರತು ವ್ಯಯವಲ್ಲ. ಅನಿವಾರ್ಯ ತಡವಾದ ದಿನದಂದು ಬೈಕ್ ಬಳಸಿ ನಿಧಾನವಾಗಿ ಕಛೇರಿ ತಲುಪಿ ಮತ್ತೇ ನಿಧಾನವಾಗಿ ಮರಳಿ ಮನೆ ತಲುಪಿ ಅಪರೂಪಕೊಮ್ಮೆ ಬೈಕ್ ಬಳಸಿದರೇ ಜೀವನ ಎಷ್ಟು ಭದ್ರವಾಗಿ ಜೀವ ಎಷ್ಟು ಜೋಪಾನವಾಗಿ ಇಡಬಹುದು ಅಲ್ಲವೇ.

    ಇತ್ತೀಚೆಗೆ ಅತಿವೇಗದ ಚಾಲನೆ ಪ್ಯಾಷನ್ ಆಗಿಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಿನ ಹುಡುಗರವರೆಗೂ ವೀಲಿಂಗ್ ಎಂಬಾ ಪುಂಡಾಟ ಇತ್ತೀಚೆಗೆ ಹೆಚ್ಚಾಗಿತ್ತು. ಇದರಿಂದ ತಾವು ತೊಂದರೆಗೆ ಸಿಲುಕುವುದು ಅಲ್ಲದೇ ರಸ್ತೆ ಬದಿ ಓಡಾಡುವ ಪಾದಚಾರಿಗಳಿಗೆ ಗುದ್ದಿ ಅವರನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ.

    ಹೆದ್ದಾರಿಗಳಲ್ಲಿ ಅತಿಯಾದ ವೇಗದ ಸವಾರಿ ಚಾಲನೆಯ ಸಂಧರ್ಭದಲ್ಲಿ ಮಧ್ಯಪಾನ ಧೂಮಪಾನ ಪುಂಡಾಟಗಳು ನಿಲ್ಲಿಸಿ ಕುಟುಂಬ ಜೀವ ಭವಿಷ್ಯ ದೃಷ್ಟಿಯಿಂದ ನಿಮಗಾಗಿ ಅಲ್ಲದಿದ್ದರೂ ನಿಮ್ಮ ನಂಬಿರುವ ಕುಟುಂಬ ಅಣ್ಣ ತಮ್ಮ ಅಕ್ಕ ತಂಗಿ ಮಡದಿ ಮಕ್ಕಳಿಗಾಗಿ ಅರಿತು ವಾಹನಗಳು ಚಲಾಯಿಸಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link